Advertisement

ಪಿಎಫ್ಐ ಕಾರ್ಯಕರ್ತರ ಮೊಬೈಲ್‌ನಲ್ಲಿ ಸ್ಫೋಟಕ ವಿಚಾರ?

09:09 PM Oct 15, 2022 | Team Udayavani |

ಬೆಂಗಳೂರು: ರಾಜ್ಯ ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾದ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆ ಮುಖಂಡರ ಮೊಬೈಲ್‌ಗ‌ಳಲ್ಲಿ ಕೆಲವೊಂದು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.

Advertisement

ಬಂಧಿತರ ಮೊಬೈಲ್‌ ರಿಟ್ರೈವ್‌ ಮಾಡಿದಾಗ ವಾಟ್ಸ್‌ಆ್ಯಪ್‌ಗಳಲ್ಲಿ ಬಾಬರಿ ಮಸೀದಿ ಧ್ವಂಸ ಮತ್ತು ಹಿಂದೂ ಮುಖಂಡರ ಪ್ರಚೋದನಾಕಾರಿ ಹೇಳಿಕೆಯ ವಿಡಿಯೋ ತುಣುಕುಗಳು ಪತ್ತೆಯಾಗಿವೆ. ಬಾಬರಿ ಮಸೀದಿ ಧ್ವಂಸದ ಸಣ್ಣ ವಿಡಿಯೋವನ್ನು ಬೇರೆ ಬೇರೆ ಗ್ರೂಪ್‌ಗಳಿಗೆ ಶೇರ್‌ ಮಾಡಿರುವ ಆರೋಪಿಗಳು, ಸಮುದಾಯದ ಪವಿತ್ರ ಸ್ಥಳವನ್ನು ಕೆಲವರು ಧ್ವಂಸಗೊಳಿಸಿದರು. ಆಗ ನಾವು ಓದಿರಲಿಲ್ಲ. ಬಳಿಕ ಅದರ ಬಗ್ಗೆ ತಿಳಿದುಕೊಂಡೆವು. ಹೀಗಾಗಿ ಅದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಪ್ರಚೋದನಾಕಾರಿ ಪೋಸ್ಟ್‌ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಜತೆಗೆ ಆರ್‌ಎಸ್‌ಎಸ್‌ ಹಾಗೂ ಹಿಂದೂ ಮುಖಂಡರು ಅನ್ಯ ಕೋಮಿನ ಬಗ್ಗೆ ನೀಡುತ್ತಿದ್ದ ಪ್ರಚೋದನಾಕಾರಿ ಹೇಳಿಕೆಗಳ ವಿಡಿಯೋಗಳನ್ನು ಶೇರ್‌ ಮಾಡಿದ್ದಾರೆ. ಭಾರತವನ್ನು ಹಿಂದೂ ರಾಷ್ಟ್ರ ಎಂದು ಆ ಮುಖಂಡರು ಪ್ರತಿಪಾದಿಸುತ್ತಿದ್ದಾರೆ. ಅಸಲಿಗೆ ಇದೊಂದು ಮುಸ್ಲಿಂ ರಾಷ್ಟ್ರ. ಗೋ ಸಾಗಾಟ ಮಾಡುವ ಮುಸ್ಲಿಂ ಯುವಕರ ಮೇಲೆ ಅನಗತ್ಯವಾಗಿ ದಾಳಿ ನಡೆಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ತಮ್ಮ ಸಮುದಾಯದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹೇಳಿರುವ ವಿಡಿಯೋ ಪೋಸ್ಟ್‌ಗಳು ಪತ್ತೆಯಾಗಿವೆ.

ಅಲ್ಲದೆ, ಭಾರತೀಯ ಸೇನಾ ಯೋಧರನ್ನು ಕೂಡ ವಿರೋಧಿಸಬೇಕಿದೆ. ಅವರು ಮುಸ್ಲಿಂ ವಿರೋಧಿಗಳು, ದೇಶದ ಗಡಿರಾಜ್ಯಗಳಲ್ಲಿ ಸಮುದಾಯದ ಮಹಿಳೆಯರು, ಮಕ್ಕಳು, ಹಿರಿಯರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಮತ್ತೂಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಹಿಂದೂ ಮುಖಂಡರ ವಿಡಿಯೋ ಪತ್ತೆ
ವಾಟ್ಸ್‌ಆ್ಯಪ್‌ಗಳಲ್ಲಿ ಹಿಂದೂ ಮುಖಂಡರ ಪ್ರಚೋದನಾಕಾರಿ ಹೇಳಿಕೆ ವಿಡಿಯೋಗಳ ಜತೆಗೆ, 2016ರಿಂದ ಇದುವರೆಗೂ ಪಿಎಫ್ಐ ಸಂಘಟನೆ ಕಾರ್ಯಕರ್ತರಿಂದ ಹತ್ಯೆಗೀಡಾದ ಹಿಂದೂ ಮುಖಂಡರ ಫೋಟೋಗಳು ಪತ್ತೆಯಾಗಿವೆ. ಅವುಗಳನ್ನು ತೋರಿಸಿ, 2016ರಂತೆ ಈಗಲೂ ಸಮುದಾಯದವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ. ಸಮುದಾಯದ ವಿರುದ್ಧ ಮಾತನಾಡುವ ಹಿಂದೂ ಮುಖಂಡರು, ಅವರಿಗೆ ಸಹಕಾರ ನೀಡುವ ಪೊಲೀಸರು ಹಾಗೂ ಇತರೆ ವರ್ಗದ ವ್ಯಕ್ತಿಗಳ ಹತ್ಯೆ ಮಾಡಬೇಕಿದೆ ಎಂದು ಪ್ರಜೋದಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next