Advertisement

Facebook account: ಮಹಿಳಾ ಪೊಲೀಸ್‌ ಸಿಬ್ಬಂದಿಯೊಬ್ಬರ ಫೇಸ್‌ಬುಕ್‌ ಖಾತೆ ಹ್ಯಾಕ್‌: ದೂರು

11:05 AM Jan 06, 2024 | Team Udayavani |

ಬೆಂಗಳೂರು:  ಸೈಬರ್‌ ಕಳ್ಳರು ಮಹಿಳಾ ಪೊಲೀಸ್‌ ಸಿಬ್ಬಂದಿಯೊಬ್ಬರ  ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿದ್ದಾರೆ. ಮಹಿಳಾ ಪೊಲೀಸ್‌ ಅಧಿಕಾರಿ ಕೆ.ಮೋಹಿನಿ ಕೇಂದ್ರ ವಿಭಾಗದ ಸಿಇಎನ್‌ ಠಾಣೆಗೆ ಕೊಟ್ಟ ದೂರಿನ ಆಧಾರದ ಮೇಲೆ ಎಫ್ಐಆರ್‌ ದಾಖಲಾಗಿದೆ.

Advertisement

8 ವರ್ಷ ಹಿಂದೆ ಪೇಸ್‌ಬುಕ್‌ ಖಾತೆ ರಚಿಸಿದ್ದ ಮೋಹಿನಿ, ಅದನ್ನು ಆಗಾಗ ಬಳಸುತ್ತಿದ್ದರು. ಜ.2ರಂದು ಫೇಸ್‌ಬುಕ್‌ ಬಳಸುತ್ತಿರಬೇಕಾದರೆ, ಅಪರಿಚಿತ ವ್ಯಕ್ತಿಗಳು ಮೋಹಿನಿ ಅವರ ಫೇಸ್‌ಬುಕ್‌ ಖಾತೆಯನ್ನು ಹ್ಯಾಕ್‌ ಮಾಡಿ, ಪಾಸ್‌ವರ್ಡ್‌ಅನ್ನು ಬದಲಿಸಿದ್ದಾರೆ. ಅಲ್ಲದೆ ಮೋಹಿನಿ ಅವರ ಫೋಟೋಗಳನ್ನು ಹ್ಯಾಕ್‌ ಮಾಡಿರುವ ಅಪರಿಚಿತ ವ್ಯಕ್ತಿಗಳು ದುರ್ಬಳಕೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಪೇಸ್‌ಬುಕ್‌ ಖಾತೆಯನ್ನು ಡಿಲಿಟ್‌ ಮಾಡುವಂತೆ ಹಾಗೂ ಹ್ಯಾಕ್‌ ಮಾಡಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮೋಹಿನಿ ಉಲ್ಲೇಖೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next