Advertisement
ಬಾಲಕಿ ನಾಪತ್ತೆಉಪ್ಪಿನಂಗಡಿ: ಇಲ್ಲಿನ ಮುಸ್ತಾಫ ಎಂಬವರ ಮಗಳು ಫಾತಿಮಾತ್ ಶೌಹಾನಾ (17) ಅಗಸ್ಟ್ 22ರಿಂದ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ರಾತ್ರಿ ಊಟ ಮುಗಿಸಿ ತಾಯಿಯೊಂದಿಗೆ ಮಲಗಿದ್ದವಳು ಮುಂಜಾನೆ ಎದ್ದು ನೋಡುವಾಗ ನಾಪತ್ತೆಯಾಗಿದ್ದು, ಆಕೆ ಉಪಯೋಗಿಸುವ ಮೊಬೈಲ್ ಕೂಡಾ ನಾಪತ್ತೆಯಾಗಿರುತ್ತದೆ. ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿದ್ದು, ಹುಡುಕಾಟ ನಡೆಸಿದರೂ ಪತ್ತೆಯಾಗಿರುವುದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲಿಸರು ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.