Advertisement

36,000 ಸರಕಾರಿ ಹುದ್ದೆ ಭರ್ತಿ ಪ್ರಸ್ತಾವಕ್ಕೆ ಫ‌ಡ್ನವೀಸ್‌ ಅನುಮತಿ

04:45 PM May 16, 2018 | Team Udayavani |

ಮುಂಬಯಿ : ರಾಜ್ಯ ಸರಾರದ ವಿವಿಧ ಇಲಾಖೆಗಳಲ್ಲಿ, ವಿಶೇಷವಾಗಿ ಕೃಷಿ ಮತ್ತು ಗ್ರಾಮಾಭಿವೃದ್ಧಿ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ 36,000 ಹುದ್ದೆಗಳನ್ನು ಭರ್ತಿ ಮಾಡುವ ಪ್ರವಾಸ್ತವಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರಿಂದು ಅನುಮತಿ ನೀಡಿದರು.

Advertisement

ರಾಜ್ಯ ಬಜೆಟ್‌ ಮಂಡನೆ ಅಧಿವೇಶನದಲ್ಲಿ ಸಿಎಂ ಫ‌ಡ್ನವೀಸ್‌ ಅವರು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಎರಡು ಹಂತಗಳಲ್ಲಿ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ 72,000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದ್ದರು. ಆ ಪ್ರಕಾರ ಇದೀಗ ಮೊದಲ ಹಂತದಲ್ಲಿ 36,000 ಹುದ್ದೆಗಳ ಭರ್ತಿ ಪ್ರಸ್ತಾವಕ್ಕೆ ಅವರು ಅನುಮೋದನೆ ನೀಡಿದ್ದಾರೆ. 

ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸರಕಾರಿ ಯಂತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ  ಇದೀಗ ಮೊದಲ ಹಂತದಲ್ಲಿ  36,000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next