Advertisement

ಮಕ್ಕಳ ಹಕ್ಕುಗಳ ಸಂರಕ್ಷಣೆ ಗ್ರಾಮ ಮಟ್ಟಕ್ಕೂ ವಿಸ್ತರಿಸಿ

01:56 PM Jan 06, 2021 | Team Udayavani |

ಹಾಸನ: ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಪ್ರಯತ್ನಗಳು ಇನ್ನಷ್ಟು ಪರಿಣಾಮಕಾರಿಯಾಗಿ ಗ್ರಾಮ ಮಟ್ಟದವರೆಗೂ ತಲುಪಬೇಕು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶ ಬಿ.ಕೆ.ರವಿಕಾಂತ್‌ಅವರ ಉಪಸ್ಥಿತಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಉಡುಪಿ ಜಿಲ್ಲೆಯ ಮಕ್ಕಳ ರಕ್ಷಣಾನಿಯಾಮವಳಿಗಳ ಮಾದರಿಯನ್ನು ಜಿಲ್ಲೆಗಳಲ್ಲಿಅಳವಡಿಸುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

ಮಕ್ಕಳ ರಕ್ಷಣಾಧಿಕಾರಿ ಕಚೇರಿಗೆ ಬರುವ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಸಿಗುವಂತೆಕಾರ್ಯನಿರ್ವಹಿಸಬೇಕು ಹಾಗೂ ಗ್ರಾಮ ಸಭೆಗಳಿಗೆಭೇಟಿ ನೀಡಿದಾಗ ಅರಿವು ಮೂಡಿಸುವಂತಹ ಕಾರ್ಯಮಾಡಬೇಕು ಎಂದು ನಿರ್ದೇಶಿಸಿದರು.

ಸ್ಥಳೀಯವಾಗಿ ರಕ್ಷಿಸಿ: ಮಕ್ಕಳ ಸಂರಕ್ಷಣೆ ಗ್ರಾಮ ಮಟ್ಟದಿಂದ ನಡೆಯಬೇಕು, ಯಾವುದೇ ಮಕ್ಕಳು ಬಾಲ್ಯವಿವಾಹ, ಬಾಲ ಕಾರ್ಮಿಕತೆ, ಲೈಂಗಿದೌರ್ಜನ್ಯ ನಡೆದಾಗ ಹಾಗೂ ಅನಾಥ, ಪರಿತ್ಯಕ್ತಮಕ್ಕಳು ಸಿಕ್ಕಾಗ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಬರುವವರೆಗೆ ಕಾಯದೇ, ಸ್ಥಳೀಯಗ್ರಾಪಂ ಮಟ್ಟದಲ್ಲಿ ಗುರುತಿಸಿರುವ ಮಕ್ಕಳ ಮಿತ್ರ ಹಾಗೂ ಮಹಿಳಾ ಮಿತ್ರ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಸಂಕಷ್ಟದಲ್ಲಿರುವ ಮಕ್ಕಳ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.

ಈಗಾಗಲೇ ಗ್ರಾಮ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಕಾವಲು ಸಮಿತಿ ಕಾರ್ಯನಿರ್ವಸುತ್ತಿದೆ. ಈಸಮಿತಿಯು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳುಸಮಿತಿಯ ಸಭೆ ನಡೆಸಬೇಕು ಹಾಗೂ ಸಮಸ್ಯೆಗಳಲ್ಲಿರುವ ಮಕ್ಕಳನ್ನು ಗುರುತಿಸಿ ಅವರ ರಕ್ಷಣೆಗೆಮಕ್ಕಳ ಸಹಾಯವಾಣಿ ತಂಡ ಹಾಗೂ ಮಕ್ಕಳ ರಕ್ಷಣಾಘಟಕಕ್ಕೆ ಮಾಹಿತಿ ನೀಡಬೇಕು. ಇದರಿಂದ ಮಕ್ಕಳನ್ನು ಶೀಘ್ರದಲ್ಲಿ ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Advertisement

ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆಗೆ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವಅಂಗನವಾಡಿ ಕಾರ್ಯಕರ್ತರು, ಮೇಲ್ವಿಚಾರಕಿಯರುಹಾಗೂ ಶಿಕ್ಷಣ ಇಲಾಖೆಯ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರು ಜೊತೆಗೆ ಆರೋಗ್ಯ ಇಲಾಖೆಯ ಆಶಾ, ಕಿರಿಯ ಆರೋಗ್ಯ ಸಹಾಯಕರು ಜಂಟಿಯಾಗಿಗ್ರಾಮಗಳಲ್ಲಿ ಜರುಗುವ ಬಾಲ್ಯ ವಿವಾಹ, ಬಾಲಕಾರ್ಮಿಕತೆ ತಡೆ, ಇತರೆ ದೌರ್ಜನ್ಯಕ್ಕೆ ಒಳಗಾಗಿರುವಮಕ್ಕಳ ಸಂರಕ್ಷಣೆಗೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಚ್‌.ಟಿ. ಕೋಮಲ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಗಳು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿಹಾಜರಿದ್ದರು.

ಕಾಫಿ ತೋಟಗಳು, ಗಣಿಗಾರಿಕೆ ಈ ರೀತಿಯ ಪ್ರದೇಶ ಭಾಗಗಳನ್ನು ಗುರುತಿಸಿ ಮೇಲ್ವಿಚಾರಕರು ಹಾಗೂ ಪೊಲೀಸ್‌ಸಹಾಯದೊಂದಿಗೆ ಜಾಗೃತಿ ಕಾರ್ಯಕ್ರಮನಡೆಸಿ ಅರಿವನ್ನು ಮೂಡಿಸುವಂತಹ ಕೆಲಸಗಳನ್ನು ಮಾಡಬೇಕು.

ಗಿರೀಶ್‌ ನಂದನ್‌, ಉಪಭಾಗಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next