Advertisement

ಆದೇಶ ಹಿಂಪಡೆಯಲು ಫ‌ಡ್ನವೀಸ್‌ ಮನವಿ

05:28 PM Jul 18, 2020 | Team Udayavani |

ಮುಂಬಯಿ, ಜು. 17: ರಾಜ್ಯದ 14,000 ಗ್ರಾಮ ಪಂಚಾಯಿತಿಗಳಿಗೆ ನಿರ್ವಾಹಕರನ್ನು ನಾಮ ನಿರ್ದೇಶನ ಮಾಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಇತ್ತೀಚೆಗೆ ನೀಡಿರುವ ಆದೇಶವನ್ನು ಹಿಂತೆಗೆದು ಕೊಳ್ಳುವಂತೆ ವಿಪಕ್ಷದ ನಾಯಕ ದೇವೇಂದ್ರ ಫ‌ಡ್ನವೀಸ್‌ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರನ್ನು ಕೋರಿದ್ದಾರೆ.

Advertisement

ಕೋವಿಡ್ ಸಂದರ್ಭ ರಾಜಕೀಯವಾಗಿ ಮೇಲುಗೈ ಸಾಧಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸುಮಾರುಶೇ. 50ರಷ್ಟು ಗ್ರಾಮ ಪಂ.ಗಳು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದು, ಈ ವರ್ಷದ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿವೆ. ರಾಜಕೀಯ ಆಡಳಿತಗಾರರ ನಾಮನಿರ್ದೇಶನವು ಹಳ್ಳಿಗಳಲ್ಲಿ ಸ್ಥಳೀಯ ಸ್ವ-ಸರಕಾರದ ಪ್ರಜಾಪ್ರಭುತ್ವ ಸಂಪ್ರದಾಯವನ್ನು ನಾಶಮಾಡುವ ಪ್ರಯತ್ನವಾಗಿದೆ ಎಂದು ಫ‌ಡ್ನವೀಸ್‌ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಸರಪಂಚರು ಈ ನಿರ್ಧಾರಕ್ಕೆ ವಿರೋಧಿಯಾಗಿದ್ದಾರೆ ಮತ್ತು ಗ್ರಾಮ ಮುಖ್ಯಸ್ಥರ ಸಂಘಟನೆಯಾದ ಅಖೀಲ ಭಾರತೀಯ ಸರಪಂಚ್‌ ಪರಿಷತ್‌ ಸರಕಾರದ ನಿರ್ಣಯದ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದ್ದಾರೆ ಎಂದು ಫ‌ಡ್ನವೀಸ್‌ ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆ ರಾಜ್ಯ ಚುನಾವಣ ಆಯೋಗವು ಗ್ರಾಮ ಪಂ.ಗೆ ಚುನಾವಣೆಯನ್ನು ಮುಂದೂಡಿದ್ದು, ಅದರ ನಿಯಮಗಳು ಮಾರ್ಚ್‌ ಅಥವಾ ನವೆಂಬರ್‌ ನಡುವೆ ವರ್ಷಾಂತ್ಯಕ್ಕೆ ಕೊನೆಗೊಳ್ಳುತ್ತವೆ. ಮತದಾನದವರೆಗೂ ಈ ಸಂಸ್ಥೆಗಳ ನಿರ್ವಾಹಕರನ್ನು ನೇಮಕ ಮಾಡಲು ಎಸ್‌ ಇಸಿ ಶಿಫಾರಸು ಮಾಡಿತ್ತು. ಈ ಚುನಾವಣೆಗಳು ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧಿಸದಿದ್ದರೂ, ಚುನಾಯಿತ ಗ್ರಾಮ ಪಂ.ಗಳು ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿವೆ. ಮುಂಬರುವ ಚುನಾವಣೆಯಲ್ಲಿ ಎಂವಿಎ ಪಕ್ಷಗಳು ಪಂ. ಮೇಲೆ ಹಿಡಿತ ಸಾಧಿಸಿ ಬಿಜೆಪಿಯನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next