ಮುಧೋಳ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲಿಕರು ಜಿಲ್ಲಾಧಿಕಾರಿ ನೀಡಿದ ಸೂಚನೆಯೂ ಪಾಲಿಸದೇ ರೈತರಿಗೆ ಅನ್ಯಾಯ ಮುಂದುವರಿಸಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿರೈತರ ಸಮಸ್ಯೆ ಕುರಿತು ಚರ್ಚಿಸಲಾಯಿತು. ಬಳಿಕಕಬ್ಬು ಬೆಳೆಗಾರರ ಸಭೆಯನ್ನು ಡಿ.2ರಂದು ಸಂಜೆ 4ಕ್ಕೆಮತ್ತೂಮ್ಮೆ ನಡೆಸಲು ತೀರ್ಮಾನಿಸಲಾಯಿತು.
2016-17, 2017-18ನೇ ಸಾಲಿನ ಬಾಕಿ ಪಾವತಿ ಕುರಿತು ನ. 8ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನಡೆದ ಸಭೆಯ ಪ್ರಕಾರ ಮುಚ್ಚಳಿಕೆ ಪತ್ರದಂತೆ ಮಾರ್ಚ್ ಒಳಗಾಗಿ ನೀಡಬೇಕಾದ ಬಾಕಿಯನ್ನುಉಳಿಸಿಕೊಂಡಿರುವ ಕಾರ್ಖಾನೆಗಳು 2016-17ನೇಸಾಲಿನ ಕಬ್ಬಿನ ಬಾಕಿಯನ್ನು ಸಂಪೂರ್ಣವಾಗಿ ನೀಡಬೇಕು. 2017-18ನೇ ಸಾಲಿಗೆ ಕಾರ್ಖಾನೆಪ್ರಾರಂಭಿಸುವ ಮುನ್ನ, ಬಾಕಿಯಲ್ಲಿ ಶೇ. 50 ನೀಡಿಯೇ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ಆರಂಭಿಸಬೇಕು. ಕಾರ್ಖಾನೆ ಆರಂಭಗೊಂಡ15 ದಿನಗಳಲ್ಲಿ ಉಳಿದ ಬಾಕಿ ಕೊಡಬೇಕು ಎಂದು ಸ್ವತಃ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಇದಕ್ಕೆ ಎಲ್ಲ ಕಾರ್ಖಾನೆಯವರು ಒಪ್ಪಿಗೆ ನೀಡಿ, ಕಾರ್ಖಾನೆಗಳ ಕಬ್ಬು ನುರಿಸುವಿಕೆ ಆರಂಭಿಸಿದ್ದರು. ಶೇ. 50 ಬಾಕಿ ನೀಡಿದ್ದು, ಉಳಿದ ಕಬ್ಬಿನ ಬಾಕಿಯನ್ನು ಈ ವರೆಗೆ ಯಾವ ಕಾರ್ಖಾನೆಗಳೂ ನೀಡಿಲ್ಲ. ಆ ಮೂಲಕ ಜಿಲ್ಲಾಧಿಕಾರಿಗಳ ಸೂಚನೆ ಉಲ್ಲಂಘಿಸಿವೆ ಎಂದುರೈತ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.
2018-19 ಮತ್ತು ಪ್ರಸಕ್ತ 2019-20 ನೇ ಸಾಲಿನ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ದರದ ಕುರಿತುಸರ್ಕಾರ ನಿರ್ದೇಶನ ನೀಡಿ 10 ದಿನ ಕಳೆದಿವೆ. ಆದರೂ, ಕಾರಖಾನೆಗಳು ಕಳೆದ ಸಾಲಿನ ಎಫ್‌ಆರ್‌ಪಿಯಲ್ಲಿ ಹೆಚ್ಚುವರಿಯಾಗಿ ವಜಾಗೊಳಿಸಿದ್ದ ಕಟಾವು ಮತ್ತು ಸಾಗಾಣಿಕೆ ದರದಲ್ಲಿ ರೈತರಿಗೆ ಕೋಡಬೇಕಾದಬಾಕಿ ಬಗ್ಗೆ ಮತ್ತು ಈ ವರ್ಷ ವಜಾಗೊಳಿಸುವ ಕಟಾವು ಮತ್ತು ಸಾಗಾಣಿಕೆ ದರದ ಕುರಿತು ಕಾರ್ಖಾನೆಗಳು ನಿರ್ಧಾರ ಕೈಗೊಳ್ಳುತ್ತಿಲ್ಲ. ಆದ್ದರಿಂದಈ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಲು ಡಿ. 2ರಂದು ಸಂಜೆ 4ಕ್ಕೆ ಕಬ್ಬು ಬೆಳೆಗಾರರ ಸಭೆ ನಡೆಸಿ,ರೈತರ ತೀರ್ಮಾನದಂತೆ ಮುಂದಿನ ಹೋರಾಟ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ರೈತ ಮುಖಂಡರಾದ ಗೊವಿಂದಪ್ಪಗುಜ್ಜನ್ನವರ, ರಂಗನಗೌಡ ಪಾಟೀಲ, ರಾಮಕೃಷ್ಣಬುದ್ನಿ, ಲಕ್ಷ್ಮಣ ಹುಚರಡ್ಡಿ, ದುಂಡಪ್ಪ ಲಿಂಗರಡ್ಡಿ, ಸಂಗಪ್ಪ ದೇಸಾಯಿ, ಪಾಂಡಪ್ಪ ಮಂಟೂರ, ಬಸವಂತ ಕಾಟೆ, ದುಂಡಪ್ಪ ಯರಗಟ್ಟಿ, ರಮೇಶನಾಯಿಕ, ಸದಾಶೀವ ಯಡಹಳ್ಳಿ, ರಾಜೆಂದ್ರ ಚಂದನಶಿವ, ಯಲ್ಲಪ್ಪ ಮುನವಳ್ಳಿ, ತಿಮ್ಮಣ್ಣ ನಾಯಿಕ, ಬಂಡು ಘಾಟಗೆ, ಗೋವಿಂದಗೌಡ ಪಾಟೀಲ, ವಿಶ್ವನಾಥ ಉದಗಟ್ಟಿ ಪಾಲ್ಗೊಂಡಿದ್ದರು