Advertisement
ಗದಗ : ಮಕ್ಕಳಿಗೆ ಪ್ರತ್ಯೇಕ ವಾರ್ಡ್ ;
Related Articles
Advertisement
ಹಾಸನ :ಆಕ್ಸಿಜನ್ ಪ್ಲಾಂಟ್‌ಗಳ ನಿರ್ಮಾಣ ;
ಜಿಲ್ಲೆಯಲ್ಲಿ 7 ತಾಲೂಕು ಕೇಂದ್ರ ಆಸ್ಪತ್ರೆಗಳಿದ್ದು, 100ರಿಂದ 300 ಹಾಸಿಗೆಗಳ ಸೌಲಭ್ಯವನ್ನು ಹೊಂದಿವೆ. ಈ ಎಲ್ಲ ತಾಲೂಕು ಆಸ್ಪತ್ರೆಗಳ ಆವರಣದಲ್ಲಿ 3 ತಿಂಗಳನಿಂದೀಚೆಗೆ ಆಕ್ಸಿಜನ್ ಪ್ಲಾಂಟ್‌ಗಳು ನಿರ್ಮಾಣವಾಗಿವೆ. ಜತೆಗೆ ವಿದ್ಯುತ್ ಕಡಿತದ ಸಂದರ್ಭದಲ್ಲಿ ಆಕ್ಸಿಜನ್ ಪೂರೈಕೆ ವ್ಯತ್ಯಯವಾಗಬಾರದೆಂದು 125 ಕೆವಿ ಜನರೇಟರ್‌ಗಳನ್ನೂ ಅಳವಡಿಸಲಾಗಿದೆ.
ಕೊಪ್ಪಳ :ಆಮೂಲಾಗ್ರ ಬದಲಾವಣೆ ;
ಕೊರೊನಾ ಪೂರ್ವದಲ್ಲಿ ಸರಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ತಾಣಗಳು ಎನ್ನುವ ಹಣಪಟ್ಟಿ ಹೊತ್ತಿದ್ದವು. ರೋಗಿಗಳ ಚಿಕಿತ್ಸೆಗೆ ಬೇಕಾದ ಅಗತ್ಯ ಸಾಮಗ್ರಿಗಳೇ ಇಲ್ಲದಂಥ ಸ್ಥಿತಿಯೂ ಹಿಂದೆ ಕಾಣುತ್ತಿತ್ತು. ಆದರೆ ಕೊರೊನಾ ತರುವಾಯ ಈಗ ಪಿಎಚ್‌ಸಿ, ಸಿಎಚ್‌ಸಿ, ನಗರ ಆಸ್ಪತ್ರೆ, ಜನರಲ್ ಆಸ್ಪತ್ರೆ, ಜಿಲ್ಲಾಸ್ಪತ್ರೆಗಳ ಅಭಿವೃದ್ಧಿ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆ ಕಂಡಿದೆ.
ದಕ್ಷಿಣ ಕನ್ನಡ : 16 ಆಕ್ಸಿಜನ್ ಘಟಕಗಳು ;
ಜಿಲ್ಲೆಯಲ್ಲಿ 16 ಆಕ್ಸಿಜನ್ ಘಟಕಗಳಿವೆ. ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಅಳವಡಿಸಲಾಗಿದೆ. ಜಿಲ್ಲಾ, ತಾಲೂಕು, ಮತ್ತು ಮಕ್ಕಳ ಆಸ್ಪತ್ರೆ ಗಳಲ್ಲಿ ಮಕ್ಕಳಿಗೆಂದು ಹೆಚ್ಚುವರಿ ಬೆಡ್, ಐಸಿಯು ವ್ಯವಸ್ಥೆ ಕಲ್ಪಿಸ ಲಾಗಿದೆ. ನಗರ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ಸಿಬಂದಿ, ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಆರ್‌ಟಿಪಿಸಿಆರ್ ಲ್ಯಾಬ್ ಇದ್ದು, ತಾಲೂಕು ಮಟ್ಟದಲ್ಲಿ ಪ್ರಯೋಗಾಲಯ ತೆರೆಯಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಉನ್ನತೀಕರಣಗೊಂಡ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಲಾಗಿದೆ.
