Advertisement

ಫೇಸ್ ಬುಕ್ ಬಳಕೆದಾರರಿಗೆ ಸಿಹಿ ಸುದ್ದಿ: ಬಂದಿದೆ ಫೇಸ್ ಬುಕ್ ಪೇ, ಏನಿದರ ವಿಶೇಷತೆ ?

10:58 AM Nov 14, 2019 | Mithun PG |

ನ್ಯೂಯಾರ್ಕ್: ಏಕೀಕೃತ ಪಾವತಿ ಸೇವೆಯಾದ ಫೇಸ್ ಬುಕ್ ಪೇ ಯನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ ಎಂದು  ಫೇಸ್ ಬುಕ್ ಇಂಕ್ ಕಂಪೆನಿ ಮಂಗಳವಾರ ತಿಳಿಸಿದೆ. ಮಾತ್ರವಲ್ಲದೆ ವಾಟ್ಸಾಪ್ ಮತ್ತು ಇನ್ ಸ್ಟಾ ಗ್ರಾಂ ಸೇರಿದಂತೆ ಫೇಸ್ ಬುಕ್ ಒಡೆತನದ ವಿವಿಧ ಅಪ್ಲಿಕೇಶನ್ ನಿಂದ ನಿರ್ಗಮಿಸಿದೇ ಪಾವತಿ ಮಾಡಬಹುದು. ಈ ಸೇವೆಯು ಬಳಕೆದಾರರರಿಗೆ ತಮ್ಮ ಸ್ಮಾರ್ಟ್ ಪೋನ್ ಗಳಲ್ಲಿ ಪಿನ್ ಅಥವಾ ಬಯೋಮೆಟ್ರಿಕ್ಸ್ ನಂತಹ ಭದ್ರತಾ ಆಯ್ಕೆಗಳೊಂದಿಗೆ ಪೇಮೆಂಟ್ ಮಾಡಲು ಆಯ್ಕೆಯನ್ನು ಕಲ್ಪಿಸಿದೆ ಎಂದು ತಿಳಿಸಿದೆ.

Advertisement

ಮಾರ್ಕ್ ಜುಕರ್‌ಬರ್ಗ್ ಒಡೆತನದ ಫೇಸ್ ಬುಕ್ ಸಂಸ್ಥೆ  ಈ ವರ್ಷದ ಆರಂಭದಲ್ಲಿ ತನ್ನ ವಿವಿಧ ಅಪ್ಲಿಕೇಶನ್ ಗಳಲ್ಲಿ ಈ ಸೌಲಭ್ಯವನ್ನು ತರುವ ಸುಳಿವನ್ನು ನೀಡಿತ್ತು. ಜೊತೆಗೆ ಮೆಸೆಂಜಿಂಗ್ ಸೇವೆಯನ್ನು ಉನ್ನತಿಕರಿಸಲು ಮುಂದಾಗಿತ್ತು. ಈ ಹೊಸ ಸೇವೆಯು ಬಳಕೆದಾರರ ಎಲ್ಲಾ   ಡೇಟಾ ಮಾಹಿತಿಗಳು ಗೌಪ್ಯವಾಗಿ ಉಳಿಯವಂತೆ ಮಾಡಲಾಗಿದೆ ಎಂದು ಫೇಸ್ ಬುಕ್ ಸಂಸ್ಥೆ ಹೇಳಿಕೊಂಡಿದೆ.

ಸದ್ಯ ಭಾರತದಲ್ಲಿ ಹಲವಾರು UPI ಆಧಾರಿತ ಪೇಮೆಂಟ್‌ ಆ್ಯಪ್‌ಗಳು ಬಳಕೆಯಲ್ಲಿದ್ದು, ಆ ಪಟ್ಟಿಗೆ ಈಗ ಫೇಸ್ ಬುಕ್  ಪೇ ಕೂಡ ಸೇರಿಕೊಳ್ಳಲಿದೆ.  ಕಳೆದ ವರ್ಷದಿಂದ ಈ ಕುರಿತು ಸಿದ್ಧತೆ ನಡೆಸಿದ್ದು, ಇಷ್ಟು ದಿನ  ಪ್ರಾಯೋಗಿಕವಾಗಿ ಬಳಕೆಯಲ್ಲಿತ್ತು. ಈಗ  ವಾಣಿಜ್ಯ ರೂಪದಲ್ಲಿ ಬಳಕೆದಾರರಿಗೆ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next