ಕೆ.ಆರ್.ಪುರ: ವೇತನ ಕೇಳಿದ್ದಕ್ಕೆ ಅನುಚಿತ ವರ್ತನೆ, ಜಾತಿನಿಂದನೆ ಹಾಗೂ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಅರೋಪಿಸಿ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ನಾಗೇಶ ಮತ್ತು ಮೇಸ್ತ್ರಿಗಳ ವಿರುದ್ದ ಮಹಿಳಾ ಪೌರಕಾರ್ಮಿಕರ ನೀಡಿದ್ದ ದೂರಿನ ಹಿನ್ನಲೆ ಕೆಆರ್ ಪುರ ಪೊಲೀಸರು 7ಜನ ಅರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವೈಟ್‌ಪೀಲ್ಡ್ ಉಪವಿಭಾಗದ ಡಿಸಿಪಿ ಅಬ್ದುಲ್ ಅಹಮದ್ ತಿಳಿಸಿದ್ದಾರೆ.
ಕೆಆರ್ ಪುರ ವ್ಯಾಪ್ತಿಯ ದೇವಸಂದ್ರ ಮತ್ತು ಬಸವನಪುರ ವಾರ್ಡ್‌ನ ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದಿದ್ದ ನಾಗೇಶ್ ಬಳಿ 35 ಮಹಿಳಾ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದರು ಇವರಲ್ಲಿ ಕೆಲ ಮಹಿಳಾ ಪೌರಕಾರ್ಮಿಕರಿಗೆ ಸಂಬಳ ನೀಡಿರಲಿಲ್ಲ,
ಸಂಬಳ ಕೇಳಿದ್ದಕ್ಕೆ ಕೀಳುಮಟ್ಟದಲ್ಲಿ ಅಶ್ಲೀಲವಾಗಿಪದಗಳಿಂದ ನಿಂಧಿಸಿದಲ್ಲದೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಹಾಗೂ ಜಾತಿನಿಂದನೆ ಮಾಡಿ ತನ್ನ ಬಟ್ಟೆಗಳನ್ನು ಕಳಚಿ ನಗ್ನವಾಗಿ ನಿಲ್ಲುತ್ತಿದ್ದ ಇದರಿಂದ ಬೇಸತ್ತು ಮಹಿಳಾ ಪೌರಕಾರ್ಮಿಕರು ಅ.19ರಂದು ಗುರುವಾರ ಗುತ್ತಿಗೆದಾರ ನಾಗೇಶ್ ಮತ್ತು ಮೂವರ ಮೇಸ್ತ್ರಿಗಳ ವಿರುದ್ಧ ದೂರು ದಾಖಲಿಸಿದರು,
ಈ ಹಿನ್ನಲೆಯಲ್ಲಿ ಗುತ್ತಿಗೆದಾರನ ಸಹಚರಾರದ ಅಕ್ಷಯ್ ,ಸಾಧಿಕ್, ವೆಂಕಟೇಶ್, ಅಯ್ಯಪ, ರಾಜೇಶ, ಅಬ್ದುಲ ಅಲೀಮ್, ರμàಕ್ ಸೇರಿ 7ಜನರನ್ನು ಬಂಧಿಸಿ ಮಹಿಳಾ ಪೌರಕಾರ್ಮಿಕರ ನೀಡಿದ ದೂರಿನ್ವಯ ಮಹಿಳೆಯರಿಗೆ ಅಗೌರವ, ಜಾತಿನಿಂದನೆ, ರಾಡ್‌ನಿಂದ ಹಲ್ಲೆ ಮಾಡಿರುವ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಪ್ರಮುಖ ಅರೋಪಿ ಗುತ್ತಿಗೆದಾರ ನಾಗೇಶ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ.
ಮತ್ತೋಬ್ಬ ಅರೋಪಿ ರಮೇಶ್ ತಲೆಮರೆಸಿಕೊಂಡಿದ್ದು ಇವರಿಬ್ಬರು ಹುಡುಕಾಟಕ್ಕೆ ತೀವ್ರ ಶೋಧ ನಡೆಯುತ್ತಿದೆ ಎಂದು ತಿಳಿಸಿದರು. ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಅಯುಕ್ತ ಸೀಮಂತ್ ಕುಮಾರ್ ಸಿಂಗ್ ಕೆಆರ್ ಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣ ಕುರಿತು ಪೌರಕಾರ್ಮಿಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ.