Advertisement
ದಪ್ಪ ಪ್ರೇಮಿನ ತಂಪು ಕನ್ನಡಕಗಳು, ಚಿಕ್ಕ ಪ್ರೇಮ್‌ನ ತಂಪು ಕನ್ನಡಕಗಳು, ದೊಡ್ಡ ಗ್ಲಾಸ್ ತಂಪು ಕನ್ನಡಕಗಳು, ಪ್ರೇಮ್ ಇಲ್ಲದ ಬರೀ ಗ್ಲಾಸ್ ಉಳ್ಳ ತಂಪು ಕನ್ನಡಕ ಹೀಗೆ ಫ್ಯಾಷನ್ ಲೋಕದಲ್ಲಿ ಅದೆಷ್ಟೋ ಪ್ರಕಾರದ ತಂಪು ಕನ್ನಡಕಗಳು ಬಂದವು, ಹೋದವು. ಏವಿಯೇಟರ್, ವೇಯೆರರ್, ಅಲ್ಲದೆ ಚಿತ್ರ ವಿಚಿತ್ರ ಆಕಾರದ ತಂಪು ಕನ್ನಡಕಗಳು ಇದೀಗ ಮಿರರ್ ಶೇಡ್ಸ್‌ನೊಂದಿಗೆ ಲಭ್ಯ ಇವೆ. ಇವುಗಳು ಹೊಸತೇನಲ್ಲ. ಆದರೆ ಟ್ರೆಂಡ್ ಆಗುತ್ತಿರುವ ಕಾರಣ ಇವುಗಳಿಗೆ ಬೇಡಿಕೆ ಹೆಚ್ಚಾಗಿವೆ.
ಹೆಣ್ಣು ಮಕ್ಕಳಷ್ಟೇ ಧರಿಸಬಲ್ಲ ಕ್ಯಾಟ್ ಐ ಪ್ರೇಮ್‌ನ ತಂಪು ಕನ್ನಡಕಗಳಲ್ಲಿಯೂ ಬಗೆಬಗೆಯ ಪ್ರಕಾರಗಳನ್ನು ಹೊರತಂದಿದ್ದಾರೆ. ಪ್ರೇಮ್‌ಗಳಲ್ಲಿ ಮುತ್ತು, ವಜ್ರದ ರೀತಿಯ ಅಲಂಕಾರಿಕ ಕಲ್ಲುಗಳು, ಗರಿಗಳು ಮತ್ತು ಅನಿಮಲ್ ಪ್ರಿಂಟ್ ಬಳಸಿದ್ದಾರೆ. ಚಿರತೆ, ಹುಲಿ, ಹಾವು, ಜೀಬ್ರಾ, ಬೆಕ್ಕು, ಸೇರಿದಂತೆ ಚುಕ್ಕಿ, ಪಟ್ಟೆ ಇರುವ ಪ್ರಾಣಿಗಳ ಮೈಬಣ್ಣವನ್ನು ತಂಪು ಕನ್ನಡಕಗಳ ಪ್ರೇಮ್‌ನಲ್ಲಿ ಬಳಸಿ ಕ್ಯಾಟ್ ಐ ಶೈಲಿಗೆ ಹೊಸ ಮೆರಗು ನೀಡಿದ್ದಾರೆ. ಇಂಥ ಪ್ರೇಮ್ ಉಳ್ಳ ಮಿರರ್ ಶೇಡ್ಸ್ ತೊಟ್ಟು ಮಹಿಳೆಯರು, ಹೆಚ್ಚು ಸ್ಟೈಲಿಶ್ ಆಗಿ ಕಾಣಿಸೋದು ಸುಳ್ಳಲ್ಲ. ಗಾಂಧಿ ಮಿರರ್ ಶೇಡ್ಸ್
