ರಾಣಿಬೆನ್ನೂರ: ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಎಂದಿಗೂ ಕುಂಠಿತವಾಗಬಾರದು ಎನ್ನುವ ಉದ್ದೇಶದಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಸಹ ಸರ್ಕಾರ ಮತ್ತು ಶಿಕ್ಷಣ ಸಚಿವರು ಸೇರಿ ಕೊಠಡಿಗಳು ಮತ್ತು ಸಂಪನ್ಮೂಲ ಶಿಕ್ಷಕರು ಹಾಗೂ ಅಗತ್ಯ ಎಲ್ಲ ಸೌಲಭ್ಯಗಳನ್ನು ದೊರಕಿಸಲು ನಿರಂತರ ಪ್ರಯತ್ನಿಸುತ್ತಲಿದ್ದಾರೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ತಾಲೂಕಿನ ಮುಷ್ಟೂರು ಸ್ಥಳಾಂತರ ಹೊಸ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಅಗತ್ಯವಿರುವ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮತ್ತು ಹಳೇ ಮುಷ್ಟೂರು ಗ್ರಾಮದಲ್ಲಿನೂತನವಾಗಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿ ಪರಿಪೂರ್ಣವಾಗಿ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿರಬೇಕು. ಇದರಿಂದ ಮಕ್ಕಳ ಮನಸಿನಲ್ಲಿ ಶಿಕ್ಷಣ ಪಡೆಯುವ ಹಂಬಲ ಹೆಚ್ಚಾಗುತ್ತದೆ. ಇದಕ್ಕೆ ನಾಗರೀಕರು ಮತ್ತು ಪಾಲಕರು ಒಗ್ಗಟ್ಟಾಗಿ ತಮ್ಮೂರಿನ ಶಾಲೆಗಳ ಸಮಗ್ರ ಪ್ರಗತಿ ಮತ್ತು ಅಭಿವೃದ್ಧಿಗೆ ಶ್ರಮಿಸಲು ಮುಂದಾಗಬೇಕು ಅಂದಾಗ ಮಾತ್ರ ಆ ಗ್ರಾಮಾಂತರ ಪ್ರದೇಶಗಳು ಶೈಕ್ಷಣಿಕ ವಾತಾವರಣದಲ್ಲಿ ಬೆಳೆದು ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಜಿಪಂ ಉಪಾಧ್ಯಕ್ಷ ಗಿರಿಜವ್ವ ಬ್ಯಾಲದಹಳ್ಳಿ, ನಗರಯೋಜನಾ ಪ್ರಾಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಮಂಜುನಾಥ ಓಲೇಕಾರ, ತಾಪಂ ಸದಸ್ಯ ಕರಿಯಪ್ಪ ತೋಟಗೇರ, ಎಸ್‌ಡಿಎಂಸಿ ಅಧ್ಯಕ್ಷ ರಾಜು ಓಲೇಕಾರ, ಬಿಇಒ ಎನ್. ಶ್ರೀಧರ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪವನ ಮಲ್ಲಾಡದ, ಆನಂದ ಎರೇಕುಪ್ಪಿ, ಮಂಜುನಾಥ ತಳವಾರ, ತಿರಕಪ್ಪ ಹೊನ್ನತ್ತಿ, ಸಿ.ಸಿ.ಪಾಟೀಲ, ದಿಳ್ಳೆಪ್ಪ ಬಣಕಾರ, ಬಸವಣ್ಣೆಪ್ಪ ದೇವರಮನಿ, ಲಿಂಗರಾಜ ಸುತ್ತಕೋಟಿ, ಚೇತನ್ ನಾಯಕ, ರಾಜೇಂದ್ರ ಬಸೇನಾಯ್ಕರ ಸೇರಿದಂತೆ ಅಧಿಕಾರಿಗಳು ಶಿಕ್ಷಕರು ಇದ್ದರು.