ಇಸ್ಲಾಮಾಬಾದ್: ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನಿವಾಸದ ಬಳಿ ಬುಧವಾರ(ಜೂನ್ 23) ಸ್ಫೋಟ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಇದನ್ನೂ ಓದಿ:ಕೋವಿಡ್ 3ನೇ ಅಲೆ ತಡೆಯಲು ಜಾಗರೂಕತೆ ಮುಖ್ಯ: ಸಚಿವ ಜಗದೀಶ ಶೆಟ್ಟರ್
ವರದಿಗಳ ಪ್ರಕಾರ, ಇದೊಂದು ಗ್ಯಾಸ್ ಪೈಪ್ ಲೈನ್ ಸ್ಫೋಟದಂತಿದೆ ಎಂದು ತಿಳಿಸಿದ್ದು, ಅಂದಾಜು ಬೆಳಗ್ಗೆ 11ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿರುವುದಾಗಿ ಹೇಳಿದೆ. ಮತ್ತೊಂದು ವರದಿಯ ಪ್ರಕಾರ, ಈ ಸ್ಫೋಟ ಲಾಹೋರ್ ನ ಜೋಹಾರ್ ನಗರದ ಆಸ್ಪತ್ರೆ ಸಮೀಪ ಸ್ಫೋಟ ಸಂಭವಿಸಿರುವುದಾಗಿ ತಿಳಿಸಿದೆ.
ಸ್ಫೋಟ ಸಂಭವಿಸಲು ನಿಖರವಾದ ಕಾರಣದ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಫೋಟದಿಂದ ಸ್ಥಳೀಯ ಮನೆಗಳ ಕಿಟಕಿ ಗಾಜುಗಳು ಪುಡಿ, ಪುಡಿಯಾಗಿರುವುದಾಗಿ ತಿಳಿಸಿದ್ದಾರೆ. ಸ್ಫೋಟದ ಸದ್ದು ಭೀಕರವಾಗಿದ್ದು, ಇದು ಹಲವು ಕಿಲೋ ಮೀಟರ್ ವರೆಗೆ ಕೇಳಿಸಿರುವುದಾಗಿ ವರದಿ ವಿವರಿಸಿದೆ.
ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಆಕ್ರಮಿತ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬುಝದಾರ್ ಅವರು ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಬಳಿ ವರದಿ ನೀಡುವಂತೆ ಸೂಚಿಸಿದ್ದಾರೆ.
Photo credit: zeenews