Advertisement

Export: ರಫ್ತು ನಿಷೇಧ: ನೇಪಾಳಕ್ಕೆ ಅಕ್ಕಿ ಕಳ್ಳಸಾಗಣೆ ಹೆಚ್ಚಳ

09:08 PM Oct 15, 2023 | Team Udayavani |

ಮಹರಾಜ್‌ಗಂಜ್‌: ಭಾರತ ಅಕ್ಕಿ ರಫ್ತನ್ನು ನಿಷೇಧಿಸಿದ ನಂತರ ಭಾರತ-ನೇಪಾಳ ಗಡಿಯಲ್ಲಿ ಅಕ್ಕಿ ಕಳ್ಳಸಾಗಣೆ ಗಣನೀಯವಾಗಿ ಏರಿಕೆಯಾಗಿದೆ. ಗಡಿಯಲ್ಲಿರುವ ಗ್ರಾಮಸ್ಥರು ಹಣಕ್ಕಾಗಿ ನಡಿಗೆ ಮೂಲಕ ಅಥವಾ ಚಿಕ್ಕ ವಾಹನಗಳಲ್ಲಿ ಭಾರತದಿಂದ ನೇಪಾಳಕ್ಕೆ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದಾರೆ.

Advertisement

ನೇಪಾಳಿ ವ್ಯಾಪಾರಿಗಳು ಗಡಿಗಳಲ್ಲಿ ಅಕ್ಕಿಯನ್ನು ಸಂಗ್ರಹಿಸಲು ಸಂಗ್ರಹಗಾರಗಳನ್ನು ನಿರ್ಮಿಸಿದ್ದಾರೆ. ಯುವ ನಿರುದ್ಯೋಗಿಗಳು, ಮಹಿಳೆಯರು, ಕೆಲವೊಮ್ಮೆ ವಯಸ್ಸಾದವರು ಅಕ್ಕಿ ಕಳ್ಳಸಾಗಣೆ ಮಾಡುತ್ತಾರೆ. ಇವರಿಗೆ ಕ್ವಿಂಟಲ್‌ ಅಕ್ಕಿಗೆ 300 ರೂ.ವರೆಗೆ ವ್ಯಾಪಾರಿಗಳು ಹಣ ಪಾವತಿಸುತ್ತಾರೆ. ಹೆಚ್ಚು ಹಣ ಗಳಿಸಲು ಅನೇಕರು ಹಲವು ಬಾರಿ ಸಂಚಾರ ಮಾಡುತ್ತಾರೆ.

ಲಕ್ಷ್ಮೀನಗರ, ಥೂತಿಬರಿ, ನಿರ್ಚಾಲ್‌, ಪರ್ಸಾ ಮಲಿಕ್‌, ಬರ್ಗಡ್ವಾ, ಭಗವಾನ್ಪುರ್‌, ಶ್ಯಾಮ್‌ ಕಾಟ್‌, ಫ‌ರೇನಿಯಾ, ಹಾರ್ಡಿ ಡಾಲಿ ಮತ್ತು ಖಾನುವಾ ಗ್ರಾಮಗಳಿಂದ ಗಡಿಯನ್ನು ದಾಟಿ ನೇಪಾಳ ತಲುಪುವುದು ಸುಲಭ. 15ರಿಂದ 20 ರೂ.ಗೆ ಖರೀದಿಸುವ ಕೆಜಿ ಅಕ್ಕಿಯನ್ನು ನೇಪಾಳದಲ್ಲಿ 70 ರೂ.ವರೆಗೆ ಮಾರಾಟ ಮಾಡಲಾಗುತ್ತದೆ.

ಕಳೆದ ನಾಲ್ಕು ತಿಂಗಳಲ್ಲಿ ನೇಪಳಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 111.2 ಟನ್‌ ಅಕ್ಕಿಯನ್ನು ಸಶಸ್ತ್ರ ಸೀಮಾ ದಳ ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next