ನ್ಯೂಯಾರ್ಕ್: ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ತನ್ನ ಕ್ಲಾಸಿಕ್ (ಹಳೆಯ) ವಿನ್ಯಾಸ ಸ್ಥಗಿತಗೊಳಿಸಲು ಮುಂದಾಗಿದೆ. ಈಗಾಗಲೇ ಹೊಸ ವಿನ್ಯಾಸವನ್ನು ಪರಿಚಯಿಸಿದ್ದು. ಸೆಪ್ಟೆಂಬರ್ ತಿಂಗಳಿನಿಂದ ಬಳಕೆದಾರರಿಗೆ ಫೇಸ್ಬುಕ್ ಕ್ಲಾಸಿಕ್ ವಿನ್ಯಾಸ ದೊರಕುವುದಿಲ್ಲ.
ವಾಟ್ಸಾಪ್, ಮೆಸೆಂಜರ್, ಇನ್‌ಸ್ಟಾಗ್ರಾಮ್‌ನಂತಹ ಅನೇಕ ಸಾಮಾಜಿಕ ಜಾಲತಾಣಗಳ ಅಪ್ಲಿಕೇಶನ್‌ಗಳ ಹೊರತಾಗಿಯೂ ಹೆಚ್ಚಿನ ಜನರು ಫೇಸ್‌ಬುಕ್.ಕಾಮ್ ಬಳಸುತ್ತಾರೆ. ಮಾತ್ರವಲ್ಲದೆ ಡೆಸ್ಕ್ ಟಾಪ್ ಬಳಕೆದಾರರು ಕೂಡ ಅಧಿಕವಾಗಿರುವುದರಿಂದ ಈ ಅಪ್‌ಗ್ರೇಡ್ ವರ್ಷನ್ ಜಾರಿಗೆ ತರಲಾಗಿದೆ ಎಂದು ಫೇಸ್ ಬುಕ್ ತಿಳಿಸಿದೆ.
ಮಾತ್ರವಲ್ಲದೆ ಹಳೆ ವರ್ಷನ್ ನಲ್ಲಿದ್ದ ಕೆಲ ಫೀಚರ್ ಗಳು ಹೊಸ ವರ್ಷನ್ ಗಳಲ್ಲಿ ಲಭ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. ಕ್ಲಾಸಿಕ್ ಆಯ್ಕೆ ಆಗಸ್ಟ್ ಅಂತ್ಯದವರೆಗೂ ಮಾತ್ರ ದೊರಕಲಿದ್ದು ನಂತರದಲ್ಲಿ ಹೊಸ ವರ್ಷನ್ ಜಾರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ತನ್ನ ವಿನ್ಯಾಸವನ್ನು ಮತ್ತಷ್ಟು ಬದಲಾವಣೆ ಮಾಡುವ ಮೂಲಕ ಬಳಕೆದಾರರಿಗೆ ಹೊಸ ಅನುಭವ ಒದಗಿಸಲಿದೆ ಎಂದು ಅಮೆರಿಕನ್ ಆರ್ಗನೈಶೇಷನ್ ತಿಳಿಸಿದೆ.
ಈಗಾಗಲೇ ಫೇಸ್ಬುಕ್ ಹೊಸ ವಿನ್ಯಾಸ ಮತ್ತು ಹಳೇಯ ಕ್ಲಾಸಿಕ್ ವಿನ್ಯಾಸದ ಬಗ್ಗೆ ಏಫ್ಎಕ್ಯೂ ಪೇಜ್ನಲ್ಲಿ ಸ್ಪಷ್ಟತೆಯನ್ನು ನೀಡಿದೆ. ಸೆಪ್ಟೆಂಬರ್ ತಿಂಗಳಿನಿಂದ ನೂತನ ವಿನ್ಯಾಸದ ಜೊತೆಗೆ ಡಾರ್ಕ್ ಥೀಮ್ ಆಯ್ಕೆಯೂ ದೊರೆಯಲಿದೆ.ಡಾರ್ಕ್ ಥೀಮ್ ಬೇಡವಾಗಿದ್ದಲ್ಲಿ ಅಫ್ ಮಾಡುವ ಅವಕಾಶವಿದೆ. ಇದರ ಜೊತೆಗೆ ನೀಲಿ ಬಣ್ಣದಲ್ಲಿ ಥೀಮ್ ಕಲರ್ ಸಿಗಲಿದೆ. ಗೇಮಿಂಗ್ ಐಕಾನ್, ಮಾರ್ಕೆಟ್ ಪ್ಲೇಸ್, ಫೇಸ್ಬುಕ್ ವಾಚ್, ಯುಐ ಮತ್ತು ನೋಟಿಫಿಕೇಶನ್, ಮೆಸೆಂಜರ್ ಐಕಾನ್, ಸೆಟ್ಟಿಂಗ್ಸ್ ಕೀ ಕೂಡ ಬದಲಾಗಿದೆ.
ಕೆಲವು ಆಸಕ್ತಿದಾಯಕ ವಿಚಾರಗಳು
- ವಿಸ್ತಾರವಾದ ಮತ್ತು ಸ್ಪಷ್ಟತೆ ಹೊಂದಿದ ನ್ಯೂಸ್ ಫೀಡ್
- ಲೋಡಿಂಗ್ ಸಮಯದಲ್ಲಿ ಇನ್ನಷ್ಟು ಸುಧಾರಣೆ
- ಡಾರ್ಕ್ ಮೋಡ್ ಆಯ್ಕೆ
ಯಾಕೆ ಈ ಬದಲಾವಣೆ: ಮಾರ್ಕ್ ಜುಕರ್ ಬರ್ಗ್ ತಿಳಿಸಿದಂತೆ, ಇದು ನಾವು ನೀಡುವ ಸೇವೆಯ ಮುಂದಿನ ಅಧ್ಯಾಯವಾಗಿದೆ. ಭವಿಷ್ಯತ್ ಎಂಬುದು ಖಾಸಗಿಯಾಗಿದೆ. ಹೊಸ ವರ್ಷನ್ ನನ್ನು ಎಫ್ 8 ಡೆವಲಪರ್ ಗಳು ವಿನ್ಯಾಸಗೊಳಿಸಿದ್ದಾರೆ ಎಂದು ಹೇಳಿದ್ದಾರೆ.