Advertisement
ಕಳೆದ ದಶಕದಲ್ಲಿ ಸಮಾಜದ ಸ್ಥಾನವು ನಾಟಕೀಯವಾಗಿ ಬದಲಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಪುರುಷರಿಂದ ಶೋಷಣೆಗೆ ಒಳಗಾಗುತ್ತಿದ್ದರು. ಆದರೆ ಈ ಆಧುನಿಕ ಯುಗದಲ್ಲಿ ಮಹಿಳಾ ಸಬಲೀಕರಣ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಕೆಲವು ಮಹಿಳೆಯರು ಸಹ ಪುರುಷರನ್ನು ತಮ್ಮ ಸಂಗಾತಿಗಳನ್ನು ನಿರಂತರವಾಗಿ ಶೋಷಣೆಗೆ ಒಳಪಡಿಸುತ್ತಿದ್ದಾರೆ. ಕೌಟುಂಬಿಕ ನೆಲೆಗಟ್ಟಿನಲ್ಲಿ ಭಾವನಾತ್ಮಕವಾಗಿ ಬಲಿಪಶು ಮಾಡುತ್ತಿದ್ದಾರೆ.
Related Articles
Advertisement
ಭಾರತದಲ್ಲಿ ಪುರುಷರು ಮಹಿಳೆಯರಿಂದ ವಿವಿಧ ರೀತಿಯ ಕ್ರೌರ್ಯಗಳನ್ನು ಎದುರಿಸುತ್ತಿದ್ದಾರೆ ಎಂಬ ಅಂಶವನ್ನು ನಾನು ಈಗಾಗಲೇ ಹೇಳಿದೆ. ಆದರೆ ಇಲ್ಲಿ ದೈಹಿಕ ದೌರ್ಜನ್ಯದ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಬದಲಾಗಿ ಭಾವನಾತ್ಮಕ ತಂತ್ರಗಳಿಗೆ ಒಳಗಾಗುತ್ತಿದ್ದಾರೆ. ಕುಟುಂಬ ಸುಗಮವಾಗಿ ಸಾಗಲು ಸ್ತ್ರೀ ಪಾಲುದಾರಿಕೆ ಹೆಚ್ಚಿನದಾಗಿದೆ. ಪತಿಯಂದಿರು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ನಿಂದಿಸುವದು ಮಾನಸಿಕವಾಗಿ ಜರ್ಜರಿತರಾಗುವಂತೆ ಮಾಡುವದು. ತಮ್ಮ ಪೋಷಕರೊಡಗೂಡಿ ಪ್ರತ್ಯೇಕ ನಿವಾಸದ ಬೇಡಿಕೆ, ಸುಳ್ಳು ಕೇಸುಗಳ ಮೂಲಕ ಪೋಲಿಸ್ ಕ್ರಮದ ಬೆದರಿಕೆ, ಪತಿಯನ್ನು ಅವರ ತಂದೆ ತಾಯಿಯರ ಸಂಪರ್ಕದಿಂದ ದೂರ ಮಾಡುವದು, ಮತ್ತು ಅವರನ್ನು ಮನೆಯಂದಾಚೆ ಹಾಕಲು ಪ್ರಯತ್ನಿಸುವದು ಇತ್ಯಾದಿ.
ಇನ್ನು ಪತಿಯು ತನ್ನ ಕೋರಿಕೆಯನ್ನು ಈಡೇರಿಸದೇ ಇದ್ದಲ್ಲಿ, ಚುಚ್ಚು ಮಾತುಗಳ ಮೂಲಕ ಅವರನ್ನು ಹಿಂಸಿಸುವದು. ಪುರುಷ ಸಂಗತಿಗಳನ್ನು ಅವಹೇಳನಕಾರಿ ಹೆಸರುಗಳಿಂದ ಕರೆಯುವದು, ಕೀಳರಿಮೆ ಮೂಡಿಸಲು ನೋಯಿಸುವ ಉದ್ದೇಶದಿಂದ ದುರ್ಬಲರು, ನಪುಂಸಕ ಹೆಸರಿನಿಂದ ಕರೆಯುವದು ಇತ್ಯಾದಿ. ಇನ್ನು ಪತಿ ಪತ್ನಿ ಪ್ರತ್ಯೇಕವಾಗುವ ಅನಿವಾರ್ಯತೆ ಎದುರಾದ ಸಂದರ್ಭಗಳಲ್ಲಿ ತನ್ನದೇ ಸ್ವಂತ ಮಗುವಿನ ಪಾಲನೆಯನ್ನು ನಿರಾಕರಿಸುವದು ಇತ್ಯಾದಿಗಳನ್ನು ಸಾಮಾನ್ಯ ಉದಾಹರಣೆಯಾಗಿ ನೀಡಬಹುದು.
ಸ್ಟೇಟಸ್ ಪ್ರೆಸ್ಟೀಜ್ ಗಳಿಗೆ ಮೊರೆ ಹೋಗುವ ಮಹಿಳೆಯರು ಪತಿಯಂದಿರನ್ನು ಆರ್ಥಿಕವಾಗಿ ಹಿಂಸೆ ಮಾಡುತ್ತಿದ್ದಾರೆ. ಸಂಗಾತಿಗಳ ಮೇಲೆ ನಿರಂತರವಾದ ಬೇಡಿಕೆಗಳನ್ನು ಇಡುವುದು. ದುಬಾರಿ ಬೆಲೆಯ ಆಭರಣಗಳು ಬಟ್ಟೆಗಳು ವಾಹನಗಳು ಮನೆಗಳ ಖರೀದಿ, ಹೀಗೆ ಹಣಕಾಸಿನ ಬೇಡಿಕೆಗಳಿಗೆ ಅಧಿಕವಾಗಿ ಪುರುಷ ಸಂಗಾತಿಗಳು ತುತ್ತಾಗುತ್ತಿದ್ದಾರೆ.
ಮೊದಲಿನಿಂದಲೂ ಸ್ತ್ರೀ ವರ್ಗದವರು ಪುರುಷರಿಂದ ಹೆಚ್ಚಾಗಿ ದೈಹಿಕ ಶೋಷಣೆಗೆ ಒಳಪಟ್ಟಿದ್ದಾರೆ. ಆದರೆ ಕಾನೂನುಗಳು ಮಹಿಳೆಯರಿಗೆ ಸುರಕ್ಷಿತತೆ ನಿರ್ಮಿಸಿಕೊಟ್ಟಿದ್ದು ಇವರ ಪಾಲಿಗೆ ವರದಾನವಾಗಿದೆ. ಆದರೆ ಕೆಲವು ಸ್ತ್ರೀಯರು ತಮಗಾಗಿಯೇ ಇರುವ ಕಾನೂನುಗಳ ಬಲ ಪಡೆದು, ಅದರ ಅಡಿಯಲ್ಲಿ ಸಂಗತಿಗಳ ಮೇಲೆ ವರದಕ್ಷಿಣೆ ಕಿರುಕುಳ ಇತ್ಯಾದಿ ಕೌಟುಂಬಿಕ ದೌರ್ಜನ್ಯ ಆರೋಪಗಳನ್ನು ದಾಖಲಿಸುವುದು, ಸೆರಮನೆಗೆ ಅಟ್ಟಲು ಪ್ರಯತ್ನಿಸುವದು… ಹೀಗೆ ಕಾನೂನಿನ ಅಡಿಯಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ .
ಇತ್ತೀಚೆಗೆ ಮಾತೆತ್ತಿದರೇ ಡೈವೋರ್ಸ್ ಅಸ್ತ್ರವನ್ನೇ ಡೈರೆಕ್ಟ್ ಆಗಿ ಮಹಿಳಾಮಣಿಯರು ಪ್ರಯೋಗ ಮಾಡುತ್ತಿದ್ದಾರೆ. ಭಾವನಾತ್ಮಕವಾಗಿ ಶೋಷಣೆ ಮಾಡಿ ಆರ್ಥಿಕವಾಗಿ ಪಾಲು ಪಡೆಯಲು ಪಯತ್ನ, ಸಾಮಾಜಿಕ ಸಂಬಂಧಗಳನ್ನು ಹಾಳುಗೆಡುವ ಹೊಸ ಟ್ರೆಂಡ್ ಶುರುವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಪುರುಷರು ಜಾಸ್ತಿ ಶೋಷಿತರಾಗುತ್ತದ್ದಾರೋ ಮಹಿಳೆಯರೋ ಅನ್ನುವದು ನ್ಯಾಯ ಸಮ್ಮತವಲ್ಲ. ಅಂದಿನಿಂದ ಇಂದಿನವರೆಗೂ ಹೇಗೆ ನೋಡಿದರೂ ಸಮಸ್ತ ದುರ್ಬಲ ಸ್ರೀ ವರ್ಗ ಪುರುಷ ಪ್ರಧಾನ ಸಮಾಜದಿಂದ ಶೋಷಿತವಾಗಿದ್ದು ಜಾಸ್ತಿ. ಹೊಸದಾಗಿ ಶುರುವಾಗಿರುವ ಆಧುನಿಕ ಟ್ರೆಂಡ್ ನಲ್ಲಿ ಕಾನೂನುಗಳ ಮೊರೆ ಹೋಗಿ ಮಹಿಳೆಯರ ಹಕ್ಕುಗಳ ದುರುಪಯೋಗವಾಗುತ್ತಿರುವುದು ಮಾತ್ರ ವಾಸ್ತವ.
ಪುರುಷರ ಮೇಲಿನ ನಿಂದನೆ ನಗುವ ವಿಷಯವಲ್ಲ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ನಡೆಯುವ ಸಭೆಗಳಲ್ಲಿ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ನಮಗೆ ಆಗುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.– ಶ್ವೇತಾ ಪ್ರಸನ್ನ ಹೆಗಡೆ, ಶಿರಸಿ