ದೇವನಹಳ್ಳಿ: ಉಸಿರಾಟದ ಸಮಸ್ಯೆ, ಸೌಮ್ಯಲಕ್ಷಣ,ಸೋಂಕಿಗೆ ಚಿಕಿತ್ಸೆ ನೀಡಲು ಕೇಂದ್ರವನ್ನುವಿನ್ಯಾಸಗೊಳಿಸಲಾಗಿದೆ. ಆಕ್ಸಿಜನ್ ಡಿಲೆವೆರಿ ಸೆಂಟರ್‌ಆಗಿ ಇದನ್ನು ವಿನ್ಯಾಸಗೊಳಿಸಿದ್ದು, ಸರ್ಕಾರಿ ಆಸ್ಪತ್ರೆಗಳಒತ್ತಡವನ್ನು ಕಡಿಮೆ ಮಾಡಿದೆ ಎಂದು ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಫೇರ್‌ಫ್ಯಾಕ್ಸ್ ಫೈನಾನ್ಸಿಯಲ್ ಹೋಲ್ಡಿಂಗ್‌ಲಿಮಿಟೆಡ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಪ್ರತಿಷ್ಠಾನದ ವತಿಯಿಂದ ನಿರ್ಮಿಸಿರುವ 150ಹಾಸಿಗೆಗಳ ಸೌಲಭ್ಯವುಳ್ಳ ಕೋವಿಡ್ ಕೇರ್ ಸೆಂಟರ್‌ಹಾಗೂ ಗ್ರೀನ್ ಕೋ ಸಂಸ್ಥೆಯ ವತಿಯಿಂದ ಸರ್ಕಾರಿಆಸ್ಪತ್ರೆಗಳಲ್ಲಿನ ಉಪಯೋಗಕ್ಕಾಗಿ 200 ಲಾರ್ಜ್‌ಮೆಡಿಕಲ್ ಗ್ರೇಡ್ 10 ಎಲ್ ಪಿಎಂ ಆಮ್ಲಜನಕ ಕಾನ್ಸೆನ್‌ಟ್ರೇಟರ್‌ಗಳನ್ನು ಸ್ವೀಕರಿಸಿ ಮಾತನಾಡಿದರು.ರಾಜ್ಯದಲ್ಲಿ ಕೋವಿಡ್ ಅಲೆಯನ್ನು ತಗ್ಗಿಸಲಿಕ್ಕಾಗಿ ಸರ್ಕಾರ ಸಾಕಷ್ಟು ಪ್ರಯತ್ನಗ ಳನ್ನು ಮಾಡುತ್ತಿದೆ
.ಲಾಕ್‌ಡೌನ್ ನಿಂದಾಗಿ ಸ್ವಲ್ಪಮಟ್ಟಿಗೆ ಕೋವಿಡ್‌ಸೋಂಕಿñ ಪ್ರಕ ರಣಗಳ ಇಳಿಕೆ ಕಂಡು ಬಂದಿದ್ದು, 24 ರ ನಂತರ ಲಾಕ್‌ಡೌನ್ ವಿಸ್ತರಣೆ ಮಾಡುವ ಕುರಿತುಚಿಂತನೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ.ಕೋವಿಡ್ ನಿಯಂತ್ರಣಕ್ಕಾಗಿ ಜನತೆ ಸಹಕಾರ ನೀಡಬೇಕು. ಈಗಾಗಲೇ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು ಅದನ್ನು ಜನರು ಸದುಪಯೋಗಪಡಿಕೊಳ್ಳಬೇಕು ಎಂದರು.
