ಬೋಧ್‌ಗಯಾ: ಬಿಹಾರದ ಬೋಧ್‌ಗಯಾದಲ್ಲಿರುವ ಬೃಹತ್ ತರಕಾರಿ ಮಾರುಕಟ್ಟೆಯೊಂದಕ್ಕೆ ಬೆಂಕಿ ಬಿದ್ದು ಸುಮಾರು 115 ಕ್ಕು ಹೆಚ್ಚು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ಮಂಗಳವಾರ ನಡೆದಿದೆ.
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕ್ಷಣಾರ್ಧದಲ್ಲೇ ಮಾರುಕಟ್ಟೆಯಲ್ಲಿರುವ ಅಂಗಡಿಗಳು ಹೊತ್ತಿ ಉರಿದಿದ್ದು ಸ್ಥಳದಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್‌ಗಳೂ ಸ್ಪೋಟಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ಧಾರೆ.
`ನಿಧಾನವಾಗಿ ಹರಡುತ್ತಿದ್ದ ಬೆಂಕಿ ಸಿಲಿಂಡರ್‌ಗಳು ಸ್ಪೋಟಗೊಂಡ ಬಳಿಕ ಭೀಕರವಾಗಿ ಹರಡಿತು. ಸುಮಾರು 115 ರಿಂದ 117 ಅಂಗಡಿಗಳು ಸುಟ್ಟು ಭಸ್ಮವಾಗಿದ್ದು, 6-7 ಬೈಕುಗಳೂ ಕರಕಲಾಗಿದೆ. ಲಕ್ಷಾಂತರ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳವೂ ಸ್ಥಳ ತಲುಪುವಾಗ ತಡ ಮಾಡಿತ್ತುʼ ಎಂದು ಸ್ಥಳಿಯರೊಬ್ಬರು ಹೇಳಿದ್ದಾರೆ.
ವಿಷಯ ತಿಳಿದರೂ ತಕ್ಷಣ ಸ್ಥಳಕ್ಕೆ ಬಾರದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಿಯರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.
ʻಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲವಾದರೂ ಲಕ್ಷಾಂತರ ರೂ. ನಷ್ಟವಾಗಿದ್ದು, ಘಟನೆಗೆ ಕಾರಣವೇನು ಎಂಬುವುದು ತನಿಖೆ ಬಳಿಕವಷ್ಟೇ ಖಚಿತವಾಗಿ ಹೇಳಬಹುದಾಗಿದೆʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.