Advertisement

ಅತಿರೇಕಗೊಂಡಿದೆ ವಾಣಿಜ್ಯೀಕರಣ

11:53 AM Jun 11, 2018 | Team Udayavani |

ಬೆಂಗಳೂರು: ಪಾಶ್ಚಾತ್ಯರ ವಾಣಿಜ್ಯೀಕರಣದ ಅತಿರೇಕವು ವಿಜ್ಞಾನದ ದಿಕ್ಕನ್ನೇ ಬದಲಿಸಿದ್ದು, ಇದು ಇಂದು ಮಾನವಕುಲವನ್ನು ಭಯಾನಕ ಸ್ಥಿತಿಗೆ ತಂದುನಿಲ್ಲಿಸಿದೆ ಎಂದು ಆಹಾರ ತಜ್ಞ ಡಾ.ಖಾದರ್‌ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ನಗರದ ಲಾಲ್‌ಬಾಗ್‌ನಲ್ಲಿ ಭಾನುವಾರ ಗ್ರಾಮೀಣ ಕುಟುಂಬ ಮತ್ತು ಗ್ರಾಮೀಣ ನ್ಯಾಚುರಲ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಗ್ರಾಮೀಣ ಕುಟುಂಬ ಉತ್ಸವ’ದ ಸಂವಾದದಲ್ಲಿ ಮಾತನಾಡಿದ ಅವರು, ಎಲ್ಲವನ್ನೂ ಈಗ ವಾಣಿಜ್ಯೀಕರಣ ನಿರ್ಧರಿಸುತ್ತಿದೆ. ವಿಜ್ಞಾನದ ದಿಕ್ಕು ಕೂಡ ಈ ಪಾಶ್ಚಾತ್ಯರ ವಾಣಿಜ್ಯೀಕರಣ ಬದಲಾಯಿಸಿದೆ. ವಿಜ್ಞಾನವು ತನ್ನ ಮೂಲ ಹಾದಿಯನ್ನು ತೊರೆದು ಬೇರೆ ಬೇರೆ ಆಯಾಮಗಳಲ್ಲಿ ಹೋಗುತ್ತಿದ್ದು, ಇದು ಮಾನ ಕುಲವನ್ನು ಭಯಾನಕ ಸ್ಥಿತಿಗೆ ತಂದುನಿಲ್ಲಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಪೇಟೆಂಟ್‌ ಎನ್ನುವುದು ಒಂದು ದಂಧೆ ಆಗಿದೆ. ಬುದ್ಧಿವಂತಿಕೆ ಮಾರಾಟ ಮಾಡಿಕೊಳ್ಳುವ ಬುದ್ಧಿಮಾಂದ್ಯತೆ ನಮ್ಮನ್ನು ಆವರಿಸಿದೆ. ಈ ಬುದ್ಧಿಮಾಂದ್ಯತೆಯಿಂದ ಹೊರಬರುವ ಅವಶ್ಯಕತೆ ಇದೆ ಎಂದ ಡಾ.ಖಾದರ್‌, ದೇವರು ಕೊಟ್ಟ ಸ್ವಾಭಾವಿಕ ಪದಾರ್ಥಗಳನ್ನು ಸಹಜವಾಗಿ ಬಳಸದೆ ಇರುವುದರಿಂದ ಜೀವಸಂಕುಲ ಗೊಂದಲಕ್ಕೆ ಸಿಲುಕಿದೆ ಎಂದು ಇದೇ ವೇಳೆ ತಿಳಿಸಿದರು. 

ಇದ್ಯಾವ ತರ್ಕ?: ಡೇಂ à ಬಂದರೆ ಸೊಳ್ಳೆ ಕೊಲ್ಲಬೇಕು ಎನ್ನುತ್ತಾರೆ. ಬಾವಲಿ ಜ್ವರ ಬಂದರೆ ಬಾವಲಿಗಳನ್ನು ಸಾಯಿಸಿ ಎಂದು ಹೇಳುತ್ತಾರೆ. ಕೋಳಿಜ್ವರಕ್ಕೆ ಕೋಳಿಗಳನ್ನು ಕೊಂದುಬಿಡಿ ಅಂತಾರೆ. ಇದ್ಯಾವ ತರ್ಕ ಎಂಬುದು ಅರ್ಥವಾಗುತ್ತಿಲ್ಲ. ಎಲ್ಲ ರೋಗಗಳಿಗೂ ನಮ್ಮಲ್ಲಿನ ರೋಗ ನಿರೋಧಕ ಶಕ್ತಿ ಇಲ್ಲದಿರುವುದೇ ಕಾರಣ. ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇದು ಬೇಸರದ ಸಂಗತಿ ಎಂದು ಡಾ.ಖಾದರ್‌ ಹೇಳಿದರು. 

ಕಲಬೆರಕೆ ಬಗ್ಗೆ ಎಚ್ಚರ: ಕಳೆದ ಎಂಟು ತಿಂಗಳಿನಿಂದ ನಿರಂತರವಾಗಿ ಸಿರಿಧಾನ್ಯ ಸೇವನೆ ಮಾಡುತ್ತಿದ್ದರೂ ರಕ್ತದಲ್ಲಿ ಗುಕೋಸ್‌ ಅಂಶ ಕಡಿಮೆ ಆಗಿಲ್ಲ ಯಾಕೆ ಎಂಬ ಪ್ರಶ್ನೆ ಸಂವಾದದಲ್ಲಿ ತೂರಿಬಂತು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಖಾದರ್‌, ಸಿರಿಧಾನ್ಯಗಳು ಇಂದು ಶ್ರೀಮಂತರ ಧಾನ್ಯಗಳಾಗಿ ಮಾರ್ಪಟ್ಟಿವೆ. ಇದರಿಂದ ಸಾಕಷ್ಟು ಬೇಡಿಕೆ ಬಂದಿದ್ದು, ಕೆಲ ಮಧ್ಯವರ್ತಿಗಳು ಅಗ್ಗದ ದರದಲ್ಲಿ ಸಿಗುವ ಅಕ್ಕಿಯನ್ನು ನುಚ್ಚುಮಾಡಿ, ಮಿಶ್ರಣ ಮಾಡುವ ಸಾಧ್ಯತೆ ಇದೆ.

Advertisement

ಈ ಕಲಬೆರಕೆ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಕಿವಿಮಾತು ಹೇಳಿದರು.  ಅಲ್ಲದೆ, ಸಿರಿಧಾನ್ಯ ಸೇವನೆಯಷ್ಟೇ ಅದನ್ನು ತಯಾರು ಮಾಡುವ ವಿಧಾನ ಕೂಡ ಮುಖ್ಯವಾಗಿರುತ್ತದೆ. ನಾರಿನ ಅಂಶ ಇದರಲ್ಲಿ ಹೆಚ್ಚಿರುವುದರಿಂದ ಕನಿಷ್ಠ ಮೂರು ತಾಸು ನೆನಸಿಡಬೇಕು ಎಂದು ಸಲಹೆ ಮಾಡಿದರು. ಸಂವಾದದಲ್ಲಿ ಚರ್ಮರೋಗ ತಜ್ಞೆ ಡಾ.ಆರತಿ, ಅಭಿನವ ಪ್ರಕಾಶನದ ನ. ರವಿಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next