ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮುಕಲಹಳ್ಳಿ ಕ್ರಾಸ್ ಬಳಿ ಸ್ಫೋಟಕ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿದ್ದ ತೆಲಂಗಾಣ ರಾಜ್ಯದ ನಾಲ್ವರನ್ನು ಬಂಧಿಸಿ ಅವರಿಂದ 1000 ಜೆಲಾಟಿನ್ ಬೂಸ್ಟರ್ ಮತ್ತು 600 ಎಲೆಕ್ಟ್ರಾನಿಕ್ ಡಿಟೋನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ತೆಲಂಗಾಣದ ನಲಗೊಂಡ ಮೂಲದ ರಮೇಶ್ (35) ವೆಂಕಟೇಶ್ (32) ವೇಣು (20) ಯಾದಗಿರಿ (30) ಬಂಧಿತ ಆರೋಪಿಗಳು.
ಲಾಕ್ಡೌನ್ ಹಿನ್ನೆಲೆಯಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಮತ್ತು ಸಿಬ್ಬಂದಿ ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ 2 ದ್ವಿಚಕ್ರ ವಾಹನದಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿದ್ದ ವೇಳೆ ಎಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ : ಚೋಕ್ಸಿ ಕರೆತರಲು ಲೇಡಿ ಐಪಿಎಸ್ : ಶಾರದಾ ರಾವತ್ ನೇತೃತ್ವದ 6 ಸದಸ್ಯರ ತಂಡ ಡೊಮಿನಿಕ್‌ಗೆ
ಆರೋಪಿಗಳು ಆಂಧ್ರಪ್ರದೇಶದ ಮದನಪಲ್ಲಿಯಿಂದ ದಿಬ್ಬೂರಹಳ್ಳಿ ಗೆ ಸ್ಫೋಟಕ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿದ್ದರೆನ್ನಲಾಗಿದೆ ಬಟ್ಲಹಳ್ಳಿ ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನವನ್ನು ಘೋಷಿಸಿದ್ದಾರೆ.