Advertisement

ಫೇಸ್‌ಬುಕ್‌ ಮೇಸೆಂಜರ್‌ ಬಳಕೆಯಲ್ಲಿ ಶೇ. 50 ಹೆಚ್ಚಳ: ಲೈವ್‌ ವೀಡಿಯೋ ಶೇ. 60ರಷ್ಟು ಏರಿಕೆ

09:05 AM Dec 12, 2020 | Karthik A |

ಮಣಿಪಾಲ: ಲಾಕ್‌ಡೌನ್‌ ಸಂದರ್ಭ ಸಾಮಾಜಿಕ ಜಾಲತಾಣಗಳ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಲಾಕ್‌ಡೌನ್‌ ಸಂದರ್ಭ ಸದಾ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಬಳಸಲಾಗಿತ್ತು. ಇದು ವಿಶೇಷವಾಗಿ ‌ವಾಟ್ಸಅಪ್‌, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಅನ್ನು ಒಳಗೊಂಡಿದೆ.

Advertisement

ಜಾಗತಿಕವಾಗಿ 800 ಮಿಲಿಯನ್ ಬಳಕೆದಾರರು ಪ್ರತಿದಿನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಸುತ್ತಿದ್ದಾರೆ. ವಿಶೇಷವಾಗಿ ಭಾರತದಲ್ಲಿ ಜಾಗತಿಕವಾಗಿ ಮೆಸೇಜಿಂಗ್ ಮತ್ತು ಲೈವ್ ವೀಡಿಯೋ ಬಳಕೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಹೇಳಿದೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಇತರರೊಂದಿಗೆ ಸಂಪರ್ಕದಲ್ಲಿರಲು ಬಳಕೆದಾರರು ಈ ಸಾಧನಗಳ ಲಾಭವನ್ನು ಪಡೆದುಕೊಂಡಿದ್ದಾರೆ.

ಇಂಡಿಯನ್ ಮೊಬೈಲ್ ಕಾಂಗ್ರೆಸ್ 2020ರಲ್ಲಿ ಭಾರತ ನಿರ್ದೇಶಕರು ಮತ್ತು ಫೇಸ್‌ಬುಕ್‌ನ ಪಾಲುದಾರಿಕೆ ಮುಖ್ಯಸ್ಥ ಮನೀಶ್ ಚೋಪ್ರಾ ಮಾತನಾಡಿ ಪ್ರಪಂಚದಾದ್ಯಂತ ಜನರು ಸಾಮಾಜಿಕ ಅಂತರವನ್ನು ಪಾಲಿಸುತ್ತಾ ಬಂದಿದ್ದು, ಸಂವಹನಕ್ಕಾಗಿ ಡಿಜಿಟಲ್‌ ಮಾಧ್ಯಮವನ್ನು ಅವಲಂಭಿಸಿದ್ದಾರೆ.

ಜಾಗತಿಕವಾಗಿ ಮೇಸೆಂಜರ್‌ ಬಳಕೆಯಲ್ಲಿ ಶೇ. 50 ಮತ್ತು ಲೈವ್ ವೀಡಿಯೋದಲ್ಲಿ ಶೇ. 60ರಷ್ಟು ಬೆಳವಣಿಗೆಯನ್ನು ದಾಖಲಿಸಲಾಗಿದೆ. ವೀಡಿಯೋ ವೀಕ್ಷಣೆಗಳ ಸಂಖ್ಯೆಗಳು ಹೆಚ್ಚಾಗಿವೆ. ವಿಶೇಷವಾಗಿ Instagramನಲ್ಲಿ. ಭಾರತದಲ್ಲಿನ ಪೋಸ್ಟ್‌ಗಳಲ್ಲಿ ಮೂರನೇ ಒಂದು ಭಾಗದಷ್ಟು ವೀಡಿಯೋ ಪೋಸ್ಟ್‌ಗಳು ದಾಖಲಾಗಿವೆ. ಭಾರತವು ಫೇಸ್‌ಬುಕ್‌ನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇದಲ್ಲದೆ ಕಂಪನಿಯು ಫೋಟೋ ಹಂಚಿಕೆ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್ ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಅನ್ನು ಸಹ ನಿರ್ವಹಿಸುತ್ತದೆ.

Advertisement

ಫೇಸ್‌ಬುಕ್ ಫ್ಯಾಮಿಲಿ ಅಪ್ಲಿಕೇಶನ್‌ಗಳನ್ನು ಜಾಗತಿಕವಾಗಿ 2.5 ಬಿಲಿಯನ್ ಜನರು ಬಳಸುತ್ತಾರೆ. ಈ ಪ್ಲಾಟ್‌ಫಾರ್ಮ್‌ಗಳಲ್ಲಿ 10 ಮಿಲಿಯನ್ ಸಕ್ರಿಯ ಜಾಹೀರಾತುದಾರರಿದ್ದಾರೆ. ಜಾಗತಿಕವಾಗಿ 800 ಮಿಲಿಯನ್ ಸಕ್ರಿಯ ಬಳಕೆದಾರರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ವೀಡಿಯೋ ಸ್ಟ್ರೀಮಿಂಗ್‌ನಲ್ಲಿ ತೊಡಗುವವರಿದ್ದಾರೆ. ಜನರು ಲೈವ್‌ನತ್ತ ಹೆಚ್ಚು ಮುಖ ಮಾಡುವುದರಿಂದ ಶೇ. 60ರಷ್ಟು ಬೆಳವಣಿಗೆ ಇಲ್ಲಿ ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next