Advertisement

Export of mangoes: ಮಾವು ರಫ್ತು ಪ್ರಮಾಣದಲಿ ಶೇ.124ರಷ್ಟು ಏರಿಕೆ

12:13 PM Sep 07, 2023 | Team Udayavani |

ದೇವನಹಳ್ಳಿ: ಮಾವಿನ ಸೀಸನ್‌ ಮುಗಿಯುತ್ತಿ ದ್ದಂತೆ, ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಮಾವು ರಫ್ತಿನಲ್ಲಿ ಗಮನಾರ್ಹ ಏರಿಕೆ ದಾಖಲಿಸಿದೆ.

Advertisement

ರಫ್ತಿನಲ್ಲಿ ಸ್ಥಿರವಾದ ಮೇಲ್ಮುಖ ಪ್ರವೃತ್ತಿ ಪ್ರದರ್ಶಿಸುವ ಮೂಲಕ, ಬಿಐಎಎಲ್‌ ವಿಮಾನ ನಿಲ್ದಾಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಋತುವಿನಲ್ಲಿ ಮಾವು ರಫ್ತಿನಲ್ಲಿ ಶೇ.124ರಷ್ಟು ಏರಿಕೆ ಕಂಡಿದ್ದು, ಮೂರು ವರ್ಷಗಳ ದಾಖಲೆ ನಿರ್ಮಿಸಿದೆ. 2023ರಲ್ಲಿ ಬಿಐಎಎಲ್‌ ವಿಮಾನ ನಿಲ್ದಾಣವು 6,84,648 ಕೆ.ಜಿ.ಯಷ್ಟು ಮಾವಿನಹಣ್ಣನ್ನು ರಫ್ತು ಮಾಡಿದೆ, ಹಿಂದಿನ ವರ್ಷದಲ್ಲಿ ರಫ್ತು ಮಾಡಲಾದ 3,05,521 ಕೆ.ಜಿ.ಗಿಂತ ಗಮನಾರ್ಹ ಏರಿಕೆಯನ್ನು ತೋರಿಸುತ್ತದೆ. ಇದಲ್ಲದೆ, ಈ ಋತುವಿನಲ್ಲಿ ಕಾಯಿಗಳ ರμ¤ನಲ್ಲಿ ಪ್ರಭಾವಶಾಲಿ ಶೇ.86 ಹೆಚ್ಚಳ ಕಂಡಿದೆ, ಸರಿಸುಮಾರು 17 ಲಕ್ಷ ಮಾವಿನ ಹಣ್ಣುಗಳನ್ನು ರಫ್ತು ಮಾಡಲಾಗಿದೆ.

ರಫ್ತು ಜಾಲ ವಿಸ್ತಾರ: ಬಿಐಎಎಲ್‌ ವಿಮಾನ ನಿಲ್ದಾಣದ ವಿಸ್ತಾರವಾದ ರಫ್ತು ಜಾಲವು 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ವ್ಯಾಪಿಸಿದೆ. ಈ ವರ್ಷ ಯುನೈಟೆಡ್‌ ಸ್ಟೇಟ್ಸ್‌ಗೆ ಅಭಿವೃದ್ಧಿ ಹೊಂದುತ್ತಿರುವ ಮಾವಿನಹಣ್ಣಿನ ರಫ್ತು ವಿಶೇಷವಾಗಿ ಗಮನಾರ್ಹವಾಗಿದೆ. ಅಲ್ಲಿ ಡಾಲರ್ಸ್‌ ಫೋರ್ಟ್‌ ವರ್ತ್‌, ವಾಷಿಂಗ್ಟನ್‌ ಡಿಸಿ ಮತ್ತು ಸ್ಯಾನ್‌ ಫ್ರಾನ್ಸಿಸ್ಕೋದಂತಹ ಪ್ರಮುಖ ಮೆಟ್ರೋಪಾಲಿಟನ್‌ ಪ್ರದೇಶಗಳು ಈ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.

ಮಾವಿಗೆ ಜಾಗತಿಕ ಮಾರುಕಟ್ಟೆ: ಬೆಂಗಳೂರು ಇಂಟನ್ಯಾಶನಲ್‌ ಏರ್ಪೋರ್ಟ್‌ ಲಿಮಿಟೆಡ್‌ (ಬಿಐಎ ಎಲ್‌ಎಲ್) ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್‌ ಮಾತನಾಡಿ, ಬಿಎಲ್‌ ಆರ್‌ ವಿಮಾನ ನಿಲ್ದಾಣವು ಭಾರತದಿಂದ ಫೆರಿಷಬಲ್‌ ರಫ್ತುಗಳನ್ನು ಸುಗಮಗೊಳಿಸುವಲ್ಲಿ ಚಾಲನಾ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಗಣನೀಯ ಪ್ರಮಾಣದ ಷೇರುಗ ಳೊಂದಿಗೆ, ದಕ್ಷಿಣ ಭಾರತದ ಮಾವಿನ ಹಣ್ಣಿನ ಜಾಗತಿಕ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ನಮ್ಮ ಪಾತ್ರದ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ಸುವ್ಯವಸ್ಥಿತ ಕೂಲ್ -ಪೋರ್ಟ್‌ ರಫ್ತು ಕಾರ್ಯಾಚರಣೆಗಳಿಗೆ ನಮ್ಮ ಅಚಲ ಬದ್ಧತೆಯು ಬಿಐಎಎಲ್‌ ವಿಮಾನ ನಿಲ್ದಾಣ ದ ಮಹತ್ವವನ್ನು ಒತ್ತಿ ಹೇಳುತ್ತದೆ. ಇದು ನಮ್ಮ ಪ್ರದೇಶದ ಶ್ರೀಮಂತ ಉತ್ಪನ್ನಗಳಿಗೆ ಜಗತ್ತನ್ನು ಸಂಪ ರ್ಕಿಸುವ ಪ್ರಮುಖ ಗೇಟ್‌ ವೇ ಆಗಿದೆ ಎಂದರು.

ಆರ್ಥಿಕ ಸ್ಥಿರತೆ ಉತ್ತೇಜನಕ್ಕೆ ಕ್ರಮ: ಬಿಐಎಎಲ್‌ ವಿಮಾನ ನಿಲ್ದಾಣವು ತನ್ನ ಸರಕು ಕಾರ್ಯಾಚರಣೆಗಳನ್ನು ಬಲಪಡಿಸುವುದನ್ನು ಮುಂದುವರೆಸುತ್ತಿರುವುದರಿಂದ, ಭಾರತೀಯ ಉತ್ಪಾದಕರು ಮತ್ತು ಜಾಗತಿಕ ಮಾರುಕಟ್ಟೆಗಳ ನಡುವಿನ ಸೇತುವೆಯಾಗಿ ತನ್ನ ಪ್ರಮುಖ ಪಾತ್ರಕ್ಕೆ ಸಮರ್ಪಿತವಾಗಿದೆ. ಈ ಬದ್ಧತೆಯು ಭಾರತದ ಕೃಷಿ ಮತ್ತು ರಫ್ತು ಕ್ಷೇತ್ರಗಳ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಆರ್ಥಿಕ ಸ್ಥಿರತೆ ಉತ್ತೇಜಿಸುತ್ತದೆ ಮತ್ತು ರಾಷ್ಟ್ರದ ಜಾಗತಿಕ ಉಪಸ್ಥಿತಿಯನ್ನು ವಿಸ್ತರಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next