Advertisement

ಆಧುನಿಕ ಯುಗದ ಗ್ರಾಫಿಕ್ಸ್ ಗೆ ಬಲಿಪಶುವಾಗುವ ಭಯ ಕಾಡುತ್ತಿದೆ: ಸಿ.ಪಿ. ಯೋಗೇಶ್ವರ್

12:27 PM Mar 07, 2021 | Team Udayavani |

ಮೈಸೂರು: ಆಧುನಿಕ ಯುಗದ ಗ್ರಾಫಿಕ್ಸ್ ಗೆ ಬಲಿಪಶು ಆಗುವ ಭಯ ನಮಗೆ ಕಾಡುತಿದೆ. ಇದು ಗ್ರಾಫಿಕ್ಸ್ ಯುಗ ಅದಕ್ಕಾಗಿ ಮಾನ ಮರ್ಯಾದೆಗೆ ಅಂಜಿದ್ದೇವೆ ಎಂದು ಸಚಿವ ಸಿ ಪಿ ಯೋಗೇಶ್ವರ್ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ನ್ಯಾಯಾಲಯದ ಮೊರೆ ಹೋಗಿರುವ ಸಂಬಂಧ ಮಾತನಾಡಿ, ದೃಶ್ಯ ಮಾಧ್ಯಮಗಳನ್ನು ತಿರುಚುವ ಧ್ವನಿ‌ ನೀಡುವ ಕೆಲಸ ಆಗುತ್ತಿದೆ. ಗ್ರಾಫಿಕ್ ಮೂಲಕ ಕೈ ಕಾಲು ತಲೆ ಕತ್ತರಿಸಿದಂತೆ ಮಾಡಬಹುದು. ಸಿನಿಮಾದಿಂದ ಬಂದ ನನಗೆ ಅದೆಲ್ಲಾ ಗೊತ್ತಿದೆ. ಮಾನ ಮರ್ಯಾದೆ ಗೌರವದ ಕಾರಣಕ್ಕಾಗಿ ಕೋರ್ಟ್ ಮೊರೆ ಹೋಗಿದ್ದೇವೆ ಎಂದರು.

ಸುಳ್ಳು ಬೇಗ ಹರಡುತ್ತದೆ, ಅದು ಸುಳ್ಳು ಎಂದು ಸಾಬೀತಾಗಲು ಸಮಯ ಬೇಕು. ಆದರೆ ಮಾಧ್ಯಮದಲ್ಲಿ ಬಂದ ಕೂಡಲೇ ಅದನ್ನು ಜನ ನಂಬುತ್ತಾರೆ. ಆದರೆ ಸತ್ಯ ಹೊರಬರುವುದು ಪೊಲೀಸ್ ತನಿಖೆ ನ್ಯಾಯಲಯದ ಮೂಲಕ. ಅದಕ್ಕಾಗಿ ನಾವೆಲ್ಲಾ ಭಯಪಡುತ್ತಿದ್ದೇವೆ ಎಂದು ಸಚಿವ ಸಿ ಪಿ ಯೋಗೇಶ್ವರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next