ಮಾನ್ವಿ: ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದ ಗ್ರಾಮಗಳಲ್ಲಿ ಪಿಡಬ್ಲ್ಯೂಡಿ, ಜಿಪಂ, ಪಿಆರ್‌ಡಿ, ಆರ್‌ಡಬ್ಲ್ಯೂಎಸ್ ಇಲಾಖೆಯ 12.21 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ದದ್ದಲ್ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಕ್ಷೇತ್ರದ ಕುರ್ಡಿ ಜಿಪಂ ಕ್ಷೇತ್ರ ವ್ಯಾಪ್ತಿಯ ಚಹಾಪುಡಿ ಕ್ಯಾಂಪ್‌ನಲ್ಲಿ ಟಿಎಸ್‌ಪಿ ಅನುದಾನದ 17 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಸೀಕಲ್, ಸಾದಾಪುರು, ಉಮಳಿಪನ್ನೂರು, ರಾಜಲಬಂಡಾ, ಜೂಕೂರು, ತಿಮ್ಮಾಪುರು, ಹರನಹಳ್ಳಿ ಗ್ರಾಮಗಳಲ್ಲಿ 88 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಹರನಹಳ್ಳಿ, ಶಾಸ್ತ್ರೀಕ್ಯಾಂಪ್, ಉಮಳಿಪನ್ನೂರು, ಗೋರ್ಕಲ್‌ನಲ್ಲಿ 77 ಲಕ್ಷ ವೆಚ್ಚದಲ್ಲಿರಸ್ತೆ, ಲೋಕೋಪಯೋಗಿ ಇಲಾಖೆ ಅನುದಾನದ 1.35 ಕೋಟಿ ವೆಚ್ಚದಲ್ಲಿ ಸಾದಾಪುರದಿಂದ ಉಮಳಿಪನ್ನೂರು, ಹರನಹಳ್ಳಿ, ರಾಜಲಬಂಡಾ ಗ್ರಾಮಗಳ ರಸ್ತೆ ಡಾಂಬರೀಕರಣ ಹಾಗು ಉಮಳಿಪನ್ನೂರುನಿಂದ ದದ್ದಲ್‌ವರಗೆ 1.64 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಆರ್‌ಡಬ್ಲ್ಯೂಎಸ್ ಯೋಜನೆಯ 40 ಲಕ್ಷ ವೆಚ್ಚದಲ್ಲಿ ಗೋರ್ಕಲ್ ಮತ್ತು ಅಡವಿಖಾನಾಪುರು, ರಾಜೊಳ್ಳಿ, ಜೂಕೂರು, ಕಂಬಳೆತ್ತಿ, ವಲ್ಕಂದಿನ್ನಿ ಗ್ರಾಮಗಳಿಗೆ ನದಿಯಿಂದ ಕೆರೆಗೆ ನೀರು ತುಂಬಿಸಿ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ವಹಿಸಲಾಗಿದೆ. ಸಾದಾಪುರು ಮತ್ತು ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸೀಕಲ್, ಕೊರವಿ, ಬಾಪುರು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕೆಕೆಆರ್‌ಡಿಬಿ 1.50 ಕೋಟಿ ಅನುದಾನಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದ್ದು ಕುಡಿಯುವ ನೀರಿನ ಸರಬರಾಜಿಗೆ ಒಟ್ಟು 5 ಕೋಟಿ ವ್ಯಯ ಮಾಡಲಾಗುತ್ತದೆ ಎಂದರು.
ಸುಂಕೇಶ್ವರ ಗ್ರಾಮದ ಜನರಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಲು ಟೆಂಡರ್ ಪ್ರಕ್ರಿಯೆ ನಡೆದಿದೆ. ಕೊರವಿನಲ್ಲಿ 3, ಹರನಹಳ್ಳಿ 1, ಬೈಲ್‌ವುರ್ಚೆಡ್ 4 ಕೊಠಡಿ ಕಾಮಗಾರಿ ಪ್ರಗತಿಯಲ್ಲಿವೆ. ಮುಖ್ಯಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ರಾಜೊಳ್ಳಿ ಗ್ರಾಮದಲ್ಲಿ 1 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ಹಾಗೂ ಆರೋಲಿ ಗ್ರಾಮದ ಪ್ರಗತಿ ಕಾಲೋನಿಯಲ್ಲಿ 84 ಲಕ್ಷ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ರಾಯಚೂರು ಗ್ರಾಮೀಣ ಕ್ಷೇತ್ರದನ್ನು ತಮ್ಮನ್ನು ಆಯ್ಕೆ ಮಾಡಿದ ಜನರ ನಿರೀಕ್ಷೆಗೆ ತಕ್ಕಂತೆ ಗ್ರಾಮೀಣ ಭಾಗಕ್ಕೆ ಮೂಲ ಸೌಲಭ್ಯ ಕಲ್ಪಿಸಲು, ಗ್ರಾಮಗಳ ಅಭಿವೃದ್ಧಿಗೆ ಕ್ರಮ ವಹಿಸಿದ್ದಾಗಿ ಹೇಳಿದರು. ಮುಖಂಡರಾದ ಸೋಮಶೇಖರ ಪಾಟೀಲ, ಸಿದ್ದರಾಮಪ್ಪ ಸಾಹುಕಾರ ಚೀಕಲಪರ್ವಿ, ವೆಂಕಟೇಶ ಯಾದವ್, ವಿಶ್ವನಾಥರೆಡ್ಡಿ, ಸಂಜೀವ, ಅಯ್ಯನಗೌಡ, ನರಸಿಂಹ ರಾಜೊಳ್ಳಿ, ನರಸಿಂಹ ಸೀಕಲ್, ಎಇಇಗಳಾದ ಶಿವಪ್ಪ, ರಘುನಾಥ ಇತರರು ಇದ್ದರು.