ಕೇವಲ ಉರುಟು ಆಕಾರ ಅಲ್ಲದೆ ಷಟ್ಕೊನ, ಪೆಂಟಗನ್, ಅಷ್ಟಭುಜ ಆಕಾರದ ಪ್ರೇಮ್‌ಗಳಲ್ಲೂ ಮಿರರ್ ಶೇಡ್ಸ್‌ಗಳು ಸಿಗುತ್ತವೆ. ಅಷ್ಟೇ ಅಲ್ಲದೆ, ಹೃದಯಾಕಾರ (ಹಾರ್ಟ್ ಶೇಪ್), ನಕ್ಷತ್ರ ಆಕಾರ, ಅರ್ಧ ಚಂದ್ರ, ಸೂರ್ಯ ಹಾಗೂ ಐಸ್‌ಕ್ರೀಮ್ ಕೋನ್ ಆಕಾರಗಳಲ್ಲೂ ಮಿರರ್ ಶೇಡ್ಸ್ ಲಭ್ಯ. ಲೇಖಕಿ ಜೆ. ಕೆ. ರೌಲಿಂಗ್ ಅವರ ಕಾಲ್ಪನಿಕ ಪಾತ್ರ ಹ್ಯಾರಿ ಪಾಟರ್ ತೊಡುವ ಕನ್ನಡಕ, ಸುಪ್ರಸಿದ್ಧ ಬ್ಯಾಂಡ್ ಬೀಟಲ್ಸ್‌ನ ಸಂಗೀತಗಾರ ಜಾನ್ ಲೆನನ್ ತೊಡುತ್ತಿದ್ದ ಕನ್ನಡಕ, ಮಹಾತ್ಮ ಗಾಂಧಿಯವರು ತೊಡುತ್ತಿದ್ದ ಕನ್ನಡಕ, ಇವೆಲ್ಲವೂ ಹೊಸ ರೂಪ ಪಡೆದು ಮಿರರ್ ಶೇಡ್ಸ್ ಆಗಿ ರೂಪಾಂತರಗೊಂಡು, ಹ್ಯಾರಿ ಪಾಟರ್ ಮಿರರ್ ಶೇಡ್ಸ್ , ಜಾನ್ ಲೆನನ್ ಮಿರರ್ ಶೇಡ್ಸ್, ಗಾಂಧಿ ಮಿರರ್ ಶೇಡ್ಸ್ ಎಂದೇ ಹೆಸರು ಪಡೆದಿವೆ. ಇಂಥ ಮಿರರ್ ಶೇಡ್ಸ್ ಅನ್ನು ಮಹಿಳೆಯರೂ ತೊಡಬಹುದು.
Related Articles
ಮಿರರ್ ಶೇಡ್ಸ್‌ನ ಜಗತ್ತಿನಲ್ಲಿ ಹೆಚ್ಚು ಸದ್ದು ಮಾಡಿದ ಕನ್ನಡಕವೆಂದರೆ, ಅದು ರನ್ವೇ ಶೀಲ್ಡ…. ಇದು ಇತರ ಕನ್ನಡಕಗಳಂತೆ ಬಲಗಣ್ಣಿಗೊಂದು, ಎಡಗಣ್ಣಿಗೊಂದು ಗ್ಲಾಸ್ ಅಲ್ಲ. ಬದಲಿಗೆ ಇದು ಒಂದೇ ಮಿರರ್ ಗ್ಲಾಸ್‌ನಿಂದ ಮಾಡಿದ ಪಟ್ಟಿಯಂಥದ್ದು. ಕನ್ನಡಕಕ್ಕಿಂತ ಹೆಚ್ಚಾಗಿ, ಕಣ್ಣಿಗೆ ಲೋಹದ ಪಟ್ಟಿ ತೊಟ್ಟಂತೆ ಕಾಣುವುದರಿಂದ ಇದರ ಹೆಸರು ರನ್ವೇ ಶೀಲ್ಡ್!
Advertisement
ಅದಿತಿಮಾನಸ ಟಿ.ಎಸ್.