Advertisement

ಡೊನಾಲ್ಡ್‌ ಟ್ರಂಪ್‌ಗೆ ನೇರ ಎಚ್ಚರಿಕೆ ನೀಡಿದ ಫೇಸ್‌ಬುಕ್‌

06:07 PM Aug 19, 2020 | Karthik A |

ವಾಷಿಂಗ್ಟನ್: ಅಮೆರಿಕದಲ್ಲಿ ಈ ಬಾರಿ ಡೊನಾಲ್ಡ್ ಟ್ರಂಪ್‌ ಅವರ ಅಧ್ಯಕ್ಷೀಯ ಚುನಾವಣೆಯ ಹಾದಿ ಸುಲಭವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

Advertisement

ಇದೀಗ ಟ್ರಂಪ್‌ ಅವರಿಗೆ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ನೇರ ಎಚ್ಚರಿಕೆ ನೀಡಿದೆ.

ಟ್ರಂಪ್‌ ಫೇಸ್‌ಬುಕ್‌ ಸಂಸ್ಥೆಯ ಮಾನದಂಡಗಳನ್ನು ಮುರಿದರೆ ಅಂತಹ ಹೇಳಿಕೆಗಳನ್ನು ತಾಣದಿಂದ ತೆಗೆದುಹಾಕಲಾಗುತ್ತದೆ ಎಂದು ಫೇಸ್‌ಬುಕ್‌ ಹೇಳಿದೆ.

ಅಧ್ಯಕ್ಷರು ದ್ವೇಷದ ಭಾಷಣ ಅಥವಾ ಕೋವಿಡ್‌ ಬಗ್ಗೆ ಯಾವುದೇ ತಪ್ಪು ಮಾಹಿತಿಯನ್ನು ಪೋಸ್ಟ್‌ ಮಾಡಿದರೆ ಅದನ್ನು ಮುಲಾಜಿಲ್ಲದೇ ಅಳಿಸಲಾಗುತ್ತದೆ ಎಂದು ಹೇಳಿದೆ.

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಫೇಸ್‌ಬುಕ್‌ನಲ್ಲಿ ಈ ಕುರಿತಂತೆ ಹಲವು ಆರೋಪಗಳು ಕೇಳಿಬಂದಿದ್ದವು. ಇದೀಗ ಈ ಚುನಾವಣೆಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿರುವ ಫೇಸ್ ಬುಕ್‌ ಈಗ ಕಠಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಚುನಾವಣೆ ಕುರಿತಂತೆ ಸಾರ್ವಜನಿಕರಲ್ಲಿನ ಗೊಂದಲಗಳನ್ನು ಕಡಿಮೆ ಮಾಡಲು ಫೇಸ್‌ಬುಕ್‌ ಕಳೆದ ವಾರ ‘ಮತದಾನ ಮಾಹಿತಿ ಕೇಂದ್ರಗಳನ್ನು’ ಪ್ರಾರಂಭಿಸಿತ್ತು. ಇದು ಅಮೆರಿಕಾದ ಜನರಿಗೆ ಮತದಾನದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತದೆ. ಕಂಪನಿಯ ಪ್ರಕಾರ ಈ ಕೇಂದ್ರಗಳು ಫೇಸ್‌ಬುಕ್‌ ಮತ್ತು ಇನ್‌ ಸ್ಟಾಗ್ರಾಂನಲ್ಲಿ ಇರುತ್ತವೆ.

Advertisement

ತನ್ನಲ್ಲಿನ ಅವಕಾಶವನ್ನು ಬಳಸಿಕೊಂಡು ರಾಜಕೀಯ ವ್ಯಕ್ತಿಗಳ ದ್ವೇಷದ ಮಾತು ಮತ್ತು ಸುಳ್ಳು ಸುದ್ದಿಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಫೇಸ್‌ಬುಕ್‌ ಪ್ರಾರಂಭಿಸಿದೆ. ಚುನಾವಣೆಯಲ್ಲಿ ಯಾವುದೇ ಪರ ಅಥವಾ ವಿರೋಧಗಳನ್ನು ಬೆಂಬಲಿಸದೇ ನಿಷ್ಪಕ್ಷಪಾತವಾಗಿ ಇರಲು ಕೆಲವು ಅತ್ಯಾಧುನಿಕ ವ್ಯವಸ್ಥೆಗಳನ್ನು ರಚಿಸಿದೆ.

ಇದೇ ಕಾರಣಕ್ಕೆ ಸದ್ಯ ಫೇಸ್‌ಬುಕ್‌ ಭಾರತದಲ್ಲಿ ವಿವಾದದಲ್ಲಿದೆ. ಆಡಳಿತ ಪಕ್ಷ ಬಿಜೆಪಿಯನ್ನು ಬೆಂಬಲಿಸುತ್ತದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಬಳಿಕ ಇದಕ್ಕೆ ಫೇಸ್‌ಬುಕ್‌ ಸ್ಪಷ್ಟನೆಯನ್ನು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next