Advertisement

Urwa ಚೂರಿ ತೋರಿಸಿ ಹಣ, ಮೊಬೈಲ್‌ ಸುಲಿಗೆ

09:58 PM Jan 17, 2024 | Team Udayavani |

ಮಂಗಳೂರು: ಚೂರಿ ತೋರಿಸಿ ಹಣ ಮತ್ತು ಮೊಬೈಲ್‌ ಸುಲಿಗೆ ಮಾಡಿದ ಘಟನೆ ಉರ್ವ ಸ್ಟೋರ್‌ನ ಪಿಡಬ್ಲ್ಯುಡಿ ಕ್ವಾಟ್ರಸ್‌ನ ಬಳಿ ನಡೆದಿದೆ.

Advertisement

ಸೋಮವಾರ ರಾತ್ರಿ 10 ಗಂಟೆಯ ಸುಮಾರಿಗೆ ಭರತ್‌ ಅವರು ಕೆಲಸ ಮುಗಿಸಿಕೊಂಡು ರೂಮ್‌ನ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಕ್ವಾಟ್ರìಸ್‌ನ ಒಂದನೇ ಕ್ರಾಸ್‌ ಬಳಿ ತಲುಪಿದಾಗ ಹಿಂದಿನಿಂದ ಸ್ಕೂಟರ್‌ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳ ಪೈಕಿ ಓರ್ವ ಚೂರಿ ತೋರಿಸಿ ಬೆದರಿಸಿ ವಿವೋ ಮೊಬೈಲ್‌ ಅನ್ನು ಕಸಿದುಕೊಂಡ. ಇನ್ನೋರ್ವ ಪ್ಯಾಂಟಿನ ಕಿಸೆಯಲ್ಲಿದ್ದ 500 ರೂ. ಕಸಿದುಕೊಂಡಿದ್ದಾನೆ.

ಮೂವರು ಕೂಡ ಕೈಯಿಂದ ಹೊಡೆದು ನೆಲಕ್ಕೆ ಬೀಳಿಸಿ ಚೂರಿಯಿಂದ ಬಲಗೈಗೆ ಹೊಡೆದು ಪರಾರಿಯಾಗಿದ್ದಾರೆ ಎಂದು ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next