Advertisement
ಶೌಸುಗಿ ಬಾನ್ಸಣ್ಣದಾದ ಮನೆಯನ್ನು ಕಟ್ಟ ಬಯಸುವವರಿಗೆ, ಚಿಕ್ಕ ಜಾಗ ಎಂದು ತಲೆಕೆಡಿಸಿಕೊಳ್ಳುವವರಿಗೆ ಶೌ ಸುಗಿ ಬಾನ್ ಒಳ್ಳೆಯ ಉಪಾಯ ಇದು ಮೂಲವಾಗಿ ಜಪಾನ್ ಶೈಲಿಯಲ್ಲಿ ನಿರ್ಮಿತವಾಗಿದ್ದು ಈಗ ಎಲ್ಲ ಕಡೆಗಳಲ್ಲಿ ಇದು ಜನಪ್ರಿಯಗೊಳ್ಳುತ್ತಿದೆ. ಸಾಮಾನ್ಯವಾಗಿ ಈ ಮರದ ತುಂಡುಗಳು ಕಪ್ಪು ಬಣ್ಣಗಳಿಂದ ಕೂಡಿದ್ದು ಗಾಢವಾದ ವಿನ್ಯಾಸ ಮಾಡಲು ಸಹಕಾರಿಯಾಗುತ್ತದೆ. ಅದಲ್ಲದೆ ನೀವು ಈಗ ತುಂಬಾ ಬಳಕೆಯಲ್ಲಿರುವ ಒಂದು ಗೋಡೆಗೆ ಮಾತ್ರ ಇಂತಹವುಗಳನ್ನು ಬಳಸಿ ಮನೆಯ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಬಹುದು.
ಕೆಬೊನಿಯಿಂದ ಮಾರ್ಪಾಡದ ಸಣ್ಣ ಮನೆಯ ವಿನ್ಯಾಸ ಬಹು ಸುಂದರವಾಗಿರುತ್ತದೆ. ಕೆಬೊನಿಯನ್ನು ನೀವು ಮೇಲ್ಛಾವಣಿಯಾಗಿ ಹಾಗೂ ಗೋಡೆಗಳಿಗೆ ಅದಲ್ಲದೆ ಎರಡೂ ಭಾಗಗಳಾಗಿ ಮಾಡಿ ಒಂದು ಕೋಣೆಯನ್ನಾಗಿ ಕೂಡ ಮಾಡಬಹುದಾಗಿದೆ. ಇದು ಉತ್ತಮ ಗುಣಮಟ್ಟದಾಗಿದ್ದು ಜಪಾನ್ ಗಳಲ್ಲಿ ಈ ರೀತಿಯ ಮನೆ ನಿಮಗೆ ಕಾಣ ಸಿಗುತ್ತದೆ. ಅದಲ್ಲದೆ ಇದರ ವಿನ್ಯಾಸ ಜನರನ್ನು ಮನಸೂರೆಗೊಳಿಸುತ್ತದೆ. ಹೀಗೆ ಹಲವಾರು ರೀತಿಯ ಬಾಹ್ಯ ವಿನ್ಯಾಸಗಳಿಂದ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು. ಇದರಿಂದ ನಿಮ್ಮ ಮನೆ ಎಲ್ಲದಕ್ಕಿಂತ ಭಿನ್ನವಾಗಿ ಹಾಗೂ ಸುಂದರವಾಗಿ ಕಾಣುವುದಲ್ಲದೆ ನೀವು ವ್ಯಯಿಸುವ ಹಣದಲ್ಲೂ ನಿಮಗೆ ಉಳಿತಾಯ ಮಾಡಿಕೊಡುತ್ತದೆ.
Related Articles
ಸಣ್ಣ ಮನೆಗಳಲ್ಲಿ ಒಳಾಂಗಣ ಹೆಚ್ಚು ತೆರೆದ ರೀತಿಯಲ್ಲಿ ಇರುವುದರಿಂದ ಮನೆ ಸುಂದರವಾಗಿ ಕಾಣುತ್ತದೆ. ಅದಲ್ಲದೆ ನೈಸರ್ಗಿಕ ಬೆಳಕು ಮನೆಯನ್ನು ಆವರಿಸಿದಾಗ ಮನೆಯ ವಿಶಾಲತೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಸಾಕಷ್ಟು ಕಿಟಕಿಗಳನ್ನು ಮಾಡುವುದರಿಂದ ಇನ್ನೊಂದು ಪ್ರಯೋಜನವೆಂದರೆ ಹೊರಾ ಭಾಗ ನಮಗೆ ವಿಶಾಲವಾಗಿ ಕಾಣುತ್ತದೆ. ಅದಲ್ಲದೆ ನಿಸರ್ಗವನ್ನು ಪ್ರೀತಿಸುವವರಿಗೆ ಇದು ಒಳ್ಳೆಯ ಉಪಾಯ.
Advertisement
ಸೃಜನಶೀಲ ವಿನ್ಯಾಸಕೆಬೊನಿ ಅಥವಾ ಇನ್ನಿತರ ಒಳ್ಳೆಯ ಗುಣ ಮಟ್ಟದ ಮರಗಳನ್ನು ಬಳಸುತ್ತಿದ್ದರೆ ಮನೆಯ ಸೈಡ್ ಗಳಲ್ಲಿ ವಿಶಿಷ್ಟ ವಿನ್ಯಾಸಗಳನ್ನು ಮಾಡಿ ಈಗ ತುಂಬಾ ಜನ ಪ್ರಿಯಗೊಂಡ ಸ್ಕಲ್ಲೋಪ್ಡ್, ರೌಂಡ್, ಡೈಮಂಡ್ ಹಾಗೂ ಇನ್ನಿತರ ಆಕೃತಿಯಲ್ಲಿ ಸೈಡ್ ಗಳನ್ನು ವಿನ್ಯಾಸ ಮಾಡಿ ಇದರಿಂದ ಮನೆಯು ವೈವಿಧ್ಯಮಯವಾಗಿ ಕಾಣುವುದಲ್ಲದೆ ಜನರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಪ್ರೀತಿ ಭಟ್ ಗುಣವಂತೆ