ವಿಮಾನ ನಿಲ್ದಾಣದಲ್ಲಿ ಸೋಂಕಿತರಿಗೆ 150ಹಾಸಿಗೆಗಳ ಕೋವಿಡ್ ಕೇರ್‌ಸೆಂಟರ್ ಮಾಡಿರುವುದುಸಮಾಜಿಕ ಕಳಕಳಿಯ ನಿದರ್ಶನವಾಗಿದೆ. ಗ್ರೀನ್‌ಇಂಡಿಯಾ ಸಂಸ್ಥೆ ಸೇರಿದಂತೆ ಸಂಸ್ಥೆಗಳು ತುರ್ತು ಚಿಕಿತ್ಸೆಗೆಸಹಾಯ ಹಸ್ತು ನೀಡಿವೆ. ಪ್ರತಿಯೊಬ್ಬರೂ ಇದರಸದುಪಯೋಗ ಪಡೆಯಬೇಕು. ಗ್ರೀನ್ ಕೋ ಸಂಸ್ಥೆಯ200 ಲಾರ್ಜ್ ಗ್ರೇಡ್ 10 ಎಲ್‌ಎಂಪಿಎಂ ಆಕ್ಸಿಜನ್‌ಕನ್ವರ್ಟರ್‌ಗಳನ್ನು ಸ್ವೀಕರಿಸಲಾಗಿದ್ದು ಇದರಿಂದ ಸರ್ಕಾರಿಆಸ್ಪತ್ರೆಗಳ ಒತ್ತಡ ಕಡಿಮೆಯಾಗಲಿದೆ. ನೂರಾರುಜೀವಿಗಳನ್ನು ಉಳಿಸಲು ನೆರವಾಗಲಿದೆ.
ಡಾ. ನರೇಶ್‌ಶೆಟ್ಟಿ, ಡಾ.ನಂದಕುಮಾರ್, ಜಯರಾಂ, ಮತ್ತು ಡಾ.ಅಮೆಜಂಡರ್ ಥಾಮಸ್, ಪರಿಣಿತ ವೈದ್ಯರ ಸಮಿತಿ ಈಕೇಂದ್ರ ನಿರ್ವಹಣೆಗೆ ತಾಂತ್ರಿಕ ಸಹಾಯ ಒದಗಿಸಲಿದೆ.ಔಷಧಾಲಯ, ಫೆಥಾಲಜಿ ಘಟಕ, ದಾದಿಯರ ಪ್ರವೇಶ,ವಿಶ್ರಾಂತಿ ಕೊಠಡಿಗಳು, ಭೋಜನಾ ಪ್ರದೇಶ ಮತ್ತುಕುಡಿಯುವ ನೀರಿನ ಘಟಕಗಳನ್ನು ಒಳಗೊಂಡ ಈಕೇಂದ್ರ ಸಜ್ಜಾಗಿದ್ದು ದಿನದ 24 ಗಂಟೆ ತುರ್ತು ಸೇವೆಗೆಸಿದ್ಧವಾಗಿದೆ. ಜೈವಿಕ ತ್ಯಾಜ್ಯಗಳು ಸೇರಿದಂತೆ ತ್ಯಾಜ್ಯಸುರಕ್ಷಿತವಾಗಿ ವಿಲೇವಾರಿ ಮಾಡಲು ಎಲ್ಲ ರೀತಿಯಸಿದ್ಧತೆಗಳನ್ನುಕೈಗೊಂಡಿದ್ದಾರೆ ಎಂದರು.
ಇದೇ ವೇಳೆಯಲ್ಲಿ ಗೃಹ ಸಚಿವ ಬಸವರಾಜ್‌ಬೊಮ್ಮಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್,ಕೆಐಎ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒಹರಿಮರಾರ್ ಗ್ರೀನ್ ಕೋ ಗ್ರೂಪ್ ಸಂಸ್ಥಾಪಕರಾದ ಅನಿಲ್ ಕುಮಾರ್, ಮಹೇಶ್ ಕೊಯ್ಲಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಎಂ. ರವಿಕುಮಾರ್, ಅಪರಜಿಲ್ಲಾಧಿಕಾರಿ ಡಾ.ಜಗದೀಶ್ ಕೆ ನಾಯಕ, ಜಿಲ್ಲಾಆರೋಗ್ಯಾಧಿಕಾರಿ ಡಾ. ಎ ತಿಪ್ಪೆಸ್ವಾಮಿ, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್ ಇತರರಿದ್ದರು.