ವಾಷಿಂಗ್ಟನ್: ಕಳಪೆ ಕಂಟೆಂಟ್ ಇರುವ ಫೇಸ್‌ಬುಕ್ ಪೋಸ್ಟ್‌ಗಳನ್ನು ಗುಣಮಟ್ಟ ನಿಯಂತ್ರಣ ನಿಯಮಗಳ ಅನುಸಾರ ಡಿಲೀಟ್ ಮಾಡುವ ವಿಚಾರದಲ್ಲಿ ಫೇಸ್‌ಬುಕ್ ಸಂಸ್ಥೆ, ಭೇದಭಾವ ನೀತಿ ಅನುಸರಿಸುತ್ತಿದೆ ಎಂಬ ಕೆಲ ಮಾಧ್ಯಮ ವರದಿಗಳನ್ನು ಫೇಸ್‌ಬುಕ್ ತಳ್ಳಿಹಾಕಿದೆ.
ತಾನು ಯಾರ ಕಂಟೆಂಟನ್ನೂ ರಕ್ಷಿಸುತ್ತಿಲ್ಲ ಎಂದು ಸ್ಪಷ್ಪಪಡಿಸಿದೆ.
“ಕ್ರಾಸ್ ಚೆಕ್’ ಅಥವಾ “ಎಕ್ಸ್ ಚೆಕ್’ ಎಂಬ ನಿಯಮದಡಿ, ಫೇಸ್‌ಬುಕ್‌ನಲ್ಲಿ ಪೋಸ್ಟ್ ಆಗುವ ಕಂಟೆಂಟ್‌ಗಳನ್ನು ಪರಿಶೀಲನೆ ನಡೆಸಿ, ಅವುಗಳಲ್ಲಿ ಸತ್ಯಾಂಶವಿಲ್ಲದಿದ್ದರೆ, ಅವು ಕಳಪೆಯಾಗಿದ್ದರೆ ಅಂಥ ಕಂಟೆಂಟ್‌ಗಳನ್ನು ಅಳಿಸಿಹಾಕುವ ಅಧಿಕಾರವನ್ನು ಫೇಸ್‌ಬುಕ್ ಹೊಂದಿದೆ.
ಇದನ್ನೂ ಓದಿ:ದೆಹಲಿ ಪೊಲೀಸರ ಭರ್ಜರಿ ಬೇಟೆ : ಆರು ಜನ ಉಗ್ರರ ಬಂಧನ
ಆದರೆ, ಇದನ್ನು ಫೇಸ್‌ನಲ್ಲಿರುವ ವಿವಿಧ ದೇಶಗಳ ಗಣ್ಯವ್ಯಕ್ತಿಗಳು, ಸೆಲೆಬ್ರಿಟಿಗಳ ವಿಚಾರದಲ್ಲಿ ಇದನ್ನು ಪಾಲಿಸುತ್ತಿಲ್ಲ ಎಂದು ಅಮೆರಿಕದ ಕೆಲ ಮಾಧ್ಯಮಗಳು ಆರೋಪಿಸಿದ್ದವು.