Advertisement

ಡೊನಾಲ್ಡ್ ಟ್ರಂಪ್ ಖಾತೆಯನ್ನು ಎರಡು ವರ್ಷ ಅಮಾನತು ಮಾಡಿದ ಫೇಸ್ ಬುಕ್

07:48 AM Jun 05, 2021 | Team Udayavani |

ವಾಷಿಂಗ್ಟನ್ ಡಿಸಿ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಖಾತೆಯನ್ನು ಫೇಸ್ ಬುಕ್ ಎರಡು ವರ್ಷಗಳ ಕಾಲ ಅಮಾನತು ಮಾಡಿದೆ. 2023ರ ಜನವರಿಯ ವರೆಗೆ ಟ್ರಂಪ್ ಫೇಸ್ ಬುಕ್  ಖಾತೆ ಅಮಾನತಾಗಿದೆ.

Advertisement

ಜನವರಿ 6ರಂದು ಅಮೆರಿಕದ ಕ್ಯಾಪಿಟೊಲ್ ನಲ್ಲಿ ನಡೆದ ಹಿಂಸಾಚಾರಕ್ಕೆ ಟ್ರಂಪ್  ಮಾಡಿದ ಕೆಲವು ಪೋಸ್ಟ್ ಗಳು ಕಾರಣ ಎಂದು ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಫೇಸ್ ಬುಕ್ ನ ಸ್ವತಂತ್ರ ಮೇಲ್ವಿಚಾರಣಾ ಸಮಿತಿಯೂ ಈ ನಿರ್ಧಾರವನ್ನು ಎತ್ತಿ ಹಿಡಿದಿದೆ.

ಇದನ್ನೂ ಓದಿ:ರವಿವಾರವೂ ಬ್ಯಾಂಕ್‌ ಖಾತೆಗೆ ಹಣ ಜಮೆ : ಆ. 1ರಿಂದ ಹಣಕಾಸು ವರ್ಗಾವಣೆಯಲ್ಲಿ ಹೊಸ ವ್ಯವಸ್ಥೆ

ಟ್ರಂಪ್ ಅವರ ಅಮಾನತು ಜನವರಿಯಲ್ಲಿ ಆರಂಭಿಕ ದಿನಾಂಕದಿಂದ ಪರಿಣಾಮಕಾರಿಯಾಗಿದೆ. ಷರತ್ತುಗಳು ಅನುಮತಿಸಿದರೆ ಮಾತ್ರ ಅದನ್ನು ಪುನಃ ಸ್ಥಾಪಿಸಲಾಗುವುದು ಎಂದು ಫೇಸ್ ಬುಕ್ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ.

ರಾಜಕೀಯ ನಾಯಕರ ದ್ವೇಷಪೂರಿತ ಪೋಸ್ಟ್ ಗಳಿಗೆ ಕಡಿವಾಣ ಹಾಕುವಲ್ಲಿ ಫೇಸ್ ಬುಕ್ ನ ಈ ನಡೆ ಮಹತ್ವದ್ದು ಎನ್ನಲಾಗಿದೆ. ಟ್ವಿಟ್ಟರ್ ಕೂಡಾ ಈ ಹಿಂದೆ ಇದೇ ರೀತಿಯ ಕ್ರಮ ಕೈಗೊಂಡಿದ್ದು, ಟ್ರಂಪ್ ಖಾತೆಯನ್ನು ಶಾಶ್ವತವಾಗಿ ರದ್ದು ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next