Advertisement

ಆಕ್ಷೇಪಾರ್ಹ ಕಂಟೆಂಟ್‌ ಬಗ್ಗೆ ಫೇಸ್‌ಬುಕ್‌ ನಿರ್ಲಕ್ಷ್ಯ?

09:56 PM Nov 10, 2021 | Team Udayavani |

ನವದೆಹಲಿ: 2018ರಿಂದ 2019ರ ಸಮಯದಲ್ಲಿ ವಿವಾದಾತ್ಮಕ ಕಂಟೆಂಟ್‌ಗಳು ಹರಿದಾಡಿದ್ದರ ಬಗ್ಗೆ ಫೇಸ್‌ಬುಕ್‌ ಸಿಬ್ಬಂದಿಗಳು, ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದರೂ, ಅಧಿಕಾರಗಳು ಅದನ್ನು ನಿರ್ಲಕ್ಷಿಸಿದ್ದರೆಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

Advertisement

2019ರಲ್ಲಿ ಕಂಪನಿಯ ಆಂತರಿಕ ಪರಿಶೀಲನಾ ಸಭೆ ನಡೆದಿತ್ತು. ಸಭೆಯ ಅಧ್ಯಕ್ಷತೆಯನ್ನು ಆಗ, ಫೇಸ್‌ಬುಕ್‌ನ ಉಪಾಧ್ಯಕ್ಷರಾಗಿದ್ದ ಕ್ರಿಸ್‌ ಕಾಕ್ಸ್‌ ಅವರು ವಹಿಸಿದ್ದರು. ಅದೇ ಸಭೆಯಲ್ಲಿ, ಆಕ್ಷೇಪಾರ್ಹ ಸಂದೇಶಗಳು ಹರಿದಾಡುತ್ತಿರುವುದರ ಬಗ್ಗೆ ಸಿಬ್ಬಂದಿಯಿಂದ ಬಂದಿರುವ ದೂರುಗಳ ಬಗ್ಗೆ ಪ್ರಸ್ತಾಪವಾಯಿತು. ಆದರೆ, ಇದಕ್ಕೆ ಸೂಕ್ತವಾಗಿ ಕೈಗೊಳ್ಳಬೇಕಿದ್ದ ಕ್ರಮಗಳನ್ನು ಫೇಸ್‌ಬುಕ್‌ ಅಳವಡಿಸಿಕೊಳ್ಳಲಿಲ್ಲ ಎಂದು ಮೂಲಗಳು ತಿಳಿಸಿವೆ. ಅಲ್ಲಿಗೆ, ಸಮಾಜದಲ್ಲಿ ಅಶಾಂತಿ ತಲೆದೋರಲು ಕಾರಣವಾಗಬಹುದಾ ಸಂದೇಶಗಳು ತನ್ಮೂಲಕ ಹರಿದಾಡುತ್ತಿದ್ದರೂ ಅದನ್ನು ಫೇಸ್‌ಬುಕ್‌ ಸತತವಾಗಿ ನಿರ್ಲಕ್ಷಿಸುತ್ತಾ ಬಂದಿತ್ತೆಂಬ ಆರೋಪಗಳಿಗೆ ಪುಷ್ಠಿ ಸಿಕ್ಕಂತಾಗಿದೆ.

ಇದನ್ನೂ ಓದಿ:ಐಎನ್‌ಕ್ಸ್‌ ಮೀಡಿಯಾ ಪ್ರಕರಣ: ದಾಖಲೆ ಪರಿಶೀಲಿಸಲು ಚಿದು, ಪುತ್ರಗೆ ಅವಕಾಶ

ಆಕ್ಷೇಪಾರ್ಹ ಜಾಹೀರಾತುಗಳಿಗೆ ಕೊಕ್‌
ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಮೂಡಿಬರುವ ವಿವಾದಾತ್ಮಕ ಅಥವಾ ಆಕ್ಷೇಪಾರ್ಹ ಮಾಹಿತಿಗಳಿರುವ ಜಾಹೀರಾತುಗಳನ್ನು ತೆಗೆದುಹಾಕಲಾಗುತ್ತದೆ ಎಂದು ಈ ಎರಡೂ ಸಂಸ್ಥೆಗಳ ಮಾತೃಸಂಸ್ಥೆಯಾದ ಮೆಟಾ ಪ್ಲಾಟ್‌ಫಾರ್ಮ್ಸ್ ಕಂಪನಿ ತಿಳಿಸಿದೆ.

ಆರೋಗ್ಯ, ಜನಾಂಗಗಳು, ರಾಜಕೀಯ, ಧರ್ಮ ಮತ್ತು ಲೈಂಗಿಕ ವಿಚಾರಗಳಿಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಸಂಗತಿಗಳುಳ್ಳ ಜಾಹೀರಾತುಗಳನ್ನು 2022ರ ಜನವರಿಯಿಂದ ನಿಷೇಧಿಸಲಾಗುತ್ತದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next