ಬೀದರ್ : 490 ವೆಂಟಿಲೇಟರ್ ;
ಬ್ರಿಮ್ಸ್‌ನಲ್ಲಿ 90 ಬೆಡ್‌ಗಳಿಗೆ ಮಾತ್ರ ಇದ್ದ ಆಕ್ಸಿಜನ್ ವ್ಯವಸ್ಥೆಯನ್ನು 490ಕ್ಕೆ ಹಾಗೂ ವೆಂಟಿಲೇಟರ್‌ಗಳನ್ನು 10ರಿಂದ 82ಕ್ಕೆ ಹೆಚ್ಚಿಸಲಾಗಿದೆ. ಮುಖ್ಯವಾಗಿ ಕೋವಿಡ್ 2ನೇ ಅಲೆ ವೇಳೆ ಆಕ್ಸಿಜನ್ ಕೊರತೆ ಆಗಿದ್ದ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಡಿಆರ್‌ಡಿಒ ಸಹಭಾಗಿತ್ವದಲ್ಲಿ 1 ಸಾವಿರ ಎಲ್‌ಪಿಎಂ ಮತ್ತು ಕೆಎಸ್‌ಎಸ್‌ಐಡಿಸಿ ವತಿಯಿಂದ 660 ಎಲ್‌ಪಿಎಂ ಸಾಮರ್ಥ್ಯದ ಆಕ್ಸಿಜನ್ ಘಟಕ ನಿರ್ಮಿಸುವ ಕಾರ್ಯ ಸಾಗಿದೆ.
ಚಾಮರಾಜನಗರ : 155 ಆಕ್ಸಿಜನ್ ಬೆಡ್ ;
ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಸೌಕರ್ಯವೇ ಇರಲಿಲ್ಲ. ಕೋವಿಡ್ ಬಳಿಕ ಇಲ್ಲಿ 50 ಹಾಸಿಗೆಗಳ ಐಸಿಯು ವ್ಯವಸ್ಥೆ ಕಲ್ಪಿಸಲಾಗಿದೆ. 25 ವೆಂಟಿಲೇಟರ್ ಅಳವಡಿಸಲಾ ಗಿದೆ. ಮೊದಲು 55 ಆಕ್ಸಿಜನ್ ಬೆಡ್‌ಗಳಿದ್ದವು. ಈಗ 155 ಆಕ್ಸಿಜನ್ ಬೆಡ್‌ಗಳಿವೆ. ಜಿಲ್ಲೆಗೆ ಪ್ರತ್ಯೇಕ ಆರ್‌ಟಿಪಿಸಿಆರ್ ಪ್ರಯೋಗಾಲಯ, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಯಲ್ಲಿ ಪ್ರಮುಖವಾಗಿ ಐಸಿಯು ಹಾಸಿಗೆ, ವೆಂಟಿಲೇಟರ್ ಸ್ಥಾಪನೆಯಾಗಿವೆ. ತಜ್ಞ ವೈದ್ಯರು, ವೈದ್ಯರು, ಸಿಬಂದಿಯೂ ಹೆಚ್ಚಳವಾಗಿದೆ.
ಉ.ಕನ್ನಡ : 250 ಆಕ್ಸಿಜನ್ ಹಾಸಿಗೆ ;
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸಮಯದಲ್ಲಿ ಮೈಕೊಡವಿಕೊಂಡು ಮೇಲೆದ್ದಿದ್ದು ಆರೋಗ್ಯ ಕ್ಷೇತ್ರ. ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಮೊದಲು ಕೋವಿಡ್ ಚಿಕಿತ್ಸಾ ಘಟಕ ಸ್ಥಾಪನೆಯಾಯಿತು. ರೋಗಿಗಳು ಶಿರಸಿ, ಯಲ್ಲಾಪುರ, ದಾಂಡೇಲಿಯಿಂದ ಕಾರ ವಾರ ತಲುಪುವುದು ಕಷ್ಟ ಎನಿಸಿದಾಗ ಎಚ್ಚೆತ್ತು ಕೊಂಡ ಸರಕಾರ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸಾ ಘಟಕಕ್ಕೆ ಬೇಕಾದ ಸೌಲಭ್ಯಗಳನ್ನು ಹೆಚ್ಚಿಸತೊಡಗಿತು. ಕಾರವಾರದಲ್ಲಿ 2, ಕುಮಟಾ ದಲ್ಲಿ 1 ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾಗಿದ್ದು, ಶಿರಸಿ, ಯಲ್ಲಾಪುರ, ದಾಂಡೇಲಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. 37 ವೆಂಟಿಲೇಟರ್, 250 ಆಕ್ಸಿಜನ್ ಹಾಸಿಗೆ, 5 ಆಂಬ್ಯುಲೆನ್ಸ್, ಕೋವಿಡ್ ಟೆಸ್ಟ್ ಲ್ಯಾಬ್‌ಗಳ ವ್ಯವಸ್ಥೆಯಾಗಿದೆ.
ಮಂಡ್ಯ : ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಪ್ಲಾಂಟ್ ;
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಪ್ಲಾಂಟ್ ಹೊಂದಿದ ಜಿಲ್ಲೆಯಾಗಿದೆ. ಬೆಡ್, ಐಸಿಯು, ವೆಂಟಿಲೇಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ತಾಲೂಕಿನ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಮೊದಲು 3 ಐಸಿಯು ಬೆಡ್‌ಗಳಿದ್ದವು. ಈಗ ಅದನ್ನು 10ಕ್ಕೇರಿಸಲು ಕ್ರಮ ವಹಿಸಲಾಗುತ್ತಿದೆ. ಅಲ್ಲದೆ, ವೆಂಟಿಲೇಟರ್‌ಗಳನ್ನು ಅಳವಡಿಸಲು ಕ್ರಮ ವಹಿಸಲಾಗುತ್ತಿದೆ. ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ 40 ವೆಂಟಿಲೇಟರ್‌ಗಳಿಂದ 100 ವೆಂಟಿಲೇಟರ್‌ಗಳಿಗೆ ಏರಿಕೆ ಮಾಡಲಾಗಿದೆ.
ಮೈಸೂರು :ತಾಲೂಕುಗಳಲ್ಲೇ ಎಲ್ಲ ವ್ಯವಸ್ಥೆ ;
ಗ್ರಾಮೀಣ ಭಾಗದ ತಾಲೂಕು ಆಸ್ಪತ್ರೆ ಸೇರಿ ನಗರದಲ್ಲಿದ್ದ ಪ್ರಮುಖ ಆಸ್ಪತ್ರೆಗಳಲ್ಲಿ ಇದ್ದ ಬೆರಳೆಣಿಕೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್ ಕೋವಿಡ್ ಅನಂತರ ಎರಡಂಕಿ ದಾಟಿದೆ. ಜತೆಗೆ ಆಸ್ಪತ್ರೆ ಆವರಣಗಳಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಸಲಾಗಿದೆ. ಕೊರೊನಾ ಸೋಂಕು ಬರುವುದಕ್ಕೂ ಮುನ್ನ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳು ನಗರ ಆಸ್ಪತ್ರೆಗಳನ್ನೇ ಅವಲಂಬಿಸಿದ್ದವು. ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯಕ್ಕಾಗಿ ದೂರದ ಮೈಸೂರಿಗೆ ಗುಂಡಿಬಿದ್ದ ರಸ್ತೆಯಲ್ಲಿ ರೋಗಿಗಳು ಸಾಗುವ ನಿದರ್ಶನಗಳಿದ್ದವು. ಆದರೆ ಕೊರೊನಾ ಸೋಂಕು ಕಾಲಿಟ್ಟ ಅನಂತರ ತಾಲೂಕು ಆಸ್ಪತ್ರೆಗಳ ಸ್ಥಿತಿ ಬದಲಾಗಿದ್ದು, ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ 5 ವೆಂಟಿಲೇಟರ್, ಆಕ್ಸಿಜನ್ ಹಾಸಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಉಡುಪಿ : ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಹೆಚ್ಚಳ ;
ಜಿಲ್ಲೆಯಲ್ಲಿನ ಸರಕಾರಿ ಆಸ್ಪತ್ರೆ ಕೊರೊನಾ ಬಳಿಕ ಸಾಕಷ್ಟು ಅಭಿವೃದ್ಧಿ ಆಗಿದೆ. ವೈದ್ಯರು, ನರ್ಸ್ ಸೇರಿದಂತೆ ಡಿ ದರ್ಜೆ ಹುದ್ದೆ ಗುತ್ತಿಗೆ ಆಧಾರದ ಮೇಲೆ ಭರ್ತಿಯಾಗಿದೆ. ಹೆಬ್ರಿ, ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನ ಘಟಕ ಕಾರ್ಯಾರಂಭವಾಗಿದೆ. ಉಡುಪಿ ಜಿಲ್ಲಾಸ್ಪತ್ರೆ, ಕುಂದಾಪುರ, ಕಾರ್ಕಳದಲ್ಲಿ ಆಕ್ಸಿಜನ್ ಉತ್ಪಾದನ ಘಟಕ ಅಂತಿಮ ಹಂತದಲ್ಲಿದೆ. ಜತೆಗೆ ಆಸ್ಪತೆಯಲ್ಲಿನ ವೆಂಟಿಲೇಟರ್, ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಹೆಚ್ಚಾಗಿದೆ.
ಧಾರವಾಡ : ವೈದ್ಯಕೀಯ ಸಿಬಂದಿ ಹುದ್ದೆ ಭರ್ತಿ
ಸರಕಾರಿ ಆಸ್ಪತ್ರೆಗಳ ಪೈಕಿ ಜಿಲ್ಲೆಯಲ್ಲಿ ಒಟ್ಟು 50 ಆಕ್ಸಿಜನ್ ಬೆಡ್‌ಗಳು ರೂಪುಗೊಂಡವು. ಮೊದಲನೇ ಅಲೆಯಲ್ಲಿ 150ರಷ್ಟಿದ್ದ ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಎರಡನೇ ಅಲೆ ಹೊತ್ತಿಗೆ ದ್ವಿಗುಣಗೊಂಡಿತ್ತು. ಆದರೂ ಎರಡನೇ ಅಲೆಯಲ್ಲಿ ಸಾಕಷ್ಟು ತೊಂದರೆಗಳು ಆಗಿದ್ದರಿಂದ ಮತ್ತಷ್ಟು ವೆಂಟಿಲೇಟರ್‌ಗೂ ಹೊಸ್ ಬೆಡ್‌ಗಳು ಬಂದವು. ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇದ್ದ 150ಕ್ಕೂ ಹೆಚ್ಚು ವೈದ್ಯಕೀಯ ಸಿಬಂದಿ ಹುದ್ದೆಗಳು ಭರ್ತಿಯಾಗಿವೆ. ಐಸಿಯುಗಾಗಿಯೇ ಎಂಬಿಬಿಎಸ್ ಮುಗಿಸಿದ ಆಗಲೇ ತರಬೇತಿ ಪಡೆದುಕೊಂಡ ಯುವ ವೈದ್ಯರನ್ನು ಪ್ರತಿ ತಾಲೂಕಿಗೆ ಮೂವರಂತೆ ನೇಮಕ ಮಾಡಲಾಗಿದೆ. ಕಿಮ್ಸ್‌ನಲ್ಲಿ ಎರಡು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಎರಡು ಹೊಸ ಆಕ್ಸಿಜನ್ ಉತ್ಪಾದಕ ಘಟಕಗಳು ಸ್ಥಾಪನೆ ಯಾದವು. ಕಲಘಟಗಿ ಮತ್ತು ಕುಂದಗೋಳ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಒಂದೊಂದು (500 ಲೀಟರ್ ಪ್ರತೀ ನಿಮಿಷ)ಆಕ್ಸಿಜನ್ ಘಟಕಗಳು ಸ್ಥಾಪನೆಯಾಗಿವೆ. ನವಲ ಗುಂದದಲ್ಲಿ ಕೂಡ ಒಂದು ಆಕ್ಸಿಜನ್ ಘಟಕ ಸಿದ್ಧಗೊಂಡಿದೆ.