Advertisement

40 ವಯಸ್ಸಿನ ನಂತರ ವರ್ಷಕೊಮ್ಮೆ ನೇತ್ರಾ ಪರೀಕ್ಷೆ ಅಗತ್ಯ

05:36 PM Mar 09, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾ ಅಂಧತ್ವ ನಿವಾರಣಾ ಕಾರ್ಯಕ್ರಮದ ಅಡಿಯಲ್ಲಿ ಸೋಮವಾರ ಜಿಲ್ಲಾ ಆಸ್ವತ್ರೆ ಮುಂಭಾಗ ಗ್ಲಾಕೋಮಾ ಸಪ್ತಾಹ ವಾಹನಕ್ಕೆ ಜಿಲ್ಲಾಧಿಕಾರಿ ಆರ್‌.ಲತಾ ಚಾಲನೆ ನೀಡಿದರು.

Advertisement

40 ವಯಸ್ಸಿನ ನಂತರ ಪ್ರತಿಯೊಬ್ಬರೂ ವರ್ಷಕೊಮ್ಮೆ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿ ಕೊಳ್ಳುವುದು ಸೂಕ್ತ. ಗ್ಲಾಕೋಮಾದಲ್ಲಿ ಕಣ್ಣಿನೊಳಗಿನ ಒತ್ತಡವು ಹೆಚ್ಚಾಗುವುದರಿಂದಕಣ್ಣಿನ ಆಪ್ಟಿಕ್‌ ನರಗಳು ಹಾನಿಗೊಳ್ಳುತ್ತವೆ. ಸೂಕ್ತ ಚಿಕಿತ್ಸೆ ಅಗತ್ಯ: ದೃಷ್ಟಿಯು ಕ್ರಮೇಣ ವಾಗಿ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಇದಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ, ಗ್ಲಾಕೋ ಮಾದಿಂದ ಶಾಶ್ವತ ಕುರುಡುತನವಾಗ ಬಹುದು. ಆದ್ದರಿಂದ ಇದರ ಶೀಘ್ರ ಪತ್ತೆ ಹಾಗೂ ಸೂಕ್ತ ಚಿಕಿತ್ಸೆ ಇದನ್ನು ತಡೆಗಟ್ಟುವಲ್ಲಿ ಅವಶ್ಯಕವಾಗಿರುತ್ತದೆ ಎಂದರು.

ಜಿಲ್ಲೆಯಾದ್ಯಂತಹ ಈಗಾಗಲೇ ಪ್ರಾಥಮಿಕ, ಸಮುದಾಯ, ನಗರ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾಆಸ್ಪತ್ರೆಗಳಲ್ಲಿ ನೇತ್ರ ತಪಾಸಣೆ ನಡೆಸುತ್ತಿದ್ದು, ಸದುಪಯೋಗ ಪಡೆಯಬೇಕು ಎಂದರು.

ಎಚ್ಚರ ವಹಿಸಿ: ಗ್ಲಾಕೋಮಾ ಸಮಸ್ಯೆಯುಳ್ಳ ವರಿಗೆ ಅಗತ್ಯ ಚಿಕಿತ್ಸೆ ಜೊತೆಗೆ ಸಲಹೆ ನೀಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಗ್ಲಾಕೋಮಾ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗು ತ್ತಿದೆ. ದೃಷ್ಠಿ ಮತ್ತು ಜೀವನವನ್ನು ಕತ್ತಲಾಗಿ ಸಲು ಬಿಡದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು ಎಂದರು.

ಪರೀಕ್ಷೆ ಅಗತ್ಯ: ಯಾವುದೇ ರೋಗ ಲಕ್ಷಣಗಳಿಲ್ಲದೆ ದೃಷ್ಟಿ ಕದಿಯುವ ಕಾಯಿಲೆ ಗ್ಲಾಕೋಮಾ. ಆದ್ದರಿಂದ ಪ್ರತಿಯೊಬ್ಬರೂ 40 ವಯಸ್ಸಿನ ನಂತರ ಮಧುಮೇಹ, ರಕ್ತ ದೊತ್ತಡ ಹಾಗೂ ಸಮೀಪ ದೃಷ್ಟಿದೋಷ ವಿರುವವರಲ್ಲಿ ಗ್ಲಾಕೋಮಾ ಆಗುವ ಸಂಭವ ಹೆಚ್ಚು. ಪದೇ ಪದೆ ಕನ್ನಡಕದ ಸಂಖ್ಯೆ ಬದಲಾಯಿಸಬೇಕಾದಲ್ಲಿ ಕಡ್ಡಾಯವಾಗಿ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳತಕ್ಕದ್ದು ಎಂದರು.

Advertisement

ಸಹಾಯವಾಣಿ: ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಶಾಶ್ವತ ಅಂಧತ್ವ ಉಂಟಾಗುತ್ತದೆ. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಅತ್ಯಗತ್ಯ. ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡಬಹುದೆಂದು ಎಂದರು. ಇದೇ ವೇಳೆ ಅಪೌಷ್ಠಿಕ ಮಕ್ಕಳ ಪುನಶ್ಚೇತನ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಡಾ.ಇಂದಿರಾ ಆರ್‌.ಕಬಾಡೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್‌,ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ.ಶಿವ ಕುಮಾರ್‌, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಗ್ಲಾಕೋಮಾದಲ್ಲಿ ನೇರ ದೃಷ್ಟಿಯು ಸರಿಯಾಗಿದ್ದರೂ ದೃಷ್ಟಿ ವಲಯವು ಕುಗ್ಗುತ್ತಾ ಬರುತ್ತದೆ. ಮನೆಯಲ್ಲಿ ಯಾರಾದರೂ ಗ್ಲಾಕೋಮಾದಿಂದ ಬಳಲುತ್ತಿದ್ದರೆ ಆ ಮನೆಯ ಇತರ ಸದಸ್ಯರು ಕಡ್ಡಾಯವಾಗಿ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳತಕ್ಕದ್ದು. ವೈದ್ಯರು ನೀಡಿದ ಸಲಹೆ ಪರಿಪಾಲಿಸುವುದು. ಆರ್‌.ಲತಾ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next