ಜೇವರ್ಗಿ: ಮುಸ್ಲಿಂರ ಪವಿತ್ರ ಸ್ಥಳವಾದ ಮೆಕ್ಕಾದ ಮೇಲೆ ಅಸಭ್ಯ ಚಿತ್ರ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪಿಯನ್ನು ಬಂಧಿಧಿಸುವಂತೆ ಒತ್ತಾಯಿಸಿ ಮುಸ್ಲಿಂ ಸಂಘಟನೆಗಳ ವತಿಯಿಂದ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ-218 ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಲಾಯಿತು.
ಫೇಸ್‌ಬುಕ್‌ನಲ್ಲಿ ಮೆಕ್ಕಾ ಮಸೀದಿ ಮೇಲೆ ಅರೆನಗ್ನ ಸ್ಥಿತಿಯಲ್ಲಿರುವ ಮಹಿಳೆಯ ಪೋಸ್ಟ್ ಮಾಡಿರುವ ಶ್ರೀರಾಮಸೇನೆ ಕಾರ್ಯಕರ್ತನನ್ನು ಕೂಡಲೇ ಬಂಧಿಧಿ ಸಬೇಕು. ಶ್ರೀರಾಮಸೇನೆ ರಾಸಣಗಿ ಎಂಬ ಸ್‌ಬುಕ್‌ನಿಂದ ತಾಲೂಕಿನ ರಾಸಣಗಿ ಗ್ರಾಮದ ಯುವಕ ಈ ಅಶ್ಲೀಲ ಚಿತ್ರ ಹಾಕಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ, ಗೌರವಾಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಯುವಕರಿಗೆ ತರಬೇತಿ ನೀಡಿ ಇಂತಹ ಕೆಟ್ಟ ಕಾರ್ಯಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಕೂಡಲೇ ಸಂಘಟನೆಯನ್ನು ರಾಜ್ಯದಿಂದ ಸಂಪೂರ್ಣ ನಿಷೇಧಿಧಿಸಬೇಕು. ಆರೋಪಿಯನ್ನು 24 ಗಂಟೆಯ ಒಳಗೆ ಬಂಧಿಸಬೇಕು.
ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಂಘಟನೆಯ ಮುಖಂಡರು ಎಚ್ಚರಿಸಿದರು. ಇದಕ್ಕೂ ಮುನ್ನ ಸುದ್ಧಿ ಪಟ್ಟಣದಲ್ಲಿ ಹರಡುತ್ತಿದ್ದಂತೆ ನೂರಾರು ಮುಸ್ಲಿಂ ಸಂಘಟನೆಯ ಯುವಕರು ಟೈರ್ ಗಳಿಗೆ ಬೆಂಕಿ ಹಚ್ಚಿ ನಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಮುಖಂಡ ಅಲ್ಲಾಭಕ್ಷ ಬಾಗವಾನ, ಮೋಯಿನ್ ಪಟೇಲ, ಇಬ್ರಾಹಿಂ ಪಟೇಲ, ಬಶೀರ್ ಇನಾಮದಾರ, ಚಾಂದಸಾಬ್ ಜಮಾದಾರ, ಬಾಬಾ ಹನೀಫ್, ಸಲಿಂ ಕಣ್ಣಿ, ಅಜ್ಜುತಿ, ಮಹೇಬೂಬ ಸಾಬ, ದಾವೂದ್ ಇನಾಮದಾರ ಹಾಗೂ ನೂರಾರು ಮುಸ್ಲಿಂಯುವಕರು ಭಾಗವಹಿಸಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ, ಡಿಎಸ್ಪಿ ಜಯಪ್ರಕಾಶ, ಡಿವ್ಹಾಯ್‌ಎಸ್ಪಿ ವಿಜಯ ಅಂಚಿ, ಎಸ್,ಎಸ್.ಹುಲ್ಲೂರ ಸ್ಥಳಕ್ಕೆ ಭೇಟಿ ನೀಡಿ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ.