Advertisement
ಬೆಳ್ತಂಗಡಿ-ಬಂಟ್ವಾಳ ತಾಲೂಕಿನ ಗಡಿಭಾಗವಾಗಿರುವ ಪುಂಜಾಲಕಟ್ಟೆಯಲ್ಲಿ 1927ರಲ್ಲಿ ಸ್ಥಾಪನೆಯಾದ ಈ ಶಾಲೆಯು 2004ರಲ್ಲಿ ಅಮೃತ ಮಹೋತ್ಸವವನ್ನು ಆಚರಿಸಿ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಈ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡಿದೆ. ವಿಶಾಲ ಮೈದಾನದ ಪ್ರದೇ ಶದಲ್ಲಿ 1ರಿಂದ 8ನೇ ತರಗತಿಯವರೆಗೆ ಪ್ರಾಥಮಿಕ ವಿಭಾಗವಾಗಿದ್ದು, ಇದೇ ಸಂಕೀರ್ಣದಲ್ಲಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ತರಗತಿಗಳನ್ನು ಹೊಂದಿದೆ.
Related Articles
Advertisement
ಶಾಲೆ ಹಳೆಯ ಕಟ್ಟಡದಲ್ಲಿ 1ರಿಂದ 7ನೇ ತರಗತಿಗಳಿದ್ದು, ಕಟ್ಟಡ ಶಿಥಿಲಗೊಳ್ಳುತ್ತಿದೆ. ಪ್ರಸ್ತುತ ಪ್ರಾಥ ಮಿಕ ವಿಭಾಗದಲ್ಲಿ 764 ವಿದ್ಯಾ ರ್ಥಿಗಳಿದ್ದು, ಆಂಗ್ಲ ಮಾಧ್ಯಮ ವಿಭಾಗವಿದೆ. ಎಲ್‌ಕೆಜಿ, ಯುಕೆಜಿಗೆ ದಾನಿಗಳ ಸಹಕಾರದಿಂದ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಆದರೆ ಪ್ರಾಥಮಿಕ ವಿಭಾಗಕ್ಕೆ ನೂತನ ಕಟ್ಟಡದ ನಿರೀಕ್ಷೆಯಲ್ಲಿದೆ. ಕನ್ನಡ-ಆಂಗ್ಲ ಮಾಧ್ಯಮ ತರಗತಿಗಳಿರುವುದರಿಂದ ಶಿಕ್ಷಕರ ನೇಮಕಾತಿಯಾಗಬೇಕಾಗಿದೆ. ಮುಖ್ಯ ಶಿಕ್ಷಕ, ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಈಗಾಗಲೇ ಬಸ್‌ನ ವ್ಯವಸ್ಥೆ, ಎರಡು ಕೊಠಡಿಗಳ ನಿರ್ಮಾಣ, ಗೌರವ ಶಿಕ್ಷಕಿಯರ ನೇಮಕ ಸಹಿತ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ವಿವಿಧ ಬೇಡಿಕೆಗಳ ಬಗ್ಗೆ ಸರಕಾರಕ್ಕೂ ಮನವಿ ಮಾಡಲಾಗಿದೆ.
ಪುಂಜಾಲಕಟ್ಟೆ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ಸರಕಾರದ ಅನುದಾನದೊಂದಿಗೆ ಜನ ಪ್ರತಿನಿಧಿಗಳ ನೆರವಿನಿಂದ, ದಾನಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಬಾರಿ ಆಂಗ್ಲ ಮಾಧ್ಯಮ ದೊಂದಿಗೆ ಕನ್ನಡ ಮಾಧ್ಯಮ ತರಗತಿಗೂ ಉತ್ತಮ ದಾಖಲಾತಿಯಾಗಿದೆ. ಅಗತ್ಯ ಸವಲತ್ತು ಗಳನ್ನು ಪೂರೈಸಿದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ. –ಮೋನಪ್ಪ ಕೆ., ಮುಖ್ಯ ಶಿಕ್ಷಕರು, ಪ್ರಾಥಮಿಕ ವಿಭಾಗ.
ಈ ವರ್ಷ ನಮ್ಮ ಶಾಲೆಗೆ ಅತೀ ಹೆಚ್ಚಿನ ಸಂಖ್ಯೆ ಯಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದು, ಮಕ್ಕಳ ಸಂಖ್ಯೆಗನುಗುಣವಾಗಿ ಸೌಲಭ್ಯಗಳು ಅಗತ್ಯ ವಿದೆ. ಈ ಬಗ್ಗೆ ಸರಕಾರದ ಗಮನಕ್ಕೆ ತಂದಿದ್ದು, ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಪ್ರಸ್ತುತ ಅಭಿವೃದ್ಧಿ ಯೋಜನೆಗಳನ್ನು ನಡೆ ಸುತ್ತಿದ್ದು, ಇನ್ನಷ್ಟು ಯೋಜನೆಗಳು ಅನುಷ್ಠಾನಗೊಳಿಸಲು ದಾನಿಗಳು ಹಾಗೂ ಹಳೇ ವಿದ್ಯಾರ್ಥಿಗಳ ಸಹಕಾರದ ಅಗತ್ಯ. –ಕೆ.ಜಯರಾಮ ಶೆಟ್ಟಿ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ.
-ರತ್ನದೇವ್ ಪುಂಜಾಲಕಟ್ಟೆ