ಮುಂಬಯಿ : ಫೇಸ್‌ಬುಕ್‌ನಲ್ಲಿ ಬ್ರಾಹ್ಮಣ ಹಾಗೂ ಹಿಂದೂ ಧರ್ಮದ ಬಗ್ಗೆ ಪೋಸ್ಟ್ ಶೇರ್ ಮಾಡಿದ ವೈದ್ಯನನ್ನು ವಿಕ್ರೋಲಿ ಪಾರ್ಕ್‌ಸೈಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಡಾ| ಸುನೀಲ್ ಕುಮಾರ್ ನಿಶಾದ್ ಎಂದು ಗುರುತಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬ್ರಾಹ್ಮಣರ ವಿರುದ್ಧ ಪೋಸ್ಟ್ ಮಾಡಿದ್ದ.
ಈ ಕುರಿತು ವಿಕ್ರೋಲಿ ನಿವಾಸಿ ರವೀಂದ್ರ ತಿವಾರಿ ಎಂಬ ಯುವಕ ಪಾರ್ಕ್ ಸೈಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ದೂರಿನಲ್ಲಿ ಡಾ| ಸುನೀಲ್ ಕುಮಾರ್ ನಿಶಾದ್ ಫೇಸ್‌ಬುಕ್‌ನಲ್ಲಿ ಹಿಂದೂ ಧರ್ಮ ಹಾಗೂ ಬ್ರಾಹ್ಮಣರ ವಿರುದ್ಧ ಪೋಸ್ಟ್ ಮಾಡಿದರು ಎಂದು ಹೇಳಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು. ಡಾ| ನಿಶಾದ್‌ನನ್ನು ಮುಂಬಯಿ ವಿಶ್ವ ವಿದ್ಯಾಲಯದ ಫೋರ್ಟ್ ಕ್ಯಾಂಪಸ್ ಬಳಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಲಾಸ್ ಜಾಧವ್ ಮಾಹಿತಿ ನೀಡಿದ್ದಾರೆ.
ರವೀಂದ್ರ ತಿವಾರಿ ಅವರ ಪ್ರಕಾರ, ನಾನು ಹಾಗೂ ಡಾ| ನಿಶಾದ್ ಒಂದೇ ಪರಿಸರದವರಾಗಿದ್ದೇವೆ. ಕಳೆದ ಎರಡು ವರ್ಷಗಳಿಂದ ನಿಶಾದ್ ನಿರಂತರವಾಗಿ ಬ್ರಾಹ್ಮಣ ಹಾಗೂ ಹಿಂದೂ ಧರ್ಮದ ವಿರುದ್ಧ ಪೋಸ್ಟ್ ಮಾಡುತ್ತಿದ್ದ. ಅನೇಕ ಬಾರಿ ಅವರಿಗೆ ತಿಳುವಳಿಕೆಯ ಮಾತನ್ನು ಹೇಳಲು ಪ್ರಯತ್ನಿಸಿದೆ. ಒಂದುವೇಳೆ ಧರ್ಮದ ಕುರಿತು ಹಾಗೂ ವ್ಯಕ್ತಿ ವಿಷಯದ ಕುರಿತು ಯಾವುದೇ ರೀತಿಯ ದೂರು ಇದ್ದರೆ ಪೊಲೀಸರ ಸಹಾಯ ಪಡೆಯಬೇಕು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ವಿಷಯ ಫೋಸ್ಟ್ ಮಾಡಬಾರದು ಎಂದರು.
ಆದರೆ, ನಿಶಾದ್ ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದ ಕಾರಣ ಪೊಲೀಸರಲ್ಲಿ ದೂರು ನೀಡಬೇಕಾಯಿತು ಎಂದು ತಿವಾರಿ ಹೇಳಿದ್ದಾರೆ. ನಿಶಾದ್ ಬಾಮಸೆಫ ನ ಸದಸ್ಯನಾಗಿದ್ದ ಎನ್ನಲಾಗುತ್ತದೆ. ಬಾಮಸೆಫ ರಚನೆ ಬಹುಜನ ಸಮಾಜ ಪಕ್ಷದ ಕಾಶಿರಾಮ್ ಅವರು ಮಾಡಿದ್ದರು. ನಿಶಾದ್ ಫೇಸ್‌ಬುಕ್‌ನಲ್ಲಿ ಮೋದಿ, ಬಿಜೆಪಿ ಹಾಗೂ ಪ್ರಜ್ಞಾ ಸಿಂಗ್ ಸೇರಿದಂತೆ ಬಾಹ್ಮಣರ ವಿರುದ್ಧ ಪೋಸ್ಟ್ ಮಾಡಿದ್ದ.