Advertisement

ಸೆಪ್ಟೆಂಬರ್‌ 15ರಿಂದ ಆಧಾರ್‌ನಲ್ಲಿ ಫೇಸ್‌ ರಿಕಗ್ನಿಶನ್‌ ಸೌಲಭ್ಯ

06:00 AM Aug 19, 2018 | |

ಹೊಸದಿಲ್ಲಿ: ಆಧಾರ್‌ ಪ್ರಾಧಿಕಾರ ಯುಐಡಿಎಐ ಫೇಸ್‌ ರಿಕಗ್ನಿಶನ್‌ ಸೌಲಭ್ಯವನ್ನು ಹೆಚ್ಚುವರಿ ದೃಢೀಕರಣವಾಗಿ ಪರಿಚಯಿಸಲು ನಿರ್ಧರಿಸಿದ್ದು, ಸೆಪ್ಟೆಂಬರ್‌ 15 ರಿಂದ ಟೆಲಿಕಾಂ ಸೇವೆ ಪೂರೈಕೆ ದಾರ ಕಂಪನಿಗಳಿಗೆ ಲಭ್ಯವಾಗಲಿದೆ. ಹಂತ ಹಂತ ವಾಗಿ ಇದನ್ನು ಪರಿಚಯಿಸಲಾಗುತ್ತಿದೆ. ಜುಲೈನಿಂ ದಲೇ ಈ ಸೌಲಭ್ಯ ಒದಗಿಸಲು ನಿರ್ಧ ರಿ ಸ ಲಾ ಗಿ ತ್ತಾದರೂ, ಮುಂದೂಡಲಾಗಿತ್ತು. ಅಷ್ಟೇ ಅಲ್ಲ, ಮುಂದಿನ ತಿಂಗಳಿಂದ ಈ ಸೌಲಭ್ಯವನ್ನು ಜಾರಿಗೆ ತರದ ಕಂಪನಿಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಸಿಮ್‌ ಖರೀದಿಸುವಾಗ ಆಧಾರ್‌ ಬೆರಳಚ್ಚು ತೆಗೆದುಕೊಳ್ಳುವುದರ ಜೊ ತೆಗೆ, ಲೈವ್‌ ಆಗಿ ಫೇಸ್‌ ರಿಕಗ್ನಿಶನ್‌(ಮುಖ ಗುರುತು) ಮೂಲಕವೂ ದೃಢೀಕರಣ ಪಡೆಯ ಬೇಕಿರುತ್ತದೆ. ಆದರೆ ಇದು ಗ್ರಾಹಕರಿಗೆ ಕಡ್ಡಾಯ ವಾಗಿರುವುದಿಲ್ಲ. ಬೆರಳಚ್ಚು ಗುರುತನ್ನು ನಕಲು ಮಾಡುವುದನ್ನು ತಡೆಯಲು ಈ ಕ್ರಮ ಜಾರಿಗೆ ತರಲಾಗಿದೆ. ಇದರಿಂದಾಗಿ ಆಧಾರ್‌ ಮೂಲಕ ನಡೆಸುವ ವಹಿವಾಟು ಇನ್ನಷ್ಟು ಸುಭದ್ರವಾ ಗಿರಲಿದೆ ಎಂದು ಆಧಾರ್‌ ಪ್ರಾಧಿಕಾರ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next