ಮಂಡ್ಯ: ”1990ರ ದಶಕದಿಂದ ಬೆಂಗಳೂರು- ಮೈಸೂರು ರಸ್ತೆ ಅಭಿವೃದ್ದಿಯ ಪ್ರಸ್ತಾಪ ಇದ್ದರೂ 2014 ರಲ್ಲಿ ಪ್ರಧಾನ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ಯೋಜನೆ ತಯಾರಾಗಿ ಅನುಷ್ಠಾನ ವಾಗಿದೆ. 2019 ರಲ್ಲಿ ಕೆಲಸ ಪ್ರಾರಂಭವಾಗಿ 2023ರಲ್ಲಿ ಮೋದಿಯವರಿಂದಲೇ ಕೆಲಸ ಮುಗಿದಿದೆ” ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ಉದ್ಘಾಟಿಸಿ ಸಮಾವೇಶದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರನ್ನು ವಿಶ್ವದ ನಾಯಕರೆಂದು ಗುರುತಿಸಲಾಗಿದೆ ಅಮೆರಿಕ, ಚೀನಾ, ಪಾಕಿಸ್ಥಾನದ ಜನರೂ ಮೋದಿ ಸಮರ್ಥ ನಾಯಕತ್ವ ಒಪ್ಪಿ ಕೊಂಡಾಡುತ್ತಿದ್ದಾರೆ ಎಂದರು.
ರಸ್ತೆಗೆ 4000 ಕೋಟಿಗೂ ಹೆಚ್ಚುವರಿ ಅನುದಾನ ನೀಡಿದ್ದಾರೆ .ಜನರಿಗೆ ರಸ್ತೆ ಯಾರು ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದು ಅವರು ತಿಳಿಸಿದರು. ಎಲ್ಲಾ ಯೋಜನೆ ಕಾಲಮಿತಿಯೊಳಗೆ ಪೂರ್ಣ ಗೊಳಿಸುವುದು ಮೋದಿಯವರ ಕಾರ್ಯ ವೈಖರಿ. ಈ ರಸ್ತೆ ಅದಕ್ಕೆ ಉದಾಹರಣೆ ಎಂದ ಮುಖ್ಯಮಂತ್ರಿ ಕೇಂದ್ರ ದಿಂದ ಕಿಸಾನ್ ಸಮ್ಮಾನ್ ಯೋಜನೆಯಡಿ 16000 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 4000ಕೊಟಿ ರೂ ರೈತರಿಗೆ ಖಾತೆಗೆ ಸೇರಿದೆ.ಕರ್ನಾಟಕ ರಾಜ್ಯದ ಅಭಿವೃದ್ಧಿ ಗೆ ಡಬಲ್ ಇಂಜಿನ್ ಸರ್ಕಾರದ ಶ್ರಮಿಸುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಮಂಡ್ಯ ಸಕ್ಕರೆ ಕಾರ್ಖಾನೆ ಮೈಶುಗರ್ ಪನಾರಂಭಕ್ಕೆ 100ಕೋಟಿ ರೂ ನೀಡಲಾಗಿದೆ.ವಿ.ಸಿ ನಾಲೆ ಸೇರಿದಂತೆ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಪೂರ್ಣ ಗೊಳಿಸಲಾಗುತ್ತದೆ ಎಂದರು.
ಜಿಲ್ಲೆಯ 2ಲಕ್ಷ ಜನರಿಗೆ ಕಿಸಾನ್ ಸಮ್ಮಾನ್ ಯೋಜನೆ ಲಾಭ ದೊರೆತಿದೆ.35000 ಮಕ್ಕಳಿಗೆ ರೈತ ವಿದ್ಯಾ ನಿಧಿ, 4ಲಕ್ಷ ಮಂದಿಗೆ ಆಯುಷ್ಮಾನ್ ಯೋಜನೆ ಅನುಕೋಲ ನೀಡಲಾಗಿದೆ.ಮಂಡ್ಯ ಜನ ಬೆಲ್ಲದಷ್ಟೇ ಸಿಹಿ. ನಮ್ಮ ರಿಪೋರ್ಟ್ ಕಾರ್ಡ್ ನೋಡಿ ಆಶೀರ್ವದಿಸಿ ಎಂದು ಮುಖ್ಯಮಂತ್ರಿ ಹೇಳಿದರು.