Advertisement
ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಈ ಬಾರಿ ದೀಪಾವಳಿಗೆ ಹಸಿರು ಪಟಾಕಿ ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಅಲ್ಲದೆ, ನ.12 ರಂದು ಹಸಿರು ಪಟಾಕಿ ಹೊರತಾಗಿ ಇತರೆ ಪಟಾಕಿ ಮಾರಾಟ ಮಾಡುವುದು ಹಾಗೂ ಸಿಡಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿತ್ತು.
Related Articles
Advertisement
ನಿರ್ಲಕ್ಷ್ಯವೇ ಕಾರಣ!: ನಗರದ 59 ಕಡೆಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಇಲ್ಲಿನ ಪಟಾಕಿ ಮಳಿಗೆಗಳಿಗೆ ತೆರಳಿ ಕಡ್ಡಾಯವಾಗಿ ಹಸಿರು ಪಟಾಕಿ ಮಾರಾಟ ಮಾಡುತ್ತಿದ್ದಾರೆಯೇ ತಪಾಸಣೆ ನಡೆಸುವಂತೆ ಸರ್ಕಾರ ಸೂಚಿಸಿತ್ತು. ಆದರೆ, ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಹುತೇಕ ಕಡೆ ಸರಿಯಾಗಿ ತಪಾಸಣೆ ಕಾರ್ಯ ನಡೆದಿಲ್ಲ. ರಾಜಾಜಿನಗರದಲ್ಲಿ ಮಾತ್ರ ಮೂವರು ವ್ಯಾಪಾರಿಗಳಿಗೆ ಸ್ಫೋಟಕ ವಸ್ತುಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ವರ್ಷಕಿಂತ್ಕ ಕಡಿಮೆಹಾನಿ : ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿಯಿಂದಕಣ್ಣಿಗೆ ಹಾನಿ ಮಾಡಿಕೊಂಡವರ ಸಂಖ್ಯೆ ಅರ್ಧದಷ್ಟುಕಡಿಮೆಯಾಗಿದೆ. ನಗರದಲ್ಲಿ 2019ರಲ್ಲಿ120 ಮಂದಿ ಕಣ್ಣಿಗೆ ಹಾನಿಯಾಗಿತ್ತು. ಈ ಬಾರಿ 50ಕ್ಕೆ ಇಳಿಕೆಯಾಗಿದೆ, ಇದಕ್ಕೆ ಪ್ರಮುಖ ಕಾರಣ ಕೋವಿಡ್ ಹಿನ್ನೆಲೆ ಬಹುತೇಕ ಮಂದಿ ಪಟಾಕಿಯಿಂದ ಹಿಂದುಳಿದಿದ್ದಾರೆ. ಜತೆಗೆ ಹಸಿರು ಪಟಾಕಿ ಬಳಕೆಯು ಪರಿಣಾಮ ಬೀರಿದೆ.
ಸರ್ಕಾರ ಕೊನೆಯ ಹಂತದಲ್ಲಿ ನಿಯಮ ಜಾರಿಗೊಳಿಸಿದ್ದರಿಂದ ಅನೇಕರು ಸಾಮಾನ್ಯ ಪಟಾಕಿ ಪೆಟ್ಟಿಗೆ ಮೇಲೆ ಹಸಿರು ಪಟಾಕಿ ಎಂಬ ನಕಲಿ ಮಾಹಿತಿ ಚೀಟಿ ಹಾಕಿ ಮಾರಾಟ ಮಾಡಿದ್ದಾರೆ. ಆಕೃತಿ, ಗಾತ್ರ ಮತ್ತು ಶಬ್ಧದಲ್ಲಿ ಯಾವುದೇ ವ್ಯತ್ಯಾಸ ಇಲ್ಲದ ಹಿನ್ನೆಲೆ ಗ್ರಾಹಕರು ಕೂಡಾ ಹಸಿರು ಪಟಾಕಿ ಎಂದು ಖರೀದಿಸಿದ್ದಾರೆ. ಹೆಚ್ಚಿನ ಹಣ ಬಂಡವಾಳ ಹಾಕಿ ಹಸಿರು ಪಟಾಕಿ ಮಾರಾಟ ಮಾಡಿದ ಅನೇಕರಿಗೆ ನಷ್ಟವಾಗಿದೆ. – ಶಿವಪ್ರಕಾಶ್, ಹಸಿರು ಪಟಾಕಿ ಮಾರಾಟಗಾರರು
ಹಸಿರು ಪಟಾಕಿಎಂದೇ ಖರೀದಿಸಿದೆವು. ಆದರೆ, ಮನೆಗೆ ತೆರಳಿ ನೋಡಿದಾಗ ಪೆಟ್ಟಿಗೆ ಒಳಗೆ ಸಾಮಾನ್ಯ ಪಟಾಕಿಇದ್ದವು. ಮಗಳುಹೂ ಕುಂಡಹಚ್ಚಿದ್ದು, ಒಮ್ಮೆಗೆ ಸ್ಫೋಟಗೊಂಡಿತು. ಮುಖಭಾಗಹಾನಿಯಾಗಿದೆ. – ಹೆಸರು ಬೇಡ, ಗಾಯಗೊಂಡ ಮಗುವಿನ ತಾಯಿ
ಈ ಬಾರಿ ಪಟಾಕಿ ಹಾನಿಗೊಳಗಾಗಿ ಮಿಂಟೋ ಆಸ್ಪತ್ರೆಗೆ ಬಂದ 11 ಮಂದಿ ಪೈಕಿಎಲ್ಲರೂ ಸಾಮಾನ್ಯ ಪಟಾಕಿಯನ್ನೇ ಬಳಸಿದ್ದಾರೆ. ಹಸಿರು ಪಟಾಕಿ ಮತ್ತು ಅದರ ಲಭ್ಯತೆ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಹೆಚ್ಚಿನ ಮಾಲಿನ್ಯಕಾರಕ ರಾಸಾಯನಿಕಗಳುಕಣ್ಣಿಗೆ ಸೇರಿದ್ದು, ಒಂಬತ್ತು ಮಕ್ಕಳಕಣ್ಣಿನ ಗುಡ್ಡೆಗೆ ತೀವ್ರ ಹಾನಿಯಾಗಿದೆ, ಇಬ್ಬರಿಗೆ ದೃಷ್ಟಿ ಹಾನಿಯಾಗಿದೆ. – ಡಾ.ಸುಜಾತಾ ರಾಥೋಡ್, ನಿರ್ದೇಶಕರು ಮಿಂಟೋ ಕಣ್ಣಿನ ಆಸ್ಪತ್ರೆ
ಹಸಿರು ಹೆಸರಲ್ಲಿ ಸಾಮಾನ್ಯ ಪಟಾಕಿ ಮಾರಾಟ ಕೆಲವೆಡೆ ಹಸಿರು ಪಟಾಕಿ ಹೆಸರಿನಲ್ಲಿ ಸಾಮಾನ್ಯ ಪಟಾಕಿಗಳನ್ನೇ ನೀಡಲಾಗಿದೆ. ಹಬ್ಬದ ಹಿಂದಿನ ದಿನ ಮಾರಾಟಕ್ಕೆ ಅನುಮತಿ ನೀಡಿದ ಹಿನ್ನೆಲೆ ಬಹುತೇಕ ಮಳಿಗೆಗಳಲ್ಲಿ ಜನದಟ್ಟಣೆ ಹೆಚ್ಚಿತ್ತು. ಈ ವೇಳೆ ಸಾಮಾನ್ಯ ಪಟಾಕಿಯನ್ನೇ ಹಸಿರು ಪಟಾಕಿ ಎಂದು ಮಾರಾಟ ಮಾಡಲಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.