Advertisement

Allahabad: ಹಾಸ್ಟೆಲ್‌ ರೂಮ್‌ನಲ್ಲಿ ಅಕ್ರಮ ಬಾಂಬ್‌ ತಯಾರಿಕೆ ವೇಳೆ ಸ್ಫೋಟ- ಗಂಭೀರ ಗಾಯ

09:02 PM Dec 14, 2023 | Team Udayavani |

ಅಲಹಾಬಾದ್‌: ಅಲಹಾಬಾದ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್‌ ರೂಮ್‌ನಲ್ಲಿ ಅಕ್ರಮವಾಗಿ ಬಾಂಬ್‌ ತಯಾರಿಸುತ್ತಿದ್ದ ವೇಳೆ ಬಾಂಬ್‌ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿರುವುದು ವರದಿಯಾಗಿದೆ. ವಿವಿಯ ಎಂಎ ವಿದ್ಯಾರ್ಥಿಯಾಗಿರುವ ಪ್ರಭಾತ್‌ ಯಾದವ್‌ ಪಿಸಿ ಬ್ಯಾನರ್ಜಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ.

Advertisement

ಬುಧವಾರ ಸಂಜೆ ಆತ ರೂಮ್‌ನಲ್ಲಿ ಬಾಂಬ್‌ ತಯಾರಿಸುತ್ತಿದ್ದಾಗ ಆತನ ಕೈನಲ್ಲಿಯೇ ಬಾಂಬ್‌ ಸ್ಫೋಟಗೊಂಡಿದೆ. ಘಟನೆಯಲ್ಲಿ ಮತ್ತೂಬ್ಬ ವಿದ್ಯಾರ್ಥಿಯೂ ಗಾಯಗೊಂಡಿದ್ದಾನೆ. ಇಬ್ಬರನ್ನೂ ಚಿಕಿತ್ಸೆಗಾಗಿ ಎಸ್‌ಆರ್‌ಎನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next