ಬೆಂಗಳೂರು: ಆಧಾರ್ ಸಂಖ್ಯೆ ಬಳಸಿ ಹಲವು ಬ್ಯಾಂಕ್‌ಗಳಲ್ಲಿ ತೆರೆದಿರುವ ಖಾತೆಗಳು ಭಯೋತ್ಪಾದನಾ ಕೃತ್ಯಗಳಿಗೆ ಬಳಕೆಯಾಗುತ್ತಿವೆ. ಈ ಬಗ್ಗೆ ಪರಿಶೀಲಿಸುವುದಾಗಿ ನಂಬಿಸಿ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯಿಂದ 96 ಸಾವಿರ ರೂ. ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ರಾಚೇನಹಳ್ಳಿ ನಿವಾಸಿ ಮೋನಿಕಾ ಚೌಹಾಣ್ ಎಂಬವರು ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಗರದ ಖಾಸಗಿ ಕಂಪನಿ ಯಲ್ಲಿ ಕೆಲಸ ಮಾಡುವ ಮೋನಿಕಾ ಆ.26 ರಂದು ಮೆಷಿನ್ ಜನರೆಟೆಡ್ ಕರೆ ಬಂದಿದ್ದು, ಕರೆ ಸ್ವೀಕರಿಸಿದಾಗ “ಕೋರ್ಟ್‌ನಿಂದ ಮಾತನಾಡುತ್ತಿದ್ದೇವೆ. ನಿಮ್ಮ ಹೆಸರಿನಲ್ಲಿ ಚಲನ್ ಜನರೆಟ್ ಆಗಿದೆ. ಆರ್‌ಟಿಓ ಅಧಿಕಾರಿ ಜತೆ ಮಾತನಾಡಲು ಒಂದನ್ನು ಒತ್ತಿ ಎಂದಿದ್ದಾರೆ. ಅದರಂತೆ ಮೋನಿಕಾ 1 ಅನ್ನು ಒತ್ತಿದ್ದಾಗ, ಪರಿ ಚಯಿಸಿಕೊಂಡ ವ್ಯಕ್ತಿ ತಾನೂ ಮುಂಬೈನ ಅಂಧೇರಿ ಆರ್‌ಟಿಒ ಕಚೇರಿಯ ಅಧಿಕಾರಿ, “ನಿಮ್ಮ ವಿರುದ್ಧ ಹಿಟ್ ಆ್ಯಂಡ್ ರನ್ ಕೇಸ್ ದಾಖಲಾಗಿದೆ. ಮುಂಬೈ ಕೋರ್ಟ್ ಗೆ ಹಾಜರಾಗಬೇಕು’ ಎಂದು ಹೇಳಿದ್ದಾರೆ.
ಅದರಿಂದ ಗಾಬರಿಗೊಂಡ ಮೋನಿಕಾ, “ನಾನು ಮುಂಬೈನಲ್ಲಿ ಇಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಆ ಬಳಿಕ ಕರೆಯನ್ನು ಪೊಲೀಸರಿಗೆ ವರ್ಗಾ ವಣೆ ಮಾಡಿದ್ದಾರೆ. ಬಳಿಕವೂ ಮೋನಿಕಾ, ಘಟನೆಯಲ್ಲಿ ತನ್ನ ಪಾತ್ರ ಇಲ್ಲ ಎಂದು ಸಂಪೂರ್ಣ ವಿವರಣೆ ನೀಡಿದ್ದಾರೆ. ಆದರೂ, ಬಿಡದ ಆರೋಪಿಗಳು, ತಮ್ಮ ಹೇಳಿಕೆ ರೇಕಾರ್ಡ್ ಮಾಡಿಕೊಳ್ಳಬೇಕಿರುವುದರಿಂದ ಸ್ಕೈಪ್ ಮೂಲಕ ವಿಡಿಯೋ ಹೇಳಿಕೆ ನೀಡಬೇಕು ಎಂದಿದ್ದಾರೆ. ಅದರಂತೆ ಮೋನಿಕಾ, ಸ್ಕೈಪ್ ಹೇಳಿಕೆ ನೀಡಿದ್ದಾರೆ. ಆಗ ಆರೋಪಿ, “ನಿಮ್ಮ ಆಧಾರ್‌ನಲ್ಲಿ ಅಕ್ರಮವಾಗಿ ಬಹುಸಂಖ್ಯೆಯಲ್ಲಿ ಬ್ಯಾಂಕ್ ಖಾತೆಗಳು ತೆರಿದಿದ್ದು, ಭಯೋತ್ಪಾದಕ ಕೃತ್ಯಗಳಿಗೆ ಬಳಸುತ್ತಿದ್ದಾರೆ’ ಎಂದು ಹೆದರಿಸಿದ್ದಾರೆ. ಆಗ ಮೋನಿಕಾ, ಅಂತಹ ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದು, ನಂತರ ಫೈನಾನ್ಸ್ ಟೀಮ್ ಪರಿಶೀಲನೆ ನಡೆಸುತ್ತಿದೆ ಎಂ ದು 48,325 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಬಳಿಕ ಮತ್ತೂಮ್ಮೆ ಪರಿಶೀಲಿಸುವುದಾಗಿ ಹೇಳಿ 48, 325 ರೂ. ಪಡೆದುಕೊಂಡಿದ್ದಾರೆ. ಹೀಗೆ ಒಟ್ಟು 96,650 ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ಮೋನಿಕಾ ದೂರು ನೀಡಿದ್ದಾರೆ. ಸಂಪಿಗೆಹಳ್ಳಿ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.