Advertisement

Fentanyl ಇಂಜೆಕ್ಷನ್‌ ನಿಂದ 70 ಸಾವಿರ ಜನರ ಸಾವು; ನಿಷೇಧಕ್ಕೆ ಚೀನಾ ಒಪ್ಪಂದ…ಏನಿದು?

02:54 PM Nov 16, 2023 | Team Udayavani |

ವಾಷಿಂಗ್ಟನ್:‌ ಕಳೆದ ವರ್ಷ ಅಮೆರಿಕದಲ್ಲಿ ಸುಮಾರು 70, 000 ಸಾವಿರ ಜನರ ಸಾವಿಗೆ ಕಾರಣವಾಗಿದ್ದ ಫೆಂಟಾನಿಲ್‌ ಸಿಂಥೆಟಿಕ್‌ ಇಂಜೆಕ್ಷನ್‌/ಮಾತ್ರೆ ಬಳಕೆಯನ್ನು ನಿಗ್ರಹಿಸಲು ಚೀನಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಬುಧವಾರ (ನವೆಂಬರ್‌ 15) ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಎಲ್ಲರ ಕೈಗೆ ಸಿಕ್ಕರೆ ಖಂಡಿತ… ರಶ್ಮಿಕಾ Deepfake ವಿಡಿಯೋ ಬಗ್ಗೆ ರಕ್ಷಿತ್‌ ಮಾತು

ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆದ ಏಷ್ಯಾ ಪೆಸಿಫಿಕ್‌ ಎಕಾನಾಮಿಕ್‌ ಕಾರ್ಪೋರೇಶನ್‌ ಶೃಂಗದಲ್ಲಿ ಬೈಡೆನ್‌ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರನ್ನು ಭೇಟಿಯಾಗಿ ಸೇನಾ ಸಂಪರ್ಕ, ಎಐ ಮತ್ತು ತೈವಾನ್‌ ಕುರಿತ ವಿಷಯಗಳ ಬಗ್ಗೆ ದೀರ್ಘ ಸಮಾಲೋಚನೆ ನಡೆಸಿರುವುದಾಗಿ ವರದಿ ವಿವರಿಸಿದೆ.

ಈ ಸಂದರ್ಭದಲ್ಲಿ ನೋವು ನಿವಾರಕ ಫೆಂಟಾನಿಲ್‌ ಕುರಿತು ಚರ್ಚೆ ನಡೆದಿತ್ತು. ಬೈಡೆನ್‌ ಮತ್ತು ಕ್ಸಿ ಮಾತುಕತೆಗೆ ಆಯ್ದುಕೊಂಡ ಸ್ಥಳ ಮಹತ್ವದ್ದಾಗಿತ್ತು. ಯಾಕೆಂದರೆ 2023ರಲ್ಲಿ ಈವರೆಗೆ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಫೆಂಟಾನಿಲ್‌ ಗೆ ಸಂಬಂಧಿಸಿದಂತೆ 600 ಅಧಿಕ ಮಂದಿ ಕೊನೆಯುಸಿರೆಳೆದಿದ್ದರು. ಫೆಂಟಾನಿಲ್‌ ಸಿಂಥೆಟಿಕ್‌ ನೋವು ನಿವಾರಕ ಇಂಜೆಕ್ಷನ್ ಒವರ್‌ ಡೋಸ್‌ ನಿಂದಾಗಿ ಅಮೆರಿಕದಲ್ಲಿ ವರ್ಷಕ್ಕೆ ಸಾವಿರಾರು ಮಂದಿ ಸಾವಿಗೀಡಾಗುತ್ತಿರುವುದಾಗಿ ವರದಿ ತಿಳಿಸಿದೆ.

ಅಮೆರಿಕ-ಚೀನಾ ಫೆಂಟಾನಿಲ್‌ ಒಪ್ಪಂದ:

Advertisement

ಫೆಂಟಾನಿಲ್‌ ತಯಾರಿಕೆ ಹಾಗೂ ರಫ್ತುತಡೆಯಲು ಬೀಜಿಂಗ್‌ ಒಪ್ಪಿಕೊಂಡಿರುವುದಾಗಿ ಬೈಡೆನ್‌ ತಿಳಿಸಿದ್ದು, ಇದೊಂದು ಜೀವ ಉಳಿಸುವ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಚೀನಾದ ಬದ್ಧತೆಯನ್ನು ಶ್ಲಾಘನೀಯವಾದದ್ದು ಎಂದು ಬೈಡೆನ್‌ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ನೂತನ ಒಪ್ಪಂದದ ಪ್ರಕಾರ ಚೀನಾ ಫೆಂಟಾನಿಲ್‌ ತಯಾರಿಕಾ ಕಂಪನಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏತನ್ಮಧ್ಯೆ ಈ ವಿಚಾರದಲ್ಲಿ ಅಮೆರಿಕ ವಿಶ್ವಾಸ ಇಡಲಿದೆ ಆದರೆ ಫೆಂಟಾನಿಲ್‌ ವಿರುದ್ಧದ ಚೀನಾದ ಕ್ರಮವನ್ನು ಪರಿಶೀಲಿಸಲಿದೆ ಎಂದು ಬೈಡೆನ್‌ ತಿಳಿಸಿದ್ದಾರೆ.

ಜಾಗತಿಕ ಮಟ್ಟದ ಅಕ್ರಮ ಔಷಧಗಳ ಸಾಕಾಣಿಕೆಯನ್ನು ನಿಗ್ರಹಿಸಲು ಜಂಟಿ ಹೋರಾಟದ ಅಗತ್ಯವಿದೆ. ಇದರೊಂದಿಗೆ ನಾರ್ಕೋಟಿಕ್ಸ್‌ ವಿಷಯವನ್ನು ಕೂಡಾ ಪೊಲೀಸ್‌ ಕಾರ್ಯಾಚರಣೆ ಮೂಲಕ ತಡೆಗಟ್ಟಲು ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದು ಶ್ವೇತಭವನದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next