Advertisement

58 ಕೋಟಿ ಖಾತೆ ಬಂದ್‌

06:50 AM May 17, 2018 | Team Udayavani |

ಪ್ಯಾರಿಸ್‌: ಈ ವರ್ಷದಲ್ಲಿ ಈಗಾಗಲೇ ಫೇಸ್‌ಬುಕ್‌ 58.3 ಕೋಟಿ ನಕಲಿ ಖಾತೆಗಳನ್ನು ಅಳಿಸಿದೆ. ಲೈಂಗಿಕ ಆಕ್ಷೇಪಾರ್ಹ ಹಾಗೂ ಹಿಂಸಾತ್ಮಕ ಚಿತ್ರಗಳನ್ನು ಪ್ರಕಟಿಸಿರುವುದು ಮತ್ತು ಉಗ್ರಗಾಮಿಗಳಿಗೆ ಬೆಂಬಲ ಅಥವಾ ದ್ವೇಷಯುತ ಪೋಸ್ಟ್‌ ಮಾಡಿದ ಖಾತೆಗಳನ್ನು ಅಳಿಸಲಾಗಿದೆ. 

Advertisement

ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆಗೆ ದತ್ತಾಂಶಗಳ ಸೋರಿಕೆ ಮಾಡಿದ ಆರೋಪದ ಬೆನ್ನಲ್ಲೇ, ತನ್ನ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಫೇಸ್‌ಬುಕ್‌ ಈ ಕ್ರಮಕ್ಕೆ ಮುಂದಾಗಿದೆ. ಕೋಟ್ಯಂತರ ಖಾತೆಗಳನ್ನು ಅಳಿಸಿದರೂ, ಇದೇ ಪ್ರಮಾಣದಲ್ಲಿ ಖಾತೆಗಳು ರಚನೆಯಾಗುತ್ತಲೂ ಇವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಅಲ್ಲದೆ ಒಟ್ಟು ಖಾತೆಗಳ ಪೈಕಿ ನಕಲಿ ಖಾತೆಗಳು ಶೇ. 3-4ರಷ್ಟಿವೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next