Advertisement

ನಾಳೆ ಯುಪಿ ಮೊದಲ ಹಂತದ ವೋಟಿಂಗ್ : 9 ಸಚಿವರ ಭವಿಷ್ಯ ನಿರ್ಧಾರ

07:45 PM Feb 09, 2022 | Team Udayavani |

ಲಕ್ನೋ : ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ 9 ಸಚಿವರ ಚುನಾವಣಾ ಭವಿಷ್ಯವನ್ನು ಫೆಬ್ರವರಿ 10, ಗುರುವಾರ ಮತದಾರರು ನಿರ್ಧರಿಸಲಿದ್ದಾರೆ.

Advertisement

ಪಶ್ಚಿಮ ಉತ್ತರ ಪ್ರದೇಶದ 11 ಜಿಲ್ಲೆಗಳಲ್ಲಿ ಹರಡಿರುವ 58 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಮೊದಲ ಹಂತದ ಮತದಾನ ನಡೆಯಲಿದೆ. ಶಾಮ್ಲಿ, ಹಾಪುರ್, ಗೌತಮ್ ಬುದ್ಧ ನಗರ, ಮುಜಾಫರ್‌ನಗರ, ಮೀರತ್, ಬಾಗ್‌ಪತ್, ಗಾಜಿಯಾಬಾದ್, ಬುಲಂದ್‌ಶಹರ್, ಅಲಿಗಢ್, ಮಥುರಾ ಮತ್ತು ಆಗ್ರಾ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.
ಛಾಟಾದಿಂದ ಲಕ್ಷ್ಮೀನಾರಾಯಣ ಚೌಧರಿ, ಶಿಕರ್‌ಪುರದಿಂದ ಅನಿಲ್ ಶರ್ಮಾ, ಆಗ್ರಾ ನಗರದಿಂದ ಜಿಎಸ್ ಧರ್ಮೇಶ್, ಹಸ್ತಿನಾಪುರದ ದಿನೇಶ್ ಖಟಿಕ್ ಅವರ ಭವಿಷ್ಯ ನಿರ್ಧಾರವಾಗಲಿದೆ.

ಕಣದಲ್ಲಿರುವ ಪ್ರಮುಖರೆಂದರೆ, ಮಥುರಾದಿಂದ ಶ್ರೀಕಾಂತ್ ಶರ್ಮಾ, ಗಾಜಿಯಾಬಾದ್‌ನಿಂದ ಅತುಲ್ ಗಾರ್ಗ್, ಥಾನಾ ಭವನದಿಂದ ಸುರೇಶ್ ರಾಣಾ, ಮುಜಾಫರ್ ನಗರದಿಂದ ಕಪಿಲ್‌ದೇವ್ ಅಗರ್ವಾಲ್ ಮತ್ತು ಅತ್ರೌಲಿಯಿಂದ ಸಂದೀಪ್ ಸಿಂಗ್.

ಇತರ ಪ್ರಮುಖ ಅಭ್ಯರ್ಥಿಗಳೆಂದರೆ ಆಗ್ರಾ ಗ್ರಾಮಾಂತರದಿಂದ ಉತ್ತರಾಖಂಡದ ಮಾಜಿ ಗವರ್ನರ್ ಬೇಬಿ ರಾಣಿ ಮೌರ್ಯ, ನೋಯ್ಡಾದಿಂದ ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷ ಪಂಕಜ್ ಸಿಂಗ್ ಮತ್ತು ಕೈರಾನಾದಿಂದ ಮೃಗಾಂಕಾ ಸಿಂಗ್ ಅವರು ಕಣದಲ್ಲಿದ್ದಾರೆ.

ಮೊದಲ ಹಂತದಲ್ಲಿ 623 ಅಭ್ಯರ್ಥಿಗಳು ಕಣದಲ್ಲಿದ್ದು, ಸುಮಾರು 2.27 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. 2017 ರಲ್ಲಿ 58 ಸ್ಥಾನಗಳ ಪೈಕಿ ಬಿಜೆಪಿ 53 ಸ್ಥಾನಗಳನ್ನು ಗಳಿಸಿತ್ತು, ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ತಲಾ ಎರಡು ಸ್ಥಾನಗಳನ್ನು ಪಡೆದಿದ್ದರೆ ಒಂದು ಸ್ಥಾನ ರಾಷ್ಟ್ರೀಯ ಲೋಕದಳದ ಪಾಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next