Advertisement
ಕೋವಿಡ್ ಕಾರಣಕ್ಕೆ ಆರ್ಥಿಕ ಸಂಕಷ್ಟ ಎದುರಾದಾಗ ಆಟೊಮೊಬೈಲ್ ಉದ್ಯಮಿ ಶ್ರೀರಾಮ ಭಟ್ಟರು ಎದೆಗುಂದಲಿಲ್ಲ. ತಮ್ಮಲ್ಲಿದ್ದ ನೌಕರರನ್ನುಕೆಲಸದಿಂದ ತೆಗೆಯಲಿಲ್ಲ. ಬದಲಾಗಿ, ಆಟೊಮೊಬೈಲ್ ಉದ್ಯಮಕ್ಕೆ ಚಿಕ್ಕ ಬ್ರೇಕ್‌ಕೊಟ್ಟು, ಕೋವಿಡ್ ಸೋಂಕು ತಡೆಯಲು ಅಗತ್ಯವಿರುವ ಫೇಸ್ ಶೀಲ್ಡ್ ಗಳ ಉತ್ಪಾದನೆಗೆ ಮುಂದಾದರು…
Related Articles
Advertisement
ಪ್ರಾರಂಭದಲ್ಲಿ ತಮ್ಮ ಬಳಿ ಇರುವ ಉಪಕರಣಗಳನ್ನು ಫೇಸ್‌ಶೀಲ್ಡ್ ತಯಾರಿಕೆಗೆ ಬೇಕಾಗುವಂತೆ ಮಾರ್ಪಾಡು ಮಾಡಿಕೊಂಡರು. ಅದರ ಬೆನ್ನಿಗೇ, ಫೇಸ್ ಶೀಲ್ಡ್ ತಯಾರಿಕೆಗೆ ಅಗತ್ಯವಿದ್ದ ಹಲವು ಉಪಕರಣಗಳನ್ನು ಖರೀದಿಸಿ ಉತ್ಪಾದನೆಗೆ ಮುಂದಾದರು. ಐಎಸ್‌ಓ ಮಾನ್ಯತೆ ಹೊಂದಿರುವ ಈ ಸಂಸ್ಥೆಯಲ್ಲಿ ಪ್ರತಿ ತಿಂಗಳು ಐದು ವಿಧದ, ಲಕ್ಷಕ್ಕೂ ಅಧಿಕ ಫೇಸ್‌ಶೀಲ್ಡ್ ಉತ್ಪಾದನೆಯಾಗುತ್ತಿದೆ. ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸರು, ಪತ್ರಕರ್ತರು ಹೀಗೆ ವಿವಿಧ ವಲಯಗಳಿಂದ ಫೇಸ್‌ಶೀಲ್ಡ್ ಗೆ ಉತ್ತಮ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಶ್ರೀರಾಮ್.
ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆಕೇವಲ 25 ರೂ. ಗೆ ಗ್ರಾಹಕರಿಗೆ ಫೇಸ್ ಶೀಲ್ಡ್ ಒದಗಿಸುವ ಮೂಲಕ, ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತಕರೆಗೆ ಭಟ್ಟರು ಸ್ಪಂದಿಸಿದ್ದಾರೆ.
ಹೊಸ ಪ್ರಾಡಕ್ಟ್ ಗಳು ಮಾರುಕಟ್ಟೆಗೆ : ಇವರ ಕೈಗಾರಿಕಾ ಘಟಕದಲ್ಲಿ ಆಟೋಮೊಬೈಲ್ ಬಿಡಿಭಾಗಗಳು ಮತ್ತು ಫೇಸ್‌ಶೀಲ್ಡ್ ಗಳ ಜೊತೆಗೆ ಮತ್ತೂಕೆಲವು ಉತ್ಪನ್ನಗಳು ಸಿದ್ಧಗೊಳ್ಳುತ್ತಿವೆ. ಫೇಸ್ ಶೀಲ್ಡ್ ತಯಾರಿಕೆಯಿಂದಾಗಿ ಸಂಕಷ್ಟದಕಾಲದಲ್ಲಿ ನೌಕರರಿಗೆ ಉದ್ಯೋಗ ನೀಡಿದ್ದಲ್ಲದೇ, ಸ್ವ ಉದ್ಯಮದಕುರಿತು ಇನ್ನಷ್ಟು ಅನುಭವ ದೊರೆಯಿತು ಎಂಬುದು ಶ್ರೀರಾಮ್ ಅವರ ಅಂಬೋಣ. ಸ್ವದೇಶಿ ಉದ್ಯಮವನ್ನು ಮತ್ತಷ್ಟು ವಿಸ್ತರಿಸುವ ಕನಸಿದ್ದು, ಈಗಾಗಲೇ ಹೊಸ ಉತ್ಪನ್ನಗಳ ತಯಾರಿಕಾಕಾರ್ಯ ಪ್ರಾರಂಭ ಗೊಂಡಿದ್ದು, ಶೀಘ್ರವೇ ಮಾರುಕಟ್ಟೆ ಯನ್ನು ಪ್ರವೇಶಿಸಲಿವೆ. ಮುಂದಿನ ದಿನಗಳಲ್ಲಿ ಶ್ರೀಮಾತಾ ಪೆಸಿಶನ್ ಕಂಪೋನೆಚಿಟ್‌ನ ಸ್ವದೇಶಿ ಪ್ರಾಡಕ್ಟ್ ಗಳನ್ನು ಅಮೆಜಾನ್ ಸೇರಿದಂತೆ ವಿವಿಧ ಆನ್‌ಲೈನ್ ಮಾರುಕಟ್ಟೆ ಗೂ ಪರಿಚಯಿಸುವ ಆಕಾಂಕ್ಷೆ ಹೊಂದಿದ್ದಾರೆ ಭಟ್. ಶ್ರೀರಾಮ್ ಭಟ್ ಅವರ ಸಂಪರ್ಕ:98455 82997
ಫೇಸ್‌ಶೀಲ್ಡ್ ನ ಉಪಯೋಗಗಳು :
- ಮರುಬಳಕೆ ಮಾಡಬಹುದಾಗಿದೆ
- ಮಾಲಿನ್ಯ ತಡೆಗಟ್ಟಲು ಸಹಾಯಕ
- ಹೆಚ್ಚು ಪಾರದರ್ಶಕ ಧೂಳಿನಿಂದ ಮುಕ್ತಿ
- ಮಾಸ್ಕ್ ಗಳಿಗಿಂತ ಹೆಚ್ಚು ಸುರಕ್ಷಿತ.