Advertisement

ಕೋವಿಡ್ ವಿರುದ್ಧ ಹೋರಾಡಲು ಆತ್ಮಸ್ಥೈರ್ಯವೇ ಮುಖ್ಯ: ಕೋವಿಡ್ ಗೆದ್ದ ತರೀಕೆರೆಯ ವೈದ್ಯ

01:56 PM May 25, 2021 | Team Udayavani |

ಚಿಕ್ಕಮಗಳೂರು: ಕೋವಿಡ್ ಗೆಲ್ಲಬೇಕಂದರೆ ಆತ್ಮಸ್ಥೈರ್ಯವೇ ಮುಖ್ಯ. ಪಾಸಿಟಿವ್ ಬಂದರೆ ಭಯಪಡದೇ ಧೈರ್ಯದಿಂದಲೇ ಎದುರಿಸಬೇಕು ಎನ್ನುತ್ತಾರೆ ಕೋವಿಡ್ ಗೆದ್ದ ತರೀಕೆರೆಯ ವೈದ್ಯ ಡಾ.ಗಿರೀಶ್.

Advertisement

ಕೋವಿಡ್ ಸೋಂಕಿನಿಂದ ಗುಣಮುಖರಾದ ಗಿರೀಶ್ ಅವರು ತಮ್ಮ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಸೋಂಕಿನ ಗುಣಲಕ್ಷಣ ಕಂಡುಬಂದರೆ ಮೊದಲು ಕೋವಿಡ್ ಪರೀಕ್ಷೆ ಮಾಡಿಸಬೇಕು. ಎರಡನೇ ಅಲೆ ಎದುರಿಸಲು ಭಯಪಡಬೇಡಿ. ಶೇ 95 ರಷ್ಟು ಜನರು ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ. ಶೇ 5 ರಷ್ಟು ಜನರು ನಿರ್ಲಕ್ಷ್ಯದಿಂದ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಧೈರ್ಯದಿಂದ ಕೋವಿಡ್ ಎದುರಿಸಿ ಎಂದರು.

ಇದನ್ನೂ ಓದಿ:2ನೇ ಡೋಸ್ ಗೆ ಮುಂದುವರಿದ ಅಲೆದಾಟ; ವಾರದ ನಂತರವೂ ಎಲ್ಲರಿಗೂ ಸಿಗುವುದು ಅನುಮಾನ

ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ, ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಿದರೆ ಕೋವಿಡ್ ಎದುರಿಸಬಹುದು. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಅವರಿಗೆ ನಮ್ಮ ಸಹಕಾರ ಬಹಳ ಮುಖ್ಯ ಎನ್ನುತ್ತಾರೆ ಡಾ.ಗಿರೀಶ್.

Advertisement

Udayavani is now on Telegram. Click here to join our channel and stay updated with the latest news.

Next