Advertisement

ಐಬ್ರೋ ಕೂದಲು ಮತ್ತೆ ಬೆಳೆಯಬೇಕೆ ? ಹಾಗಾದರೆ ಈ ಸುದ್ದಿ ತಪ್ಪದೆ ಓದಿ

04:55 PM Apr 13, 2021 | Team Udayavani |

ಕಾಮನಬಿಲ್ಲಿನಂತಹ ಹುಬ್ಬು ಕಥೆ, ಸಿನಿಮಾದಲ್ಲಿನ ನಾಯಕಿಯರಿಗೆ ಸೀಮಿತ. ನಮ್ಮಂಥವರಿಗಲ್ಲಎಂದು ಕೊರಗುವ ಕಾಲ ಇದಲ್ಲ. ಹುಬ್ಬಲ್ಲಿ ಕೂದಲು ಇಲ್ಲದವರಿಗೆ, ಇರುವ ಕೂದಲನ್ನು ಇನ್ನಷ್ಟು ದಟ್ಟವಾಗಿ ಬೆಳೆಸಲು, ಕೂದಲು ಉದುರದಿರಲು ಪ್ರತಿಯೊಂದಕ್ಕೂ ಪರಿಹಾರವಿದೆ.

Advertisement

ಮುಖ್ಯವಾಗಿ ಎಸ್ಜಿಮಾ, ಸೋರಿಯಾಸಿಸ್, ಕೂದಲಿನ ಕೋಶದಲ್ಲಿ ಸೋಂಕಿನಂತಹ ಚರ್ಮದ ಕಾಯಿಲೆಗಳು ನಿಮ್ಮ ಹುಬ್ಬುಗಳ ಸುತ್ತ ತುರಿಕೆ, ಕೆಂಪು ಬಣ್ಣದ ಮೃದು ಬಾವು ಮತ್ತು ಉರಿಯೂತ ಉಂಟುಮಾಡುತ್ತದೆ. ಆಗ ನಿಮ್ಮ ಕೂದಲು ಸ್ವಭಾವಿಕವಾಗಿ ಉದುರುತ್ತದೆ. ಹುಬ್ಬಿನ ಕೂದಲು ಉದುರುವುದರಿಂದ ಆತಂಕಕ್ಕೆ ಒಳಗಾಗುವ ಅಗತ್ಯತೆ ಇಲ್ಲ. ಯಾಕಂದರೆ ಕೆಲವೊಂದು ವಿಧಾನದ ಮೂಲಕ ಐಬ್ರೋ ಕೂದಲನ್ನು ಮತ್ತೆ ಬೆಳೆಯುವಂತೆ ಮಾಡಬಹುದು.

ಐಬ್ರೋ ಕೂದಲು ಮತ್ತೆ ಬೆಳೆಯಲು ಇದನ್ನು ಹಚ್ಚಿ

ಅಲೋವೆರಾ ಜೆಲ್ : ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಹಾಗಾಗಿ ಐಬ್ರೋಗೆ ಇದನ್ನು ಹಚ್ಚುತ್ತಾ ಬಂದರೆ ಕೂದಲು ಮತ್ತೆ ಬೆಳೆಯುತ್ತದೆ.

ಈರುಳ್ಳಿ ರಸ : ಇದು ಕೂದಲಿನ ಬೆಳವಣಿಗೆಗೆ ಸಹಕಾರಿ. ಹಾಗಾಗಿ ಈರುಳ್ಳಿ ರಸ ತೆಗೆದು ಅದನ್ನು ಐಬ್ರೋಗೆ ಹಚ್ಚಿದರೆ ಕೂದಲು ಮತ್ತೆ ಹುಟ್ಟುತ್ತವೆ.

Advertisement

ಟೀ ಟ್ರೀ ಆಯಿಲ್ : ಇದು ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗಾಗಿ ಟೀಟ್ರೀ ಆಯಿಲ್ ಗೆ ಬಾದಾಮಿ ಎಣ‍್ಣೆಯನ್ನು ಮಿಕ್ಸ್ ಮಾಡಿ ಹಚ್ಚಿ.

ಮನೆಯಲ್ಲಿಯೇ ಈ ಮೇಲಿನ ವಿಧಾನಗಳ ಮೂಲಕ ಸುಂದರ ಹಾಗೂ ದಟ್ಟವಾದ ಐಬ್ರೋ ನಿಮ್ಮದಾಗಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next