Advertisement
ಇದನ್ನೂ ಓದಿ:ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾದ ನಟ ಕಿಚ್ಚ ಸುದೀಪ್
ಕಳೆದ ತಿಂಗಳು ದೇಶದ ಸರಕು ರಫ್ತು ಹಿಂದಿನ ವರ್ಷದ ಇದೇ ತಿಂಗಳಿಗಿಂತ ಶೇ. 5.37ರಷ್ಟು ಹೆಚ್ಚಾ ಗಿದೆ. 2021ರ ಜನವರಿಯಲ್ಲಿ ಸರಕು ರಫ್ತು 27.24 ಬಿಲಿಯನ್ ಡಾಲರ್‌ಗಳಷ್ಟಾಗಿದ್ದರೆ 2020ರ ಜನವರಿಯಲ್ಲಿ ರಫ್ತು 25.85 ಬಿಲಿಯನ್ ಡಾಲರ್‌ಗಳಷ್ಟಾಗಿತ್ತು.
Related Articles
ತೈಲ ಆಮದು ಫೆಬ್ರವರಿಯಲ್ಲಿ ಶೇ. 16.63 ಕುಸಿದು 8.99 ಶತಕೋಟಿ ಡಾಲರ್‌ಗೆ ತಲುಪಿದೆ. ಫೆಬ್ರವರಿಯಲ್ಲಿ ಚಿನ್ನದ ಆಮದು 5.3 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ 2.36 ಬಿಲಿಯನ್ ಡಾಲರ್‌ಗಳಷ್ಟಿತ್ತು.
Advertisement
ಅಕ್ಕಿ ರಫ್ತು ಶೇ. 30.78 ಹೆಚ್ಚಳಫೆಬ್ರವರಿಯಲ್ಲಿ ಕಬ್ಬಿಣದ ಅದಿರು ಮತ್ತು ಅಕ್ಕಿ ರಫ್ತು ಶೇ. 30.78ರಷ್ಟು ಹೆಚ್ಚಿನ ಬೆಳವಣಿಗೆಯನ್ನು ಕಂಡಿದೆ. ಕಾರ್ಪೆಟ್ ವಲಯದಲ್ಲಿ ಇದು ಶೇ. 19.46, ಮಸಾಲೆ ಶೇ. 18.61ರಷ್ಟು, ಔಷಧಗಳಲ್ಲಿ ಶೇ. 14.74ರಷ್ಟು, ತಂಬಾಕು ಶೇ. 7.71ರಷ್ಟು , ರಾಸಾಯನಿಕ ಕ್ಷೇತ್ರದಲ್ಲಿ ಶೇ. 1.2ರಷ್ಟು ಆಗಿತು. ಎಲ್ಲಿ ಹಿನ್ನಡೆ
ಎಣ್ಣೆಬೀಜ, ಚರ್ಮ, ಪೆಟ್ರೋಲಿಯಂ ಉತ್ಪನ್ನಗಳು, ಗೋಡಂಬಿ, ರತ್ನಗಳು ಮತ್ತು ಆಭರಣಗಳು, ಸಿದ್ಧ ಉಡುಪುಗಳು, ಚಹಾ, ಎಂಜಿನಿಯರಿಂಗ್ ಸರಕುಗಳು, ಕಾಫಿ ಮತ್ತು ಸಮುದ್ರ ಉತ್ಪನ್ನಗಳು ರಫ್ತಿನಲ್ಲಿ ಹಿನ್ನಡೆ ಕಂಡಿವೆ.