Advertisement

ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸ್ಫೋಟ: ಓರ್ವ ವ್ಯಕ್ತಿಗೆ ಗಾಯ

11:25 AM May 31, 2017 | udayavani editorial |

ಶ್ರೀನಗರ : ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಸಂಭವಿಸಿದ ಸ್ಫೋಟದಲ್ಲಿ ವ್ಯಕ್ತಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಪುಲ್ವಾಮಾ ಜಿಲ್ಲೆಯ ಡಾಲೀಪುರದಲ್ಲಿ ರಸ್ತೆ ಬದಿಯಲ್ಲಿ ಅಪರಿಚಿತ ಸ್ಫೋಟಕ ಬಿದ್ದುಕೊಂಡಿರುವುದನ್ನು ಗುಲಾಮ್‌ ಮೊಹಿಯುದ್ದೀನ್‌ ಶಾ (45) ಎಂಬವರು ಪತ್ತೆ ಹಚ್ಚಿದರು. ಕುತೂಹಲದಿಂದ ಆತ ಅದನ್ನು ಮುಟ್ಟಿ ತಟ್ಟಿ ನೋಡುತ್ತಿದ್ದಂತೆಯೇ ಅದು ಸ್ಫೋಟಗೊಂಡಿತು. ಪರಿಣಾಮವಾಗಿ ಆತ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುವನ್ನು ಒಡನೆಯೇ ಸ್ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿ ಅಲ್ಲಿ ಅವರ ಸ್ಥಿತಿ ಸ್ಥಿರವಾಗಿರುವುದಾಗಿ ತಿಳಿದುಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next