Advertisement

ನೇತ್ರದಾನದಿಂದ ವ್ಯಕ್ತಿಗೆ ಮರುಜೀವ : ಮೀನಾಕ್ಷಿ 

05:09 PM Mar 21, 2017 | Harsha Rao |

ಕೊಟ್ಟಾರ: ಕಣ್ಣು ದೇಹದ ಅತಿ ಶ್ರೇಷ್ಠ ಅಂಗವಾಗಿದ್ದು, ಅದು ನಮಗೆ ಜಗತ್ತಿನ ಬೆಳಕನ್ನು ತೋರಿಸುತ್ತದೆ. ನಾವು ನೇತ್ರದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡರೆ ಒಬ್ಬ ವ್ಯಕ್ತಿಗೆ ಮರುಜೀವ ಕೊಟ್ಟ ಪುಣ್ಯ ಪ್ರಾಪ್ತವಾಗುತ್ತದೆ ಎಂದು  ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಳಿಸಿದರು.

Advertisement

ಇಲ್ಲಿನ ಜಿ.ಪಂ.ಸಭಾಂಗಣದಲ್ಲಿ  ಜಿ.ಪಂ.ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿ.ಪಂ. ಅಧಿಕಾರಿಗಳು ಹಾಗೂ ಸಿಬಂದಿಗೆ  ಸೋಮವಾರ  ಆಯೋಜಿಸಿದ್ದ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,  ನೇತ್ರದಾನದ ಮಹತ್ವ ಅರಿತುಕೊಂಡು ಅದನ್ನು ಇನ್ನೊಬ್ಬರಿಗೂ ತಿಳಿಸುವ ಪ್ರಯತ್ನ ಮಾಡಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಮಾತನಾಡಿ, ನಮ್ಮ ದೈನಂದಿನ ಬದುಕಿನ ಸಮಯ ನಿರ್ವ ಹಣೆಯಲ್ಲಿ ಎಡವುತ್ತಿರುವುದರಿಂದ ಒತ್ತಡಕ್ಕೆ ಒಳಗಾಗುತ್ತಿದ್ದೇವೆ. ಒತ್ತಡ ಎನ್ನುವುದು ನಮ್ಮ ಇಡೀ ಕಾರ್ಯವೈಖರಿಯನ್ನು ಕಟ್ಟಿ ಹಾಕುತ್ತಿದ್ದು, ನಾವು  ಅದರ ನಿರ್ವಹಣೆ ಕೌಶಲವನ್ನು ಕರಗತ ಮಾಡಿಕೊಂಡಿರಬೇಕು.

ಸಹಾಯ ಎನ್ನುವುದನ್ನು ನಾವು ಒಂದು ಧರ್ಮವಾಗಿ ಸ್ವೀಕರಿಸಿಕೊಂಡಿದ್ದೇವೆ. ಸತ್ತ ಬಳಿಕ ಮಣ್ಣಾಗಿ ಹೋಗುವ ದೇಹದ ಕೆಲವು ಭಾಗಗಳನ್ನು ದಾನ ಮಾಡುವುದರಿಂದ ನಮ್ಮ ಜೀವನಕ್ಕೆ ನಿಜವಾದ ಅರ್ಥ ಬರುತ್ತದೆ. ನಾವು ಜೀವನದ ಸಂಭ್ರಮದ ಕ್ಷಣಗಳನ್ನು ಇಂತಹ ದಾನಗಳ ಮೂಲಕ ಆಚರಿಸಬೇಕು. ನಾನು ಮತ್ತು ನನ್ನ ಹೆಂಡತಿ ನಮ್ಮ ಮದುವೆಯ 25ನೇ ವರ್ಷದ ಸಂಭ್ರಮವನ್ನು ನೇತ್ರ ದಾನ ನೋಂದಣಿ ಮಾಡುವ ಮೂಲಕ ಆಚರಿಸಿದ್ದೇವೆ ಎಂದು ಡಾ| ರವಿ ತಿಳಿಸಿದರು. 

ಉದ್ಘಾಟನೆಯ ಬಳಿಕ ಕುಷ್ಠರೋಗ ನಿರ್ವಹಣೆ, ನೇತ್ರದಾನ ಅರಿವು ಹಾಗೂ ಒತ್ತಡ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.

Advertisement

ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌, ಸಂಪನ್ಮೂಲಕ ವ್ಯಕ್ತಿಗಳಾದ ಡಾ| ಜಯಂತ್‌, ಡಾ| ಶ್ರೀನಿವಾಸ್‌ ಭಟ್‌ ವೇದಿಕೆಯಲ್ಲಿದ್ದರು. ವೈದ್ಯಾಧಿಕಾರಿ ಡಾ| ರತ್ನಾಕರ್‌ ಸ್ವಾಗತಿಸಿದರು. 

ವೆನಲಾಕ್ಗೆ ನೇತ್ರಬ್ಯಾಂಕ್‌.!
ವೈದ್ಯಕೀಯ ಕ್ಷೇತ್ರದಲ್ಲಿ ಮಂಗಳೂರು ಅಭಿವೃದ್ಧಿ ಸಾಧಿಸಿದ್ದರೂ, ನಗರದಲ್ಲಿ ಸರಕಾರಿ ನೇತ್ರಬ್ಯಾಂಕ್‌ ಇಲ್ಲ ಎಂಬ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ವೆನಲಾಕ್ ಆಸ್ಪತ್ರೆಗೆ ನೇತ್ರ ಬ್ಯಾಂಕ್‌ ಮಂಜೂರು ಮಾಡ ಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಈ ಕುರಿತು ವೈದ್ಯ ಕೀಯ ಅಧೀಕ್ಷಕರಲ್ಲಿ ಮಾತುಕತೆ ನಡೆಸ ಲಾಗಿದ್ದು, 10 ಸಾವಿರ ಮಂದಿ ಯಿಂದ ನೇತ್ರದಾನದ ಕುರಿತು ನೋಂದಣಿ ಮಾಡಿಸಿಕೊಳ್ಳುವ ಯೋಚನೆ ಇದೆ ಎಂದು ಜಿ. ಪಂ. ಸಿಇಒ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next