ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಮವಾರದ ಪಂದ್ಯದಲ್ಲಿಯೂ ಸೋಲನುಭವಿಸಿದೆ. ಹೈದರಾಬಾದ್ ವಿರುದ್ಧ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ರನ್ ಮಳೆ ಹರಿದಿತ್ತು. ಉಭಯ ತಂಡಗಳೂ ದಾಖಲೆಯ ಮೊತ್ತ ಕಲೆ ಹಾಕಿದ್ದವು.
ಆದರೆ ಪಂದ್ಯಕ್ಕೂ ಮೊದಲು ಆರ್ ಸಿಬಿಯ ನಾಯಕ ಫಾಫ್ ಡುಪ್ಲೆಸಿಸ್ ಅವರು ಅವರ ನಡೆಯೊಂದು ಭಾರಿ ಗಮನ ಸೆಳೆದಿದೆ. ಅವರು ಮುಂಬೈ ವಿರುದ್ಧದ ಪಂದ್ಯದಲ್ಲಿ ನಡೆದ ಟಾಸ್ ಕಳ್ಳಾಟದ ಬಗ್ಗೆ ಫಾಫ್ ಅವರು ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಗೆ ವಿವರಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ- ಆರ್ ಸಿಬಿ ಪಂದ್ಯದಲ್ಲಿ ರೆಫರಿ ಮತ್ತು ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಟಾಸ್ ನ ಫಲಿತಾಂಶವನ್ನು ಬದಲಾಯಿಸಿದ್ದಾಗಿ ಆರೋಪ ಕೇಳಿಬಂದಿದೆ. ಶ್ರೀನಾಥ್ ನಾಣ್ಯವನ್ನು ತೆಗೆದುಕೊಳ್ಳುವಾಗ ಅದನ್ನು ತಿರುಗಿಸುವ ಮೂಲಕ ಮುಂಬೈ ಇಂಡಿಯನ್ಸ್ ಗೆ ಅನುಕೂಲ ಮಾಡಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಇದೀಗ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೂ ಮೊದಲು ಫಾಫ್ ಅವರು ಕಮಿನ್ಸ್ ಗೆ ಮುಂಬೈ ಪಂದ್ಯದ ಟಾಸ್ ಪ್ರಕ್ರಿಯೆಯನ್ನು ಸನ್ನೆ ಮೂಲಕ ತೋರಿಸಿದ್ದಾರೆ. ಇದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.