Advertisement

ಮುಂಬಯಿನ ಪಾಲ್ಘರ್‌‌ನಲ್ಲಿ ಭಾರೀ ಸ್ಫೋಟ; ಒಂದು ಸಾವು

09:17 PM Aug 17, 2020 | Karthik A |

ಮುಂಬಯಿ: ಇಲ್ಲಿನ ಪಾಲ್ಘರ್‌ನಲ್ಲಿ ಸೋಮವಾರ ಸಂಜೆ ದೊಡ್ಡ ಅಪಘಾತ ಸಂಭವಿಸಿದೆ.

Advertisement

ತಾರಾಪುರ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, 3 ಮಂದಿ ಗಾಯಗೊಂಡಿದ್ದಾರೆ ಎಂದು ಪಾಲ್ಘರ್ ‌ ಕಲೆಕ್ಟರ್‌ ಕೈಲಾಶ್‌ ಶಿಂಧೆ ತಿಳಿಸಿದ್ದಾರೆ.

ಈ ಸ್ಫೋಟದ ಶಬ್ದ ಸಲ್ವಾರ್‌, ಪಾಠಲ್‌, ಬೋಯಿಸಾರ್‌, ತಾರಾಪುರ ಮತ್ತು ಹತ್ತಿರದ ಹಳ್ಳಿಗಳಿಗೆ‌ 10 ಕಿ.ಮೀ ದೂರದಲ್ಲಿ ಕೇಳಿಬಂದಿದೆ. ಕೆಲವು ವರದಿಗಳ ಪ್ರಕಾರ, ಈ ಸ್ಫೋಟದ ನಂತರ ಹಲವಾರು ಕಿಲೋಮೀಟರ್‌ ಪ್ರದೇಶದಲ್ಲಿ ಅನಿಲ ಸೋರಿಕೆ ಸಂಭವಿಸಿದೆ. ರಾಸಾಯನಿಕ ಕ್ರಿಯೆಯಿಂದಾಗಿ ಕೈಗಾರಿಕಾ ಪ್ರದೇಶದ ಕೆಟಿ ವಲಯದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಜನವರಿ ಬಳಿಕ ಎರಡನೇ ಸ್ಫೋಟ
ಜನವರಿಯಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ, 7 ಮಂದಿ ಸಾವನ್ನಪ್ಪಿದ್ದರು. ಈ ವರ್ಷದ ಜನವರಿಯಲ್ಲಿ ಪಾಲ್ಘರ್‌‌ ಜಿಲ್ಲೆಯ ಕೊಲ್ವಾಡೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿತ್ತು. ಈ ದುರ್ಘ‌ಟನೆಯಲ್ಲಿ 7 ಜನರು ಸಾವನ್ನಪ್ಪಿ 4 ಜನರು ಗಾಯಗೊಂಡಿದ್ದರು. ರಾಸಾಯನಿಕ ಪರೀಕ್ಷೆಯ ಸಮಯದಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಕಟ್ಟಡ ಕುಸಿದಿತ್ತು. ಇದರ ಪ್ರತಿಧ್ವನಿಯೂ 15 ಕಿಲೋ ಮೀಟರ್‌ ದೂರ ಕೇಳಿತ್ತು.

Advertisement

 

 

 

 

Advertisement

Udayavani is now on Telegram. Click here to join our channel and stay updated with the latest news.